ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ ನೀಡಿದ ಟಾಟಾ ಮೋಟಾರ್ಸ್

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರು ಮಾದರಿಯನ್ನು ಮೊನ್ನೆಯಷ್ಟೇ ಬಿಡುಗಡೆಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಪಂಜಾಬ್‌ನಲ್ಲಿ ಸಫಾರಿ ಕಾರಿನ ಮೊದಲ ಯುನಿಟ್ ವಿತರಣೆ ಮಾಡಲಾಗಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಟಾಟಾ ಮೋಟಾರ್ಸ್ ಕಂಪನಿಯು ಪಂಜಾಬಿ ನಟ ಮತ್ತು ಗಾಯಕ ಪರ್ಮಿಶ್ ವೆರ್ಮಾ ಅವರಿಗೆ ಮೊದಲ ಯುನಿಟ್ ವಿತರಿಸುವ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯುವ ಯೋಜನೆಯಲ್ಲಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದೆ. ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಸ್ಟ್ಯಾಂಡರ್ಡ್ ಸಫಾರಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷದಿಂದ ರೂ. 21.25 ಲಕ್ಷ ಬೆಲೆ ಹೊಂದಿದ್ದಲ್ಲಿ ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 20.20 ಲಕ್ಷದಿಂದ ರೂ. 21.45 ಲಕ್ಷ ಬೆಲೆ ಪಡೆದುಕೊಂಡಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಸ್ಟ್ಯಾಂಡರ್ಡ್ ಎಕ್ಸ್‌ಜೆಡ್ ಪ್ಲಸ್ ಆಧರಿಸಿ ಅಭಿವೃದ್ದಿಗೊಂಡಿರುವ ಎಕ್ಸ್‌ಜೆಡ್ ಪ್ಲಸ್ ಪೆರಸೊನಾ ಅಡ್ವೆಂಚರ್ ಕಾರು ಮಾದರಿಯು ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಅಡ್ವೆಂಚರ್ ಮಾದರಿಯಾಗಿ ಗುರುತಿಸಿಕೊಳ್ಳಲು ಹೆಚ್ಚುವರಿಯಾಗಿ ಮೈಸ್ಟಿಕ್ ಬ್ಲ್ಯೂ ಬಣ್ಣದ ಆಯ್ಕೆಯೊಂದಿಗೆ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಸಫಾರಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದ್ದು, ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ. ಹೊಸ ಕಾರಿನ ಬೆಸ್ ಮಾದರಿಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯಗಳಿವೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಮಧ್ಯಮ ಆವೃತ್ತಿಗಳಲ್ಲಿ ಆರಂಭಿಕ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ನೀಡಲಾಗಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಜೊತೆಗೆ 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ, 9 ಜೆಬಿಎಲ್ ಸ್ಪೀಕರ್ಸ್ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಮತ್ತು ಹೈ ಎಂಡ್ ಮಾದರಿಯಲ್ಲಿ ಮಾತ್ರ ಪನೊರಮಿಕ್ ಸನ್‌ರೂಫ್ ಸೌಲಭ್ಯ ಸೇರಿದಂತೆ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ

ಟಾಟಾ ಕಂಪನಿಯು ಹೊಸ ಕಾರಿನ ಪ್ರತಿ ಮಾದರಿಯಲ್ಲೂ ಸದ್ಯಕ್ಕೆ 2 ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯಾಗಿರುವ ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Tata Motors Delivers First New Safari SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X