ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ‌ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿದೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಅತಿ ಹೆಚ್ಚು ಮಾರಾಟವಾಗುವ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ನೆಕ್ಸಾನ್ ಕಳೆದ ತಿಂಗಳು ಹೆಚ್ಚು ಮಾರಾಟವಾದ ಟಾಟಾ ಮಾದರಿಯಾಗಿದೆ. ಈ ವರ್ಷ ಜುಲೈ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 10,287 ಯುನಿಟ್‌ಗಳು ಮಾರಾಟವಾಗಿವೆ, ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 4,327 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.137.7 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ಇದೇ ಮೊದಲ ಬಾರಿಗೆ ಕಳೆದ ತಿಂಗಳು ಅತ್ಯಧಿಕ ಮಾರಾಟವನ್ನು ಕಂಡಿದೆ. ಇನ್ನು ತಿಂಗಳ ಮಾರಾಟದಲ್ಲಿ ಶೇ.101 ರಷ್ಟು ಮಾರಾಟ ಬೆಳವಣಿಗೆಯನ್ನು ಕಂಡಿದೆ,

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಹೆಚ್ಚು ಪೈಪೋಟಿ ಇರುವುದರಿಂದ ಟಾಟಾ ತನ್ನ ನೆಕ್ಸಾನ್ ಕಾರಿನ ಇಂಟಿರಿಯರ್ ಅನ್ನು ಇತ್ತೀಚೆಗೆ ನವೀಕರಿಸಿತು. ಇಂಟಿರಿಯರ್ ಅಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನಿಯಂತ್ರಿಸಲು ಬಳಸಲಾಗಿದ್ದ ಎಸಿ ವೆಂಟ್ ಗಳ ಅಡಿಯಲ್ಲಿ ಇರಿಸಲಾಗಿರುವ ಫಿಸಿಕಲ್ ಬಟನ್ ಗಳನ್ನು ತೆಗೆದುಹಾಕಿದೆ. ಬದಲಾಗಿ ಟಾಟಾ ಅಲ್ಲಿ ನೆಕ್ಸಾನ್ ಲೋಗೊವನ್ನು ಇರಿಸಲಾಗಿದೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಇನ್ನು ರೆಡಿಯೋವನ್ನು ನಿಯಂತ್ರಿಸಲು ಇದ್ದ ರೋಟರಿ ಡಯಲ್‌ಗಳನ್ನು ಸಹ ತೆಗೆದುಹಾಕಲಾಗಿದೆ, ಇನ್ಫೋಟೈನ್‌ಮೆಂಟ್ ಯುನಿಟ್ಗೆ ಸಂಯೋಜಿಸಲಾಗಿದೆ. ವಾಲ್ಯೂಮ್ ನಾಬ್ ಅನ್ನು ಮ್ಯೂಟ್ ಮತ್ತು ಪವರ್ ಆಫ್ ಕಾರ್ಯಗಳಿಗೆ ಸಹ ಬಳಸಬಹುದು.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಹೊಂದಿದೆ. ಇನ್ನು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹಿಂಭಾಗದ ಎಸಿ ವೆಂಟ್ಸ್ ಗಳನ್ನು ಒಳಗೊಂಡಿದೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಉಳಿದಂತ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಜನಪ್ರಿಯ ಮಾದರಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ನೆಕ್ಸಾನ್ ಕಾರಿನಲ್ಲಿ ಹೊಸ ಅಪ್‌ಡೇಟ್ ಗಳನ್ನು ಮಾಡಲಾಗಿತ್ತು.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಇದರೊಂದಿಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯ ಹೊರತಾಗಿ, ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ. ಈ ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಹೆಡ್‌ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ಟೀಯರಿಂಗ್-ಮೌಂಟಡ್ ಕಂಟ್ರೋಲ್ ಗಳನ್ನು ಹೊಂದಿವೆ.

ಜುಲೈ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ ಕಾರು ಟಾಟಾ ನೆಕ್ಸಾನ್

2018ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಕಾರಣ ನೆಕ್ಸಾನ್ ದೇಶಿಯ ಮಾರುಕಟ್ಟೆಯಲ್ಲಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ರೇಟಿಂಗ್‌ ಅನ್ನು ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಸಲ್ಲುತ್ತದೆ.

Most Read Articles

Kannada
English summary
Tata nexon getting high demand in india over 10000 units sold details
Story first published: Tuesday, August 3, 2021, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X