ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಭಾರತೀಯ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಎಂಟು ಹೊಸ ಶೋ ರೂಂಗಳನ್ನು ತೆರೆದಿದೆ ಎಂದು ವರದಿಯಾಗಿದೆ. ಗಮನಿಸ ಬೇಕಾದ ಸಂಗತಿಯೆಂದರೆ ಈ ಎಲ್ಲಾ ಶೋ ರೂಂಗಳನ್ನು ಒಂದೇ ದಿನ ಒಂದೇ ನಗರದಲ್ಲಿ ತೆರೆಯಲಾಗಿದೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಈ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಶೋ ರೂಂಗಳನ್ನು ತೆರೆಯುವಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಎಲ್ಲಾ ಹೊಸ ಶೋ ರೂಂಗಳನ್ನು ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿ ತೆರೆಯಲಾಗಿದೆ. ಇದರಿಂದ ಅಹಮದಾಬಾದ್ ನಿವಾಸಿಗಳಿಗೆ ಟಾಟಾ ಕಾರುಗಳನ್ನು ಖರೀದಿಸುವುದು ಸುಲಭವಾಗಲಿದೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಗುಜರಾತ್ ರಾಜ್ಯದಲ್ಲಿ ತನ್ನ ಮಾರಾಟ ಜಾಲವನ್ನು ಹೆಚ್ಚಿಸಲು ಈ ಶೋ ರೂಂಗಳನ್ನು ತೆರೆದಿದೆ. ಟಾಟಾ ಮೋಟಾರ್ಸ್ ಕಂಪನಿಯ ವಾಹನಗಳು ಇತ್ತೀಚಿನ ದಿನಗಳಲ್ಲಿ ಗುಜರಾತ್‌ನಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಈ ಹಿನ್ನೆಲೆಯಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಿ ಅಲ್ಲಿನ ಗ್ರಾಹಕರನ್ನು ಆಕರ್ಷಿಸಲು ಟಾಟಾ ಮೋಟಾರ್ಸ್ ಈ ಶೋ ರೂಂಗಳನ್ನು ತೆರೆದಿದೆ. ಟಾಟಾ ಮೋಟಾರ್ಸ್ ಗುಜರಾತ್‌ನಲ್ಲಿ ಹಿಂದಿನ ವರ್ಷಕ್ಕಿಂತ ಈ ವರ್ಷ 95% ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಈ ಕಾರಣಕ್ಕೂ ಸಹ ಗುಜರಾತ್ ಗ್ರಾಹಕರಿಗೆ ಅಸಾಧಾರಣ ಗ್ರಾಹಕ ಸೇವೆಯನ್ನು ನೀಡುವ ಉದ್ದೇಶದಿಂದ ಈ ಹೊಸ ಶೋ ರೂಂಗಳನ್ನು ತೆರೆಯಲಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಆನ್‌ಲೈನ್‌ನಲ್ಲಿಯೂ ಮಾರಾಟ ಸೇವೆಯನ್ನು ನೀಡುತ್ತಿದೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಈ ಮೂಲಕ ಕಂಪನಿಯು ಎಲ್ಲಾ ಭಾರತೀಯ ಗ್ರಾಹಕರನ್ನು ಆಕರ್ಷಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಟಾಟಾ ಮೋಟಾರ್ಸ್ ಹೊಸ ಶೋ ರೂಂಗಳನ್ನು ತೆರೆಯುವ ಮೂಲಕ ಮಾತ್ರವಲ್ಲದೆ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವುದರ ಮೂಲಕವೂ ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಟಾಟಾ ಮೋಟಾರ್ಸ್ ಈ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯನ್ನು ಕಳೆದ ವರ್ಷ ದೆಹಲಿಯಲ್ಲಿ ನಡೆದಿದ್ದ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ಕಂಪನಿಯು ಈಗಾಗಲೇ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಿದೆ. ಇದರಿಂದ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಒಂದೇ ದಿನ ಒಂದೇ ನಗರದಲ್ಲಿ ಎಂಟು ಶೋರೂಂಗಳನ್ನು ತೆರೆದ ಟಾಟಾ ಮೋಟಾರ್ಸ್

ವರದಿಗಳ ಪ್ರಕಾರ, ಟಾಟಾ ಹೆಚ್‌ಬಿಎಕ್ಸ್ ಹಾರ್ನ್‌ಬಿಲ್ ಹೆಸರಿನಲ್ಲಿ ಮಾರಾಟವಾಗಲಿದೆ. ಈ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಮಹೀಂದ್ರಾ ಕೆಯುವಿ ಎನ್‌ಎಕ್ಸ್‌ಟಿ, ಮಾರುತಿ ಸುಜುಕಿ ಇಗ್ನಿಸ್ ಹಾಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹ್ಯುಂಡೈ ಕ್ಯಾಸ್ಪರ್‌ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Motors opens eight new showrooms in one day in one city. Read in Kannada.
Story first published: Saturday, July 24, 2021, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X