ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

Tata Motors ಕಂಪನಿಯು Express T ಎಂಬ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.54 ಲಕ್ಷಗಳಾಗಿದೆ. ಹೊಸ Tata ಎಲೆಕ್ಟ್ರಿಕ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

Tata Motors ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. Tata Motors ಇತ್ತೀಚಿಗಷ್ಟೇ ತನ್ನ Tigor ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈಗ ವಾಣಿಜ್ಯ ಬಳಕೆಗಾಗಿ Express T ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ವಾಣಿಜ್ಯ ಎಲೆಕ್ಟ್ರಿಕ್ ಕಾರು Tata Tigor ಎಲೆಕ್ಟ್ರಿಕ್ ಕಾರಿನಂತೆಯೇ ಕಾಣುತ್ತದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಆದರೆ ಎರಡೂ ಕಾರುಗಳ ನಡುವೆ ಕೆಲವು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಕಾಣಬಹುದು. Xpress T ಎಲೆಕ್ಟ್ರಿಕ್ ಕಾರಿನಲ್ಲಿರುವ ಪ್ರಮುಖ ಲಕ್ಷಣವೆಂದರೆ ಈ ಕಾರು 21.5 ಕಿ.ವ್ಯಾ ಹಾಗೂ 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸೆಡಾನ್ ಕಾರ್ ಅನ್ನು XM, XZ, XM + ಹಾಗೂ XZ + ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಮೊದಲ ಎರಡು ಮಾದರಿಗಳು 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದರೆ, ನಂತರದ ಎರಡು ಮಾದರಿಗಳು ಹೆಚ್ಚು ದೊಡ್ಡ ಬ್ಯಾಟರಿಯನ್ನು ಹೊಂದಿವೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಒಂದು ಮಾದರಿಯ ಬೆಲೆ ರೂ. 9.54 ಲಕ್ಷಗಳಾದರೆ, ಮತ್ತೊಂದು ಮಾದರಿಯ ಬೆಲೆ ರೂ. 10.04 ಲಕ್ಷಗಳಾಗಿದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರ ಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 213 ಕಿ.ಮೀಗಳವರೆಗೆ ಚಲಿಸುತ್ತದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಈ ಬ್ಯಾಟರಿಗಳನ್ನು 90 ರಿಂದ 110 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು ಎಂದು Tata Motors ಕಂಪನಿ ಹೇಳಿದೆ. 15 ಆಂಪಿಯರ್ ಎಲೆಕ್ಟ್ರಿಕ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜರ್ ಗಳಿಂದ ಈ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು. ವಾಣಿಜ್ಯ ಬಳಕೆಗಾಗಿ ಈ ಕಾರಿನ ಸುತ್ತಲೂ ಬಿಳಿ ಬಣ್ಣದೊಂದಿಗೆ ನೀಲಿ ಸ್ಪರ್ಶವನ್ನು ನೀಡಲಾಗಿದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಇದರಿಂದ ನೋಡುಗರಿಗೆ ಈ ಕಾರು ಎಲೆಕ್ಟ್ರಿಕ್ ಕಾರು ಎಂದು ತಿಳಿಯುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಒಳ ಭಾಗದಲ್ಲಿ ನೀಲಿ ಬಣ್ಣವನ್ನು ನೀಡಲಾಗಿದೆ. ಈ ನೀಲಿ ಹೈಲೈಟ್‌ಗಳೇ ಎಲೆಕ್ಟ್ರಿಕ್ ಕಾರುಗಳನ್ನು Tata Motors ಕಂಪನಿಯ ಇತರ ಫ್ಯೂಯಲ್ ಕಾರುಗಳಿಂದ ಪ್ರತ್ಯೇಕಿಸುತ್ತವೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಈ ಹೊಸ ಕಮರ್ಷಿಯಲ್ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಕ್ಯಾಬಿನ್ ಅನ್ನು ಪ್ರೀಮಿಯಂ ಗುಣಮಟ್ಟದ ಕಪ್ಪು ಬಣ್ಣದಲ್ಲಿರುವ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಂತಹ ಫೀಚರ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಈ ಎಲೆಕ್ಟ್ರಿಕ್ ಕಾರು ಡ್ಯುಯಲ್ ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್‌ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಈಗಾಗಲೇ ಹೇಳಿದಂತೆ Express T ಎಲೆಕ್ಟ್ರಿಕ್ ಕಾರ್ ಅನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ವೈಯಕ್ತಿಕ ಬಳಕೆಗೆ ಮಾರಾಟ ಮಾಡುವುದಿಲ್ಲ. ವಾಣಿಜ್ಯ ಬಳಕೆಗಾಗಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಕಾರ್ಪೊರೇಶನ್‌ಗಳು, ಬಾಡಿಗೆ ಕಾರ್ ಕಂಪನಿಗಳು ಹಾಗೂ ಸರ್ಕಾರಿ ಏಜೆನ್ಸಿಗಳಿಗೆ ಮಾರಾಟ ಮಾಡಲಾಗುತ್ತದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಹೆಚ್ಚಿನ ಸಂಖ್ಯೆಯಲ್ಲಿ ಈ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಕಾರ್ಪೊರೇಟ್ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಗಳಿಗೆ Tata Motors ಕಂಪನಿಯು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ಫೇಮ್ 2 ಯೋಜನೆಯಡಿಯಲ್ಲಿ ದೊರೆಯುವ ಸಬ್ಸಿಡಿಯ ನಂತರ Express T ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 9.54 ಲಕ್ಷಗಳಾಗಲಿದೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಈ ಸಬ್ಸಿಡಿ ಸಾರ್ವಜನಿಕ ಬಳಕೆ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ನೋಂದಾಯಿಸುವ ವಾಹನಗಳಿಗೆ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ನೀಡುವ ಅನುದಾನವಾಗಿದೆ. ಇದರ ಹೊರತಾಗಿ ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿವೆ.

ವಾಣಿಜ್ಯ ಬಳಕೆಗಾಗಿಯೇ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Tata Motors

ಈ ಎಲ್ಲಾ ಸಬ್ಸಿಡಿಗಳನ್ನು ಒಟ್ಟಿಗೆ ತೆಗೆದುಕೊಂಡರೆ, Express T ಎಲೆಕ್ಟ್ರಿಕ್ ಕಾರಿನ ಬೆಲೆ ಮತ್ತಷ್ಟು ಕಡಿಮೆಯಾಗುತ್ತದೆ. Tata Motors ಕಂಪನಿಯ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರು ಮಾದರಿಯಾದ Nexon EVಯ 1,000 ಯೂನಿಟ್ ಗಳನ್ನು ಆಗಸ್ಟ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. ಈ ಮೂಲಕ ಮಾರಾಟದಲ್ಲಿ Nexon EV ಹೊಸ ದಾಖಲೆ ಬರೆದಿದೆ. Tata Nexon EVಯ ಆರಂಭಿಕ ಬೆಲೆ ರೂ. 13.99 ಲಕ್ಷಗಳಾಗಿದೆ.

Most Read Articles

Kannada
English summary
Tata motors launches new electric car for commercial use details
Story first published: Thursday, September 16, 2021, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X