ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಬಡವರು ಸಹ ಕಾರುಗಳನ್ನು ಖರೀದಿಸಲಿ ಎಂಬ ಉದ್ದೇಶದಿಂದ ಟಾಟಾ ಮೋಟಾರ್ಸ್ ಕಂಪನಿಯು ಕಡಿಮೆ ಬೆಲೆಯ ನ್ಯಾನೋ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಕಾರು ಭಾರತದ ಅಗ್ಗದ ಬೆಲೆಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಭಾರತದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಆದರೆ ಹಲವು ಕಾರಣಗಳಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಈಗ ಯುವಕನೊಬ್ಬ ನ್ಯಾನೋ ಕಾರ್ ಅನ್ನು ವಿಂಟೇಜ್ ಕಾರ್ ಆಗಿ ಪರಿವರ್ತಿಸಿರುವ ಬಗ್ಗೆ ವರದಿಯಾಗಿದೆ. ನ್ಯಾನೋ ಕಾರು ಈಗ ಮಾರಾಟವಾಗದೇ ಇದ್ದರೂ, ಈ ಹಿಂದೆ ಮಾರಾಟವಾಗಿದ್ದ ಕಾರುಗಳನ್ನು ಈಗಲೂ ಭಾರತದ ರಸ್ತೆಗಳಲ್ಲಿ ಕಾಣಬಹುದು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ದಿ ಗ್ಯಾರೇಜ್ ಲೈಫ್ ಮೋಟಾರ್ ಎಂಬ ಯುಟ್ಯೂಬ್ ಚಾನೆಲ್ ಟಾಟಾ ನ್ಯಾನೋ ಕಾರು ವಿಂಟೇಜ್ ಕಾರ್ ಆಗಿ ಬದಲಾಗಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಟಾಟಾ ನ್ಯಾನೋ ಕಾರು ಹೇಗೆ ಮಾಡಿಫೈಗೊಂಡಿತು ಎಂಬುದನ್ನು ವಿವರಿಸಿಲ್ಲ. ಬದಲಿಗೆ ಈ ಕಾರು ಯಾವ ರೀತಿ ಬದಲಾವಣೆಗಳಿಗೆ ಒಳಗಾಗಿದೆ ಎಂಬುದನ್ನು ವಿವರಿಸಲಾಗಿದೆ. ಈ ಕಾರು ಟಾಟಾ ನ್ಯಾನೋ ಅಲ್ಲವೇನೋ ಅನಿಸುವಷ್ಟರ ಮಟ್ಟಿಗೆ ಸಂಪೂರ್ಣವಾಗಿ ಮಾಡಿಫೈ ಮಾಡಲಾಗಿದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಸ್ಟೀಯರಿಂಗ್ ವ್ಹೀಲ್, ಸ್ಪೀಡೋಮೀಟರ್ ಹಾಗೂ ಇನ್ನಿತರ ಫೀಚರ್ ಗಳನ್ನು ನೋಡಿದ ನಂತರ ಇದನ್ನು ನ್ಯಾನೋ ಕಾರು ಎಂದು ಹೇಳಬಹುದು. ಈ ಕಾರಿನ ಹೊರಭಾಗದಲ್ಲಿದ್ದ ಎಲ್ಲಾ ಭಾಗಗಳನ್ನು ಬದಲಾಯಿಸಲಾಗಿದೆ. ಎಂಜಿನ್ ಹಾಗೂ ಚಾಸಿಸ್‌ನಂತಹ ಕೆಲವು ಪ್ರಮುಖ ಭಾಗಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳಲಾಗಿದೆ. ಚಾಸಿಸ್‌ಗೂ ಹೊಸ ಲುಕ್ ನೀಡಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಟಾಟಾ ನ್ಯಾನೋ ಅತಿ ಚಿಕ್ಕ ಕಾರು. ಆದರೆ ಮಾಡಿಫೈಗೊಂಡ ನಂತರ ಈ ಕಾರು ಉದ್ದವಾಗಿದೆ. ಇದರಿಂದ ಕಾರಿನ ಚಾಸಿಸ್ ನಲ್ಲಿಯೂ ಸಹ ಹಲವು ಬದಲಾವಣೆಗಳನ್ನು ಮಾಡಿರುವುದು ಸ್ಪಷ್ಟವಾಗಿದೆ. ಈ ಬದಲಾವಣೆಗಳಿಂದಾಗಿ ನ್ಯಾನೋ ಕಾರು ಸಂಪೂರ್ಣವಾಗಿ ರೆಟ್ರೋ ಕಾರ್ ಆಗಿ ಮಾರ್ಪಟ್ಟಿದೆ. ಈ ಕಾರು ರಸ್ತೆಗಿಳಿದರೆ ಜನರು ಈ ಕಾರ್ ಅನ್ನು ರಾಜರ ಕಾಲದ ಕಾರು ಎಂದು ಭಾವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಈ ಕಾರ್ ಅನ್ನು ಮಾಡಿಫೈ ಮಾಡಿರುವವರು ಅಷ್ಟು ಪರಿಪೂರ್ಣವಾಗಿಸಿದ್ದಾರೆ. ಆದರೆ ಕಾರ್ ಅನ್ನು ಮಾಡಿಫೈ ಮಾಡಿರುವವರ ಬಗ್ಗೆ ಯೂಟ್ಯೂಬ್ ಚಾನೆಲ್ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಕಾರಣಾಂತರಗಳಿಂದ ಅವರ ವಿವರಗಳನ್ನು ಮರೆಮಾಚಲಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಈ ರೀತಿ ವಾಹನಗಳನ್ನು ಮಾಡಿಫೈ ಮಾಡುವುದು ಅಪರಾಧ.

ಆದರೂ ನ್ಯಾನೋ ಕಾರ್ ಅನ್ನು ಕಣ್ಣು ಕುಕ್ಕುವಂತಹ ರೀತಿ ಮಾಡಿಫೈ ಮಾಡಲಾಗಿದೆ. ಈ ಕಾರಿನಲ್ಲಿರುವ ಪ್ಯಾನೆಲ್‌, ಹೆಡ್‌ಲೈಟ್‌, ಟರ್ನ್ ಇಂಡಿಕೇಟರ್‌, ವಿಂಡ್‌ಶೀಲ್ಡ್‌ ಹಾಗೂ ಹಾರ್ನ್‌ಗಳನ್ನು ಪುರಾತನ ಕಾರುಗಳಂತೆ ಕ್ಲಾಸಿಕ್ ನೋಟಕ್ಕಾಗಿ ಬಳಸಲಾಗಿದೆ. ಎರಡು ಹೆಡ್‌ಲೈಟ್‌ಗಳನ್ನು ವ್ಹೀಲ್ ಫೆಂಡರ್‌ನಲ್ಲಿ ಅಳವಡಿಸಲಾಗಿದ್ದರೆ, ಎರಡು ಹೆಡ್‌ಲೈಟ್‌ಗಳನ್ನು ಮುಂಭಾಗದ ಬಂಪರ್‌ನಲ್ಲಿ ಅಳವಡಿಸಲಾಗಿದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಇದರ ಜೊತೆಗೆ ಟರ್ನ್ ಇಂಡಿಕೇಟರ್‌ ಹಾಗೂ ಹಾರ್ನ್'ಗಳನ್ನು ಮುಂಭಾಗದ ಬಂಪರ್ ನಲ್ಲಿ ಅಳವಡಿಸಲಾಗಿದೆ. ಟಾಟಾ ನ್ಯಾನೋ ಹಿಂಭಾಗದಲ್ಲಿ ಎಂಜಿನ್ ಹೊಂದಿದೆ. ಜೊತೆಗೆ ಈ ಕಾರು ರೇರ್ ವ್ಹೀಲ್ ಡ್ರೈವ್ ವಾಹನವಾಗಿದೆ. ಟಾಟಾ ನ್ಯಾನೋ ಕಾರಿನಲ್ಲಿ 624 ಸಿಸಿ 4 ಸ್ಟ್ರೋಕ್, ವಾಟರ್ ಕೂಲ್ಡ್, ಟ್ವಿನ್-ಸಿಲಿಂಡರ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‌ಪಿ‌ಎಂನಲ್ಲಿ ಗರಿಷ್ಠ 33 ಬಿ‌ಹೆಚ್‌ಪಿ ಪವರ್ ಹಾಗೂ 3,500 ಆರ್‌ಪಿ‌ಎಂನಲ್ಲಿ 45 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಈ ಎಂಜಿನ್'ನೊಂದಿಗೆ 4 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೀಡಲಾಗಿದೆ. ಟಾಟಾ ನ್ಯಾನೋ ಕಾರಿನ ಬೆಲೆ 2009ರಲ್ಲಿ ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಗಳಾಗಿತ್ತು. ನಂತರ ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.97 ಲಕ್ಷಗಳಾಯಿತು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

2019 ರ ಜನವರಿಯಲ್ಲಿ ವಾಹನಗಳನ್ನು ಮಾರ್ಪಡಿಸುವುದು ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಕಾರುಗಳಲ್ಲಿ ಮಾಡುವ ಎಲ್ಲಾ ಮಾರ್ಪಾಡುಗಳು ಕಾನೂನುಬಾಹಿರವಲ್ಲ. ಕಾನೂನುಬದ್ಧವಾಗಿ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂಬುದನ್ನು ನೋಡುವುದಾದರೆ.....

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಟಯರ್‌ಗಳನ್ನು ಕಾನೂನುಬದ್ಧವಾಗಿ ಅಪ್ ಡೇಟ್ ಮಾಡಬಹುದು. ಆದರೆ ಹೊಸ ಟಯರ್ ಗಳು ತಯಾರಕ ಕಂಪನಿಗಳ ಅವಶ್ಯಕತೆಗಳಿಗೆ ಒಳಪಟ್ಟಿರಬೇಕು. ಹೊಸ ಟಯರ್‌ಗಳು ಅದೇ ವೇಗದ ರೇಟಿಂಗ್ (ಎ) ಅಥವಾ ಸ್ಟಾಕ್ ಟಯರ್‌ಗಳಿಗಿಂತ ಹೆಚ್ಚಿನದನ್ನು ಹೊಂದಿರ ಬೇಕಾಗುತ್ತದೆ. ಹೊಸ ಟಯರ್ ಗಳು ಹೆಚ್ಚು ಅಗಲವನ್ನು ಹೊಂದಿದ್ದರೆ, ಕಾರಿನ ಸೈಡ್ವಾಲ್ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಕಾರು ಮಾಲೀಕರು ತಮ್ಮ ಇಷ್ಟದ ಬಣ್ಣವನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಬಣ್ಣದ ಮಾರ್ಪಾಡುಗಳಿಗೆ ಆರ್‌ಟಿಒ ಅನುಮೋದನೆ ಪಡೆಯಬೇಕು. ಇದರ ಬಗ್ಗೆ ಕಾರಿನ ನೋಂದಣಿ ಪ್ರಮಾಣಪತ್ರದಲ್ಲಿ ಕಾರಿನ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ತಿಳಿಸಬೇಕು. ಆದರೆ ಆರ್ಮಿ ಗ್ರೀನ್ ಬಣ್ಣದಲ್ಲಿ ಕಾರುಗಳನ್ನು ಪೇಂಟ್ ಮಾಡುವಂತಿಲ್ಲ. ಈ ಬಣ್ಣವನ್ನು ಮಿಲಿಟರಿ ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಕಾರು ಮಾಲೀಕರು ತಮ್ಮ ಕಾರಿಗೆ ಅತ್ಯುತ್ತಮವಾದ ಸಸ್ಪೆಂಷನ್ ಪಡೆಯಬಹುದು. ಇದರಿಂದ ಕಾರು ಪ್ರಯಾಣದ ಅನುಭವ ಹೆಚ್ಚುತ್ತದೆ. ಆ್ಯಂಟಿ ರೋಲ್ ಬಾರ್ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಿರುವುಗಳಲ್ಲಿ ಕಾರು ತಿರುಗಿಸುವಾಗ ಬಾಡಿ ರೋಲ್‌ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಇದರಿಂದ ಆರಾಮದಾಯಕ ಸವಾರಿಯನ್ನು ಪಡೆಯಬಹುದು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಕಾರುಗಳಲ್ಲಿ ವಿಶೇಷ ಚೇತನರಿಗೆ ನೆರವಾಗುವ ಮಾರ್ಪಾಡುಗಳನ್ನು ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ವಿಶೇಷ ಚೇತನರಿಗಾಗಿ ಕಾರುಗಳಲ್ಲಿರುವ ಒಆರ್‌ವಿ‌ಎಂ, ವ್ಹೀಲ್‌ಚೇರ್ ಲಿಫ್ಟ್‌, ಆಟೋಮ್ಯಾಟಿಕ್ ಅಥವಾ ಕೈಯಿಂದ ಚಾಲಿತವಾಗುವ ಕ್ಲಚ್, ಆಕ್ಸಲರೇಟರ್, ಬ್ರೇಕ್‌ ಸೇರಿದಂತೆ ಕೆಲವು ಭಾಗಗಳನ್ನು ಮಾರ್ಪಾಡು ಮಾಡಬಹುದು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಕಾರುಗಳನ್ನು ಇನ್ನೂ ಹಲವು ರೀತಿಯಲ್ಲಿ ಮಾರ್ಪಡಿಸಬಹುದು. ಮಾರುತಿ ಸುಜುಕಿ ಆಲ್ಟೊ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್‌ನಂತಹ ಯಾವುದೇ ಕಾರನ್ನು ವಿಶೇಷ ಚೇತನರಿಗೆ ಸರಿಹೊಂದುವಂತೆ ಮಾರ್ಪಡಿಸಬಹುದು.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಬಾಡಿ ವ್ರಾಪ್ ಕಾರಿನ ಪೇಂಟ್‌ವರ್ಕ್‌ಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಬದಲಿಗೆ ವಿನೈಲ್ ಹೊದಿಕೆಯು ಕಾರಿನ ಫ್ಯಾಕ್ಟರಿ ಬಣ್ಣವನ್ನು ರಕ್ಷಿಸುತ್ತದೆ. ಈ ಮಾರ್ಪಾಡು ಮಾಡಲು ಕಾರು ಚಾಲಕರಿಗೆ ರೂ. 10 ಸಾವಿರಗಳಿಂದ ರೂ. 1 ಲಕ್ಷಗಳವರೆಗೆ ವೆಚ್ಚವಾಗಬಹುದು. ಇವುಗಳನ್ನು ಸರಿಯಾಗಿ ಅಳವಡಿಸಿದರೆ 5 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ವಿಂಟೇಜ್ ಕಾರಿನಂತೆ ಮಾಡಿಫೈಗೊಂಡ ಟಾಟಾ ನ್ಯಾನೋ ಕಾರು

ಕಾರಿನಲ್ಲಿ ವಿನೈಲ್ ಅನ್ನು ಹೊದಿಸುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸುತ್ತುವ ಮೊದಲು ಅಥವಾ ನಂತರ ಆರ್‌ಟಿ‌ಓ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕು. ಈ ರೀತಿ ಕಾನೂನು ಬದ್ಧವಾಗಿ ಕಾರ್ ಅನ್ನು ಮಾಡಿಫೈ ಮಾಡಬಹುದು.

ಗಮನಿಸಿ: ಮೊದಲ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tata nano car modified like a vintage car video details
Story first published: Saturday, December 4, 2021, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X