ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ದೇಶದ ಮುಂಚೂಣಿ ವಾಣಿಜ್ಯ ವಾಹನ ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್(Tata Motors) ತನ್ನ ಪ್ರಮುಖ ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದು, ಅಕ್ಟೋಬರ್ 1ರಿಂದ ಹೊಸ ದರ ಅನ್ವಯವಾಗಲಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ. ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಟಾಟಾ ಮೋಟಾರ್ಸ್ ಕಂಪನಿಯು ಸ್ಟೀಲ್ ದರ ಹೆಚ್ಚಿರುವ ಪರಿಣಾಮ ಉತ್ಪಾದನಾ ವೆಚ್ಚಗಳ ಸರಿದೂಗಿಸಲು ವಾಣಿಜ್ಯ ವಾಹನಗಳ ಜೊತೆ ಪ್ರಯಾಣಿಕ ವಾಹನಗಳ ಬೆಲೆಯಲ್ಲೂ ಏರಿಕೆ ಮಾಡುವ ಯೋಜನೆಯಲ್ಲಿದ್ದು, ಶೀಘ್ರದಲ್ಲೇ ದರ ಪಟ್ಟಿ ಬಿಡುಗಡೆ ಮಾಡುವುದಾಗಿ ಕಂಪನಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಹೊಸ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಪ್ರಮುಖ ವಾಹನ ತಯಾಕ ಕಂಪನಿಗಳು ಮೂರರಿಂದ ನಾಲ್ಕು ಬಾರಿಗೆ ದರ ಹೆಚ್ಚಿಸಿವೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಹೊಸ ಬೆಲೆಯು ಕಳೆದ ವರ್ಷಕ್ಕಿಂತಲೂ ಸರಾಸರಿಯಾಗಿ ಶೇ.3 ರಿಂದ ಶೇ.5 ರಷ್ಟು ಬೆಲೆ ಹೆಚ್ಚಳವಾಗಿವೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಕೇವಲ ಪ್ರಯಾಣಿಕ ವಾಹನಗಳಲ್ಲಿ ವಾಣಿಜ್ಯ ವಾಹನ ಬೆಲೆಯಲ್ಲೂ ಸಾಕಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳದ ನಡುವೆಯೂ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಗ್ರಾಹಕರು ಮತ್ತು ಫ್ಲೀಟ್ ಮಾಲೀಕರಿಗೆ ಮಾಲೀಕತ್ವದ ಅತ್ಯಂತ ಕಡಿಮೆ ಒಟ್ಟು ವೆಚ್ಚವನ್ನು ತಲುಪಿಸುವ ಪ್ರಯತ್ನವನ್ನು ಮುಂದುವರಿಸಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಇನ್ನು ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, 2ನೇ ಅಲೆಯ ನಂತರ ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ವಾಣಿಜ್ಯ ವಾಹನ ಉತ್ಪಾದನೆಯಲ್ಲೂ ಸಾಕಷ್ಟು ಬದಲಾವಣೆ ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ವಾಹನ ನಿರ್ವಹಣಾ ವೆಚ್ಚ ತಗ್ಗಿಸಲು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಟಾಟಾ ಮೋಟರ್ಸ್ ಕಂಪನಿಯು ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮೂಲಕ ಗಮನಸೆಳೆಯುತ್ತಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಬದಲಾವಣೆಗಾಗಿ ಸಿಎನ್‌ಜಿ ಆವೃತ್ತಿಯನ್ನು ಪರಿಚಯಿಸಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ 407 ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನ ಮಾದರಿಯಲ್ಲಿ ಸಿಎನ್‌ಜಿ ಮಾದರಿಯನ್ನು ಪರಿಚಯಿಸಿದ್ದು, ಹೊಸ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.07 ಲಕ್ಷ ಬೆಲೆ ಹೊಂದಿದೆ.

10 ಅಡಿ ಲೋಡ್ ಡೆಕ್ ಸೌಲಭ್ಯ ಹೊಂದಿರುವ ಹೊಸ 407 ಸಿಎನ್‌ಜಿ ಮಾದರಿಯು ಹೆಚ್ಚಿನ ಮಟ್ಟದ ಲೋಡ್-ಸಾಗಿಸುವ ಸಾಮರ್ಥ್ಯ ಹೊಂದಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಹೊಸ ವಾಹನವು 5 ಟನ್ ನಿಂದ 16 ಟನ್ ತನಕ ಲೋಡಿಂಗ್ ಸಾಮರ್ಥ್ಯ ಹೊಂದಿವೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಪರಿಣಾಮಕಾರಿ ಇಂಧನ ದಕ್ಷತೆಯನ್ನು ಹೊಂದಿರುವ ಹೊಸ 407 ಸಿಎನ್‌ಜಿ ಮಾದರಿಯು 3.8 ಲೀಟರ್ ಎಂಜಿನ್ ಹೊಂದಿದ್ದು, ಗರಿಷ್ಠ 85 ಬಿಎಚ್‌ಪಿಯೊಂದಿಗೆ ಕಡಿಮೆ ಆರ್‌ಪಿಎಂನಲ್ಲಿ 285ಎನ್‌ಎಂ ಅತ್ಯುತ್ತಮ ದರ್ಜೆಯ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

4,995 ಕೆಜಿ ಜಿವಿಡಬ್ಲ್ಯೂ ವಾಹನವು ವೇಗವಾಗಿ ಟರ್ನ್ ಅರೌಂಡ್ ಸಮಯ ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು 180-ಲೀಟರ್ ಇಂಧನ ಟ್ಯಾಂಕ್ ಸೌಲಭ್ಯ ಹೊಂದಿದ್ದು, ಸೆಮಿ-ಫಾರ್ವರ್ಡ್ ಕಂಟ್ರೋಲ್ ಕ್ಯಾಬಿನ್ ಅನ್ನು ಉನ್ನತ ದರ್ಜೆಯ ಬಿಡಿಭಾಗಗಳೊಂದಿಗೆ ನಿರ್ಮಿಸಲಾಗಿದೆ.

ಅಕ್ಟೋಬರ್ 1ರಿಂದ ಮತ್ತಷ್ಟು ಹೆಚ್ಚಳವಾಗಲಿದೆ Tata Motors ವಾಣಿಜ್ಯ ವಾಹನಗಳ ಬೆಲೆ

ಇದು ಚಾಲಕರು ಮತ್ತು ಮಾಲೀಕರಿಗೆ ಸುರಕ್ಷಿತ ಮತ್ತು ಆತ್ಮವಿಶ್ವಾಸವನ್ನು ನೀಡಲಿದ್ದು, ಫ್ರಂಟ್ ಪ್ಯಾರಾಬೋಲಿಕ್ ಸಸ್ಪೆನ್ಷನ್ ಸೌಲಭ್ಯವು ಗಮನಾರ್ಹವಾಗಿ ಕಡಿಮೆ ಕ್ಲಚ್ ಮತ್ತು ಗೇರ್ ಶಿಫ್ಟ್ ಪ್ರಯತ್ನ ಮತ್ತು ಕಡಿಮೆ ಎನ್ ವಿಎಚ್ ಮಟ್ಟಗಳನ್ನು ನೀಡುತ್ತದೆ.

Most Read Articles

Kannada
English summary
Tata motors to increase prices of its commercial vehicles from 1st october.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X