ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಸಫಾರಿ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಜನವರಿ 26ರಂದು ಬಿಡುಗಡೆಗೊಂಡ ಈ ಎಸ್‌ಯುವಿಯ ಮಾರಾಟವನ್ನು ಫೆಬ್ರವರಿ 22ರಿಂದ ಆರಂಭಿಸಲಾಯಿತು.

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿಯ ಎಂಟ್ರಿ ಲೆವೆಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.21.45 ಲಕ್ಷಗಳಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಎಸ್‌ಯುವಿಯನ್ನು ತನ್ನ ಜನಪ್ರಿಯ ಹ್ಯಾರಿಯರ್ ಮಾದರಿಯು ತಯಾರಾದ ಇಂಪ್ಯಾಕ್ಟ್ ಡಿಸೈನ್ 2.0ನಲ್ಲಿಯೇ ಉತ್ಪಾದಿಸಿದೆ.

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಈ ಎಸ್‌ಯುವಿಯನ್ನು ಒಮೆಗಾ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. ಈ ಕಾರಣಕ್ಕೆ ಈ ಎಸ್‌ಯುವಿಯಲ್ಲಿ ಹ್ಯಾರಿಯರ್ ಕಾರಿನಲ್ಲಿರುವಂತಹ ಕೆಲವು ಫೀಚರ್'ಗಳನ್ನು ಕಾಣಬಹುದು. ಟಾಟಾ ಮೋಟಾರ್ಸ್ ಒಂದೇ ದಿನದಲ್ಲಿ ಈ ವಿಶಿಷ್ಟ ಎಸ್‌ಯುವಿಯ 100 ಯುನಿಟ್'ಗಳನ್ನು ವಿತರಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಅದೂ ಸಹ ಒಂದೇ ನಗರದಲ್ಲಿ ಇಷ್ಟೊಂದು ಯುನಿಟ್'ಗಳನ್ನು ವಿತರಿಸಿರುವುದು ಗಮನಾರ್ಹ. ಟಾಟಾ ಮೋಟಾರ್ಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ ಸಫಾರಿ ಎಸ್‌ಯುವಿಯ 100 ಯುನಿಟ್'ಗಳನ್ನು ವಿತರಿಸಿದೆ.

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಹಿಂದೊಮ್ಮೆ ಟಾಟಾ ಸಫಾರಿ ದೇಶದ ರಾಜಕಾರಣಿಗಳ ನೆಚ್ಚಿನ ವಾಹನಗಳಲ್ಲಿ ಒಂದಾಗಿತ್ತು. ಕೆಲವು ಕಾರಣಗಳಿಗಾಗಿ ಈ ಎಸ್‌ಯುವಿಯ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಈಗ ಮತ್ತೊಮ್ಮೆ ಹೊಸ ನೋಟ ಹಾಗೂ ಹೊಸ ವಿನ್ಯಾಸದಲ್ಲಿ ಸಫಾರಿ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯಲ್ಲಿ ಅಳವಡಿಸಿರುವ 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್‌ 167 ಬಿ‌ಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಗೇರ್‌ಬಾಕ್ಸ್‌ ಆಯ್ಕೆಗಳಿಗಾಗಿ ಈ ಎಸ್‌ಯುವಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಈ ಎಸ್‌ಯುವಿಯು 8.8-ಇಂಚಿನ ಟಚ್‌ಸ್ಕ್ರೀನ್, ಪನೋರಾಮಿಕ್ ಸನ್‌ರೂಫ್, ಆಯ್'ಸ್ಟರ್ ವೈಟ್ ಇಂಟಿರಿಯರ್, 9 ಜೆಬಿಎಲ್ ಸ್ಪೀಕರ್‌ ಹಾಗೂ 7 ಇಂಚಿನ ಟಿಎಫ್‌ಟಿ ಸ್ಕ್ರೀನ್'ಗಳನ್ನು ಹೊಂದಿದೆ.

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ಈ ಎಸ್‌ಯುವಿಯು ವಿವಿಧ ಐಷಾರಾಮಿ ಹಾಗೂ ವಿಶೇಷ ಫೀಚರ್'ಗಳಿಂದಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಟಾಟಾ ಮೋಟಾರ್ಸ್ ಕಳೆದ ತಿಂಗಳು4ನೇ ತಾರೀಖಿನಿಂದ ಈ ಎಸ್‌ಯುವಿಯ ಬುಕ್ಕಿಂಗ್'ಗಳನ್ನು ಆರಂಭಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಂದೇ ದಿನ ಒಂದೇ ನಗರದಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್ ವಿತರಿಸಿದ ಟಾಟಾ ಮೋಟಾರ್ಸ್

ರೂ.30 ಸಾವಿರ ಮುಂಗಡ ಹಣ ಪಾವತಿಸಿ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಬಹುದು. ಒಂದೇ ದಿನ ರಾಷ್ಟ್ರ ರಾಜಧಾನಿಯಲ್ಲಿ ಸಫಾರಿ ಎಸ್‌ಯುವಿಯ 100 ಯುನಿಟ್'ಗಳನ್ನು ವಿತರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Most Read Articles

Kannada
English summary
Tata Motors delivers 100 units of new Safari SUV in a single day. Read in Kannada.
Story first published: Tuesday, March 2, 2021, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X