Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
ಕರೋನಾ ವೈರಸ್ ಪರಿಣಾಮ ಸಾಕಷ್ಟು ಇಳಿಕೆ ಕಂಡಿದ್ದ ವಾಣಿಜ್ಯ ವಾಹನಗಳ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗವು ವಾಹನಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್ಗಳನ್ನು ಘೋಷಣೆ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸದ್ಯ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದರೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇನ್ನು ಕೂಡಾ ಸಾಕಷ್ಟು ಬೆಳವಣಿಗೆ ಸಾಧಿಸಬೇಕಿದೆ. ಪ್ರಯಾಣಿಕರ ವಾಹನ ಮಾರಾಟ ಸುಧಾರಣೆಗೊಂಡದ್ದರೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇನ್ನು ಕೂಡಾ ನೀರಿಕ್ಷಿತ ಮಟ್ಟದ ವಾಹನಗಳ ಮಾರಾಟಕ್ಕಾಗಿ ಪರದಾಟುತ್ತಿರುವ ವಾಹನ ಕಂಪನಿಗಳು ಮಾರಾಟ ಸುಧಾರಣೆಗಾಗಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೊಸ ಅಭಿಯಾನದಡಿ ವಾಣಿಜ್ಯ ವಾಹನ ಖರೀದಿದಾರರಿಗೆ ಹಲವಾರು ಆಫರ್ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಿವಿಧ ಬ್ಯಾಂಕ್ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದೆ.

ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್ಗಳನ್ನು ನೀಡುತ್ತಿರುವ ಕಂಪನಿಯು ಸರಳ ಸಾಲ ಮರುಪಾವತಿ ಸೌಲಭ್ಯಗಳ ಆಫರ್ ನೀಡುತ್ತಿದೆ.

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಜೊತೆಗೂಡಿ ವಿವಿಧ ಲೋನ್ ಆಫರ್ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸದಾಗಿ ಕರ್ನಾಟಕ ಬ್ಯಾಂಕ್ ಜೊತೆಗೂಡಿ ಗರಿಷ್ಠ ಅವಧಿಗೆ ವಿವಿಧ ಲೋನ್ ಆಫರ್ ನೀಡುತ್ತಿದೆ. ಹೊಸ ಯೋಜನೆಯಿಂದಾಗಿ ವಾಹನ ಮಾರಾಟವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕರ್ನಾಟಕ ಬ್ಯಾಂಕ್ ಮೂಲಕ ಆಕರ್ಷಕ ಬಡ್ಡಿದರದಲ್ಲಿ ಲೋನ್ ಆಫರ್ಗಳನ್ನು ಖಚಿತಪಡಿಸುತ್ತಿದೆ.

ಟಾಟಾ ಹೊಸ ವಾಹನಗಳ ಖರೀದಿ ಮೇಲೆ ಕರ್ನಾಟಕ ಬ್ಯಾಂಕಿನಿಂದ ಶೇ.85 ರಷ್ಟು ಆನ್ ರೋಡ್ ದರದ ಮೇಲೆ ಸಾಲ ಸೌಲಭ್ಯ ದೊರೆಯಲಿದ್ದು, ವಿವಿಧ ವಾಹನಗಳ ಸಾಲ ಮೊತ್ತದ ಮೇಲೆ ಗರಿಷ್ಠ 7 ವರ್ಷಗಳ ಮರುಪಾವತಿ ಅವಕಾಶ ನೀಡುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಕರ್ನಾಟಕ ಬ್ಯಾಂಕ್ ಜೊತೆಗಿನ ಹೊಸ ಲೋನ್ ಆಫರ್ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಸೇವೆಯ ಉಪಾಧ್ಯಕ್ಷ ರಾಜನ್ ಅಂಬಾ ಅವರು, ಹೊಸ ಸಾಲ ಸೌಲಭ್ಯವು ಗ್ರಾಹಕರ ಆಯ್ಕೆ ಹೆಚ್ಚಿಸುವುದರ ಜೊತೆಗೆ ವಾಹನ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ವಾಹನ ಮಾರಾಟ ವಿಭಾಗದಲ್ಲಿ ಗರಿಷ್ಠ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದು, ಶೀಘ್ರದಲ್ಲೇ ವಾಣಿಜ್ಯ ವಾಹನಗಳ ಮಾರಾಟವು ಕೂಡಾ ಸುಧಾರಣೆಗೊಳ್ಳುವ ವಿಶ್ವಾಸದಲ್ಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದಕ್ಕಾಗಿ ಹೊಸ ವಾಹನಗಳ ಮಾರಾಟವನ್ನು ಉತ್ತೇಜಿಸಲು ಸರಳ ಸಾಲಸೌಲಭ್ಯಗಳನ್ನು ಪರಿಚಯಿಸುತ್ತಿರುವುದು ಟಾಟಾ ಕಂಪನಿಯು ಗ್ರಾಹಕರಿಗೆ ಹಲವು ಆಫರ್ಗಳನ್ನು ಸಹ ನೀಡುತ್ತಿದ್ದು, ಕಾರು ಮಾರಾಟದಂತೆ ವಾಣಿಜ್ಯ ವಾಹನಗಳ ಮಾರಾಟದಲ್ಲೂ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.