Just In
- 2 min ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- 26 min ago ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- 30 min ago ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
- 3 hrs ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
Don't Miss!
- News Rain Alert: ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ವ್ಯಾಪಕ ಮಳೆ ಆರ್ಭಟ
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಟಾಟಾ ಟಿಯಾಗೋ ಎನ್ಆರ್ಜಿ ಫೇಸ್ಲಿಫ್ಟ್ ಕಾರಿನ ಟೀಸರ್ ಬಿಡುಗಡೆ
ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ 2021ರ ಟಿಯಾಗೋ ಎನ್ಆರ್ಜಿ ಫೇಸ್ಲಿಫ್ಟೆಡ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಎನ್ಆರ್ಜಿ ಫೇಸ್ಲಿಫ್ಟೆಡ್ ಕಾರು 2021ರ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.
ಟಾಟಾ ಕಂಪನಿಯು ಈ ಹೊಸ ಟಿಯಾಗೋ ಎನ್ಆರ್ಜಿ ಫೇಸ್ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮುನ್ನ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಟಿಯಾಗೋ ಎನ್ಆರ್ಜಿ ಎಂಟ್ರಿ ಲೆವೆಲ್ ಮಾದರಿಯನ್ನು 2018 ಮತ್ತು 2020ರ ನಡುವೆ ಬುಚ್, ಕ್ರಾಸ್ಒವರ್ ಮಾದರಿಯಾಗಿ ಮಾರಾಟ ಮಾಡಲಾಯಿತು. 2020ರ ಆರಂಭದಲ್ಲಿ ಟಿಯಾಗೋ ಫೇಸ್ಲಿಫ್ಟ್ ಮಾರಾಟಕ್ಕೆ ಬಂದಾಗ ಕಂಪನಿಯು ತನ್ನ ಎನ್ಆರ್ಜಿ ಮಾದರಿಯನ್ನು ಸಾಲಿನಿಂದ ಕಾರನ್ನು ಕೈಬಿಟ್ಟಿತು.
ಟಿಯಾಗೋ ಎನ್ಆರ್ಜಿ ಫೇಸ್ಲಿಫ್ಟ್ ಕಾರು ಒರಟು ಲುಕ್ ಹಾಗೂ ಎಸ್ಯುವಿ ಸ್ಟೈಲಿಂಗ್ ಅಂಶಗಳನ್ನು ಹೊಂದಿದೆ. ಈ ಹೊಸ ಟಿಯಾಗೊ ಎನ್ಆರ್ಜಿ ಮಾದರಿಯ ಬಾಡಿ ಕ್ಲಾಡಿಂಗ್, ಟೇಲ್ಗೇಟ್ನಲ್ಲಿ ಬ್ಲಾಕ್ ಪ್ಲಾಸ್ಟಿಕ್ ಅಂಶ ಹಾಗೂ ಎಸ್ಯುವಿಯಂತೆ ಕಾಣಲು ರಿ-ಡಿಸೈನ್ ಮಾಡಲಾದ ವ್ಹೀಲ್'ಗಳನ್ನು ಪಡೆಯುವ ಸಾಧ್ಯತೆಗಳಿವೆ.
ಈ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ. ಟಾಟಾ ಟಿಯಾಗೊದ ಸ್ಟ್ಯಾಂಡರ್ಡ್ ಮಾದರಿಯು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
ಈ ಮಾದರಿಯ ವಿನ್ಯಾಸವು ಸ್ಟಾಂಡರ್ಡ್ ಟಾಟಾ ಟಿಯಾಗೊ ಮಾದರಿಯನ್ನು ಹೋಲುತ್ತದೆ. ಆದರೆ ಟಿಯಾಗೊ ಎನ್ಆರ್ಜಿ ಆವೃತ್ತಿಯು ಎಸಿ ವೆಂಟ್ಸ್ ಹಾಗೂ ಗೇರ್ ಲಿವರ್ ಸುತ್ತ ಕಾಂಟ್ರಾಸ್ಟ್ ಆರೆಂಜ್ ಕಲರ್ ಫಿನಿಶಿಂಗ್ ಹೊಂದಿರಲಿದೆ.
ಟಿಯಾಗೋ ಎನ್ಆರ್ಜಿ ಫೇಸ್ಲಿಫ್ಟ್ ಕಾರು ಅಪ್ ಹೊಲೆಸ್ಟರಿ ಇರಲಿದ್ದು, ಫ್ಯಾಬ್ರಿಕ್ ಮೇಲೆ ಟ್ರೈ ಆರೋ ವಿನ್ಯಾಸ ಅಂಶಗಳನ್ನು ಬಳಸಬಹುದು. ಫೀಚರ್'ಗಳ ದೃಷ್ಟಿಯಿಂದಲೂ ಹೊಸ ಮಾದರಿಯು ಸ್ಟಾಂಡರ್ಡ್ ಮಾದರಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ.
ಇದರಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಹರ್ಮನ್ ಸೌಂಡ್ ಸಿಸ್ಟಂ, ರಿಮೋಟ್ ಲಾಕಿಂಗ್/ಅನ್ ಲಾಕಿಂಗ್ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅನ್ನು ಪಡೆಯಬಹುದು.
ಇನ್ನು ಸುರಕ್ಷತಾ ಫೀಚರ್'ಗಳ ಬಗ್ಗೆ ಹೇಳುವುದಾದರೆ ಈ ಕಾರು ಡ್ಯುಯಲ್ ಏರ್ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಕ್ಯಾಮರಾ ಹೊಂದಿರುವ ರೇರ್ ಪಾರ್ಕಿಂಗ್ ಸೆನ್ಸಾರ್'ಗಳನ್ನು ಪಡೆಯುವ ಸಾಧ್ಯತೆಗಳಿವೆ.
ಟಾಟಾ ಮೋಟಾರ್ಸ್ ಕಂಪನಿಯು ಈ ಮಾದರಿಯ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಇದರಲ್ಲಿ 1.2 ಲೀಟರ್ ರೆವೊಟ್ರಾನ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 86 ಬಿಹೆಚ್ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.