Just In
- 35 min ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- 1 hr ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- 1 hr ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- 2 hrs ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ ಕಾರುಗಳ ಸಿಎನ್ಜಿ ವರ್ಷನ್
ಡೀಸೆಲ್ ಮತ್ತು ಪೆಟ್ರೋಲ್ ಬಳಕೆಯನ್ನು ತಗ್ಗಿಸಿ ಪರಿಸರಕ್ಕೆ ಪೂರಕವಾದ ಸಿಎನ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಾಗುತ್ತಿದ್ದು, ಬಹುತೇಕ ವಾಹನ ಮಾರಾಟ ಕಂಪನಿಗಳು ಕೂಡಾ ಭವಿಷ್ಯದ ವಾಹನ ಮಾದರಿಗಳ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿವೆ.
ಹೊಸ ಕಾರುಗಳ ಮಾರಾಟದಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಗಮನಸೆಳೆಯುತ್ತಿದೆ. ಪ್ರಮುಖ ಕಾರುಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು ಮೊದಲ ಬಾರಿಗೆ ಟಿಗೋರ್ ಮತ್ತು ಟಿಯಾಗೋ ಮಾದರಿಗಳಲ್ಲಿ ಸಿಎನ್ಜಿ ಆವೃತ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ತಂತ್ರಜ್ಞಾನವನ್ನು ಅಳವಡಿಸಿ ಈಗಾಗಲೇ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಅಳವಡಿಸಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಸಿಎನ್ಜಿ ಆವೃತ್ತಿಗಳು ಅತಿ ಕಡಿಮೆ ಮಾಲಿನ್ಯ ಉತ್ಪತ್ತಿಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸುತ್ತವೆ.
ಸಿಎನ್ಜಿ ತಂತ್ರಜ್ಞಾನ ಪ್ರೇರಿತ ವಾಹನ ಮಾರಾಟದಲ್ಲಿ ಈಗಾಗಲೇ ಮಾರುತಿ ಸುಜುಕಿ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಪೂರಕವಾಗಿ ಸಿಎನ್ಜಿ ಪೂರೈಕೆಯ ಕೇಂದ್ರಗಳನ್ನು ಸಹ ಹೆಚ್ಚಿಸುತ್ತಿರುವುದು ಹೊಸ ಮಾದರಿಗಳತ್ತ ಗ್ರಾಹಕರು ಗಮನಹರಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಎಂಟ್ರಿ ಲೆವಲ್ ಹ್ಯಾಚ್ಬ್ಯಾಕ್ ಮಾದರಿಯಾದ ಟಿಯಾಗೋ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಟಿಗೋರ್ ಆವೃತ್ತಿಗಳಲ್ಲಿ ಸಿಎನ್ಜಿ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಿಎಸ್ 6 ಜಾರಿ ನಂತರ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಡೀಸೆಲ್ ಎಂಜಿನ್ ಸ್ಥಗಿತದ ನಂತರ ಪೆಟ್ರೋಲ್ ಮಾದರಿಗಳನ್ನು ಸಹ ಮುಂಬರುವ ಕೆಲವೇ ವರ್ಷಗಳಲ್ಲಿ ಹಂತ-ಹಂತವಾಗಿ ಸ್ಥಗಿತಗೊಳಿಸುವ ನಿರ್ಧರಿಸಿರುವ ಕಾರು ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ನೈಸರ್ಗಿಕ ಅನಿಲಗಳಿಂದ ಚಾಲನೆ ಮಾಡಬಹುದಾದ ವಿವಿಧ ತಂತ್ರಜ್ಞಾನ ಪ್ರೇರಣೆಯ ವಾಹನಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿವೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಇನ್ನು ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಟಾಟಾ ಮೋಟಾರ್ಸ್ ಕಂಪನಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದ್ದು, ಹೊಸದಾಗಿ ಪರಿಚಯಿಸಲಿರುವ ಸಿಎನ್ಜಿ ಆಯ್ಕೆಯು ಹೊಸ ಕಾರಿನ ಮಾರಾಟವನ್ನು ಹೆಚ್ಚಿಸಲಿದೆ.
ಸಿಎನ್ಜಿ ಆವೃತ್ತಿಯನ್ನು ಟಿಗೋರ್ ಮತ್ತು ಟಿಯಾಗೋ ಕಾರಿನ ಕ್ರಮಾಂಕದ ಮಾದರಿಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿಯಾದರೂ ಇಂಧನ ಉತ್ತಮ ಇಂಧನ ದಕ್ಷತೆಯೊಂದಿಗೆ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿವೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!
ಸದ್ಯ ಟಿಗೋರ್ ಕಾರು ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.84 ಲಕ್ಷ ಬೆಲೆ ಹೊಂದಿದ್ದರೆ ಟಿಯಾಗೋ ಕಾರು ಮಾದರಿಯು ಆರಂಭಿಕವಾಗಿ ರೂ. 5.49 ಲಕ್ಷದಿಂದ ರೂ. 7.63 ಲಕ್ಷ ಬೆಲೆ ಹೊಂದಿದೆ.