31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಸಿಗ್ನಾ 3118.ಟಿ ಟ್ರಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಹೇವಿ ಲೋಡ್ ಟ್ರಕ್ ಮಾದರಿಯು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ತ್ರಿ ಆಕ್ಸೆಲ್‌ನೊಂದಿಗೆ 6x2 ವೀಲ್ಹ್ ಸೌಲಭ್ಯವನ್ನು ಹೊಂದಿರುವ ಹೊಸ ಸಿಗ್ನಾ 3118.ಟಿ ಟ್ರಕ್ ಮಾದರಿಯು ಗರಿಷ್ಠ 31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯ ಹೊಂದಿದ್ದು, ಹೊಸ ಟ್ರಕ್ ಮಾದರಿಯನ್ನು ಗ್ರಾಹಕರು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಸಾಗಾಣಿಕಾ ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಹೆವಿ ಡ್ಯೂಟಿ ಆಕ್ಸಲ್‌ಗಳೊಂದಿಗೆ ಉತ್ತಮ ಸಾಗಾಣಿಕಾ ವಿಧಾನ ಹೊಂದಿರುವ ಹೊಸ ಟ್ರಕ್ ಮಾದರಿಯು ಉತ್ತಮ ಇಂಧನ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಫೀಚರ್ಸ್‌ಗಳನ್ನು ಹೊಂದಿರುವುದು ಸಾಗಾಣಿಕೆ ವೆಚ್ಚವನ್ನು ತಗ್ಗಿಸಲಿದೆ.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಹೊಸ ಸಿಗ್ನಾ 3118.ಟಿ ಟ್ರಕ್ ಮಾದರಿಯು 28 ಟನ್ ಸಾಮರ್ಥ್ಯದ ಇತರೆ ಟ್ರಕ್ ಮಾದರಿಗಳಿಂತಲೂ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಸುಧಾರಿತ ತಂತ್ರಜ್ಞಾನಗಳು ಮತ್ತು ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಸಾಗಾಣಿಕೆಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಟಾಟಾ ಕಂಪನಿಯು ಹೊಸ 3118.ಟಿ ಸಿಗ್ನಾ ಟ್ರಕ್‌ನಲ್ಲಿ ಎಲ್ಎಕ್ಸ್, ಸಿಎಕ್ಸ್ ಮತ್ತು ಕೌಲ್ ರೂಪಾಂತರಗಳನ್ನು ನೀಡುತ್ತಿದ್ದು, ಸಾಗಾಣಿಕೆ ಉದ್ದೇಶಗಳಿಗೆ ಅನುಗುಣವಾಗಿ 24-ಅಡಿ ಮತ್ತು 32-ಅಡಿ ಉದ್ದದ ಲೋಡಿಂಗ್ ಸ್ಪ್ಯಾನ್‌ಗಳನ್ನು ಆಯ್ಕೆ ಮಾಡಬಹುದು.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಹಾಗೆಯೇ ಹೊಸ ಟ್ರಕ್‌ನಲ್ಲಿ ನೀಡಲಾಗಿರುವ ಲಿಫ್ಟ್ ಆಕ್ಸೆಲ್ ಸೌಲಭ್ಯವು ಹೊಸ ಟ್ರಕ್ ಮಾದರಿಯನ್ನು ಟ್ಯಾಂಕರ್ ಉದ್ದೇಶಗಳಿಗೆ ಬಳಸುವ ಗ್ರಾಹಕರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಹೊಸ ಟ್ರಕ್ ಮೂಲಕ ಗ್ರಾಹಕರು ಗರಿಷ್ಠ ಲಾಭಾಂಶ ಪಡೆದುಕೊಳ್ಳಬಹುದಾಗಿದೆ. ಹೊಸ ಟ್ರಕ್ ಕಾರ್ಯಚರಣೆಯಿಂದ ಗ್ರಾಹಕರಿಗೆ 28 ಟನ್ ಸಾಮರ್ಥ್ಯದ ಟ್ರಕ್ ಮಾದರಿಗಳಿಂತೂ ಶೇ.45ರಷ್ಟು ಹೆಚ್ಚು ಲಾಭಾಂಶ ಹಿಂದಿರುಗಲಿದ್ದು, ಒಂದೇ ವರ್ಷದ ಅವಧಿಯಲ್ಲಿ ಟ್ರಕ್ ಮೇಲಿನ ಹೂಡಿಕೆಯು ಗ್ರಾಹಕರಿಗೆ ಲಾಭವಾಗಿ ಪರಿವರ್ತನೆಯಾಗಲಿದೆ ಎನ್ನುತ್ತದೆ ಟಾಟಾ ಮೋಟಾರ್ಸ್ ಕಂಪನಿ.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಹೊಸ ಟ್ರಕ್ ಮಾದರಿಯು 28 ಟನ್ ಸಾಮರ್ಥ್ಯದ ಟ್ರಕ್ ಮಾದರಿಯಲ್ಲೇ ಇಂಧನ, ಟೈರ್ ಮತ್ತು ನಿರ್ವಹಣಾ ವೆಚ್ಚ ಹೊಂದಿದ್ದು, ಹೆಚ್ಚಿನ ಮಟ್ಟದ ಲೋಡ್ ಸಾಮರ್ಥ್ಯವಿರುವುದು ಸಾಗಾಣಿಕೆ ವೆಚ್ಚ ತಗ್ಗುವ ಮೂಲಕ ನಿರ್ವಹಣೆಯಲ್ಲಿ ಉಳಿತಾಯವಾಗಲಿದೆ ಎನ್ನುವುದು ಟಾಟಾ ಮೋಟಾರ್ಸ್ ಅಭಿಪ್ರಾಯ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಜೊತೆಗೆ ಹೊಸ ಟ್ರಕ್ ಮಾದರಿಯಲ್ಲಿ ಚಾಲಕನಿಗೆ ಆರಾಮದಾಯಕ ಚಾಲನೆ ಪೂರಕವಾದ ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಟ್ರಕ್‌ನಲ್ಲಿ ಫ್ಯೂಲ್ ಎಕಾನಮಿ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್, ಐಸಿಜಿಟಿ ಬ್ರೇಕ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ರೂಪಾಂತರಗಳಲ್ಲಿ ಎಸಿ, ಯುನಿಟೈಸ್ಡ್ ವೀಲ್ ಬೇರಿಂಗ್ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಮುಖ್ಯವಾಗಿ ಹೊಸ ಟ್ರಕ್ ಮಾದರಿಯಲ್ಲಿ ಟಾಟಾ ಕಂಪನಿಯು ಇನ್‌ಬಿಲ್ಟ್ ಹೊಂದಿರುವ ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮೂಲಕ ಇಂಧನ ಕಳ್ಳತನವಾಗುವುದನ್ನು ತಡೆಯುವ ಮೂಲಕ ವಾಹನ ಮಾಲೀಕರಿಗೆ ಸಾಕಷ್ಟು ಸಹಕಾರಿಯಾಗುವ ಫೀಚರ್ಸ್ ನೀಡಿದೆ.

MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ

ಇನ್ನು ಹೊಸ ಸಿಗ್ನಾ 3118.ಟಿ ಟ್ರಕ್ ಮಾದರಿಯಲ್ಲಿ ಟಾಟಾ ಕಂಪನಿಯು ಬಿಎಸ್-6 ವೈಶಿಷ್ಟ್ಯತೆಯ ಕಮ್ಮಿನ್ಸ್ ಎಂಜಿನ್ ಹೊಂದಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 186-ಬಿಎಚ್‌ಪಿ, 850 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹೊಸ ಟ್ರಕ್ ಮೇಲೆ ಟಾಟಾ 6 ವರ್ಷ ಅಥವಾ 6 ಲಕ್ಷ ಕಿ.ಮೀ ಮೇಲೆ ವಾರಂಟಿ ಘೋಷಿಸಿದ್ದು, ಸರಕು ಸಾಗಾಣಿಕೆ ಉದ್ಯಮದ ಬೇಡಿಕೆಗೆ ಅನುಗುಣವಾಗಿ ಹೊಸ ಟ್ರಕ್ ಸಿದ್ದಪಡಿಸಿದೆ.

Most Read Articles

Kannada
English summary
Tata Signa 3118.T Truck Launched In India. Read in Kannada.
Story first published: Wednesday, March 3, 2021, 22:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X