ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಭಾರತೀಯ ಮಾರಿಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದೇ ವೇಳೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ನೆಕ್ಸಾನ್ ಇವಿ ಕಾರನ್ನು ಸದ್ದಿಲ್ಲದೆ ನವೀಕರಿಸಿದೆ. ಈ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಹೊಂದಿದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂನಿಂದ ಬಟನ್ ಮತ್ತು ಡಯಲ್‌ಗಳನ್ನು ತೆಗೆದುಹಕಲಾಗಿದೆ. ಟಾಟಾ ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ನೆಕ್ಸಾನ್‌ನಲ್ಲಿ ಈ ನವೀಕರಣಗಳನ್ನು ಮಾಡಿದ್ದಾರೆ, ನೆಕ್ಸಾನ್ ಇವಿ ಕಾರಿನ 7 ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಬದಲಾಗದೆ ಉಳಿದಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ. ಇದರೊಂದಿಗೆ ಇದೀಗ 35ಕ್ಕೂ ಹೆಚ್ಚು ಕಾರು ಕನೆಕ್ಟಿವಿಟಿ ಫಿಚರ್ಸ್ ಹೊಂದಿರುವ ಝಡ್'ಕನೆಕ್ಟ್ ಟೆಅಪ್ಲಿಕೇಶನ್ ಅನ್ನು ಪಡೆಯುತ್ತದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಎರಡನೇ ಪ್ರಮುಖ ಬದಲಾವಣೆಯೆಂದರೆ, ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಇದು ಪಡೆದುಕೊಂಡಿದೆ. 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಉಳಿದಂತೆ ಯಾವುದೇ ನವೀಕರಣಗಳನ್ನು ಮಾಡಲಾಗಿಲ್ಲ,

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಈ ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಇದರಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಅನ್ನು ಹೊಂದಿದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಈ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ಈ ಎಲೆಕ್ಟ್ರಿಕ್ ಎಸ್‌ಯುವಿ ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಹೊಂದಿದೆ.

ಹೊಸ ನವೀಕರಣಗಳನ್ನು ಪಡೆಯಲಿದೆ ಜನಪ್ರಿಯ ಟಾಟಾ ನೆಕ್ಸಾನ್ ಇವಿ ಕಾರು

ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝಡ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರಾ ಇಎಕ್ಸ್‌ಯುವಿ 300 ಮಾದರಿಗೂ ಕೂಡ ನೆಕ್ಸಾನ್ ಇವಿ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Nexon EV Gets New Alloy wheels, Updated Infotainment System. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X