ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್(Tata Motors) ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಶೂನ್ಯ-ಹೊರಸೂಸುವಿಕೆಯ ಎಲೆಕ್ಟ್ರಿಕ್ ಬಸ್‍ ಮಾರಾಟದಲ್ಲಿ ಮಹತ್ವದ ಮುನ್ನಡೆ ಸಾಧಿಸುತ್ತಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ವಿವಿಧ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಹೊಸ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿವೆ. ಗುಜರಾತ್ ಸರ್ಕಾರವು ಸಹ ಹೊಸ ಇವಿ ವಾಹನ ನೀತಿಯನ್ನು ಪ್ರಕಟಿಸಿದ್ದು, ಹೊಸ ಇವಿ ವಾಹನಗಳನ್ನು ಖರೀದಿಸುವವರಿಗಾಗಿ ಭಾರೀ ಪ್ರಮಾಣದ ಸಬ್ಸಡಿ ಆರಂಭಿಸಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ವ್ಯಯಕ್ತಿಕ ಇವಿ ವಾಹನಗಳ ಬದಲಾವಣೆಗಾಗಿ ಮಾತ್ರ ಸಾರ್ವಜನಿಕ ಸಾರಿಗೆ ವಾಹನಗಳ ಸಂಖ್ಯೆಯಲ್ಲೂ ಮಹತ್ವದ ಬದಲಾವಣೆ ತರುತ್ತಿರುವ ಗುಜರಾತ್ ಸರ್ಕಾರವು ಹೊಸ ನೀತಿ ಅಡಿಯಲ್ಲಿ ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುತ್ತಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಗುಜರಾತ್ ಸರ್ಕಾರದ ಬೇಡಿಕೆ ಅನ್ವಯ ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಅಹಮದಾಬಾದ್ ಜನಮಾರ್ಗ್ ಲಿಮಿಟೆಡ್(AJL) ಸಂಸ್ಥೆಗೆ 60 ಅತ್ಯುತ್ತಮ ದರ್ಜೆಯ ಎಲೆಕ್ಟ್ರಿಕ್ ಬಸ್‍ಗಳನ್ನು ವಿತರಿಸಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

24 ಆಸನಗಳೊಂದಿಗೆ ಶೂನ್ಯ-ಹೊರಸೂಸುವಿಕೆ ವೈಶಿಷ್ಟ್ಯತೆ ಹೊಂದಿರುವ ಹೊಸ ಬಸ್‍ಗಳನ್ನು ಟಾಟಾ ಕಂಪನಿಯು ಎಜೆಎಲ್‌ನೊಂದಿಗೆ ಒಟ್ಟು ವೆಚ್ಚದ ಒಪ್ಪಂದದ(ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್) ಮೂಲಕ ಫೇಮ್ 2 ಉಪಕ್ರಮದ ಅಡಿಯಲ್ಲಿ ಸರಬರಾಜು ಮಾಡಲಾಗಿದ್ದು, ಅಹಮದಾಬಾದ್‍ನ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ಕಾರಿಡಾರ್‌ನಲ್ಲಿ ಚಲಿಸಲಿವೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಅಲ್ಟ್ರಾ ಅರ್ಬನ್ ಎಲೆಕ್ಟ್ರಿಕ್ ಬಸ್‍ಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸಹ ಸ್ಥಾಪಿಸಿದ್ದು, ಸಂಪೂರ್ಣ-ವಿದ್ಯುತ್ ಡ್ರೈವ್‍ಟ್ರೇನ್‍ನೊಂದಿಗೆ 318 ಬಿಎಚ್‌ಪಿ ಮತ್ತು 3000 ಎನ್ಎಂ ಗರಿಷ್ಠ ಟಾರ್ಕ್‍ ಉತ್ಪಾದನಾ ಶಕ್ತಿ ಹೊಂದಿವೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಅಲ್ಟ್ರಾ ಅರ್ಬನ್ ಎಲೆಕ್ಟ್ರಿಕ್ ಬಸ್‍ಗಳು ನ್ಯೂ ಜನರೇಷನ್ ಟೆಲಿಮ್ಯಾಟಿಕ್ಸ್ ಮತ್ತು ಹೆಚ್ಚಿನ-ಸುರಕ್ಷತಾ ಇಂಟೆಲಿಜೆಂಟ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್ (ಐಟಿಎಸ್) ಒಳಗೊಂಡಿದ್ದು, ವಿಶಾಲವಾದ ಒಳಾಂಗಣದೊಂದಿಗೆ ಅರಾಮದಾಯಕವಾದ ಆಸನ ಸೌಲಭ್ಯ ಹೊಂದಿವೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಕ್ಲಚ್ ಮತ್ತು ಗೇರ್ ಶಿಫ್ಟಿಂಗ್ ಇಲ್ಲದೆ ಆರಾಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಇವಿ ಬಸ್‌ಗಳು ಸಮರ್ಥ ಕಾರ್ಯಾಚರಣೆಗಾಗಿ ರಿಜನರೇಟಿಂಗ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಅಪ್ಲಿಕೇಶನ್ ಮತ್ತು ನಿಯಮಗಳ ಪ್ರಕಾರ ಕಸ್ಟಮೈಸ್ ಮಾಡಬಹುದಾದ ಸೌಲಭ್ಯ ಈ ಬಸ್‌ನಲ್ಲಿವೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಟಾಟಾ ಮೋಟಾರ್ಸ್ ಕಂಪನಿಯು ಹೊಸದಾಗಿ ನಿರ್ಮಾಣ ಮಾಡಿರುವ ಅಲ್ಟ್ರಾ ಅರ್ಬನ್ ಬಸ್‌ಗಳು ಪ್ರತಿ ಚಾರ್ಜ್‌ಗೆ 150 ಕಿ.ಮೀ 180 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕಂಪನಿಯು ಇದುವರೆಗೆ ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗೆ 600ಕ್ಕೂ ಹೆಚ್ಚು ಇವಿ ಬಸ್‌ಗಳನ್ನು ಒದಗಿಸಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಎಲೆಕ್ಟ್ರಿಕ್ ಮಾದರಿಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ವಾಹನ ಮಾದರಿಗಳಾಗ ಹೈಬ್ರಿಡ್, ಸಿಎನ್‌ಜಿ, ಎಲ್ಎನ್‌ಜಿ ಮತ್ತು ಹೈಡ್ರೋಜನ್ ಫ್ಯೂಲ್ ಸೆಲ್ಸ್ ತಂತ್ರಜ್ಞಾನ ಪ್ರೇರಿತ ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸುತ್ತಿದ್ದು, ಈ ಮೂಲಕ ಪರಿಸರ ಸ್ನೇಹಿ ಸಮೂಹ ಚಲನಶೀಲತೆಯನ್ನು ಉತ್ತೇಜಿಸುತ್ತಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಇನ್ನು ಗುಜರಾತ್ ಸರ್ಕಾರವು ಘೋಷಣೆ ಮಾಡಿರುವ ಹೊಸ ಇವಿ ವಾಹನ ನೀತಿಯಡಿಯಲ್ಲಿ ಇವಿ ವಾಹನಗಳನ್ನು ಖರೀದಿಸುವವರಿಗಾಗಿ ಗರಿಷ್ಠ ಪ್ರಮಾಣದ ಸಬ್ಸಡಿ ನೀಡಲಾಗುತ್ತಿದ್ದು, ಹೊಸ ಸಬ್ಸಡಿ ಯೋಜನೆ ಅಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು ಮತ್ತು ಇವಿ ಕಾರು ಮಾದರಿಗಳಿಗೆ ಆಕರ್ಷಕ ಸಬ್ಸಡಿ ಸಿಗಲಿದೆ.

ಟಾಟಾ ನಿರ್ಮಾಣದ 60 ಅಲ್ಟ್ರಾ ಅರ್ಬನ್ ಇವಿ ಬಸ್‌ ಖರೀದಿಸಿದ ಅಹಮದಾಬಾದ್ ಜನ್ಮಾರ್ಗ್ ಲಿಮಿಟೆಡ್‌

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ. 30 ಸಾವಿರ ತನಕ ಸಬ್ಸಡಿ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ಗರಿಷ್ಠ ರೂ.1.50 ಲಕ್ಷದ ತನಕ ಸಬ್ಸಡಿ ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಖರೀದಿದಾರರಿಗೆ ಗರಿಷ್ಠ ರೂ. 40 ಸಾವಿರ ತನಕ ಸಬ್ಸಿಡಿ ಪ್ರಕಟಿಸಲಾಗಿದೆ.

Most Read Articles

Kannada
English summary
Tata motors delivers 60 electric buses to ahmedabad brts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X