ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಕಾಂಪ್ಯಾಕ್ಟ್ ಎಸ್‌ಯು‌ವಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ. ಈ ಕಾರಣಕ್ಕೆ ಹಲವು ಕಾರು ತಯಾರಕ ಕಂಪನಿಗಳು ಈ ಸೆಗ್'ಮೆಂಟಿನಲ್ಲಿ ಹೊಸ ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ.

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇವುಗಳಲ್ಲಿ ದೇಶಿಯ ಮೂಲದ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಸಹ ಸೇರಿದೆ. ನೆಕ್ಸಾನ್ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ ಭಾಗವಹಿಸಿ 5-ಸ್ಟಾರ್ ಪಡೆದ ಮೊದಲ ಭಾರತೀಯ ನಿರ್ಮಿತ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಈ ಕಾರಣದಿಂದಾಗಿ ನೆಕ್ಸಾನ್, ಕಾರು ಉತ್ಸಾಹಿಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಇತ್ತೀಚೆಗೆ ಟಾಟಾ ನೆಕ್ಸಾನ್‌ ಕಾರ್ ಅನ್ನು ಮಾಡಿಫೈ ಮಾಡಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಮಾಡಿಫೈಗೊಂಡಿರುವ ಈ ಕಾರು ಆಕರ್ಷಕವಾಗಿ ಕಾಣುತ್ತಿದೆ. ಈ ಕಾರಿನ ಚಿತ್ರಗಳನ್ನು ಫೇಸ್‌ಬುಕ್ ಪೇಜ್'ನಲ್ಲಿ ಶೇರ್ ಮಾಡಲಾಗಿದೆ. ಮಾಡಿಫೈಗೊಂಡಿರುವ ಈ ಕಾರಿನಲ್ಲಿ ಗ್ರಾಫಿಕಲ್ ಡೆಕಲ್‌ಗಳನ್ನು ಬಳಸಲಾಗಿದೆ.

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಮಾಡಿಫೈಗೊಂಡಿರುವ ಕಾರು ನೀಲಿ ಬಣ್ಣದಲ್ಲಿದೆ. ಈ ಕಾರಿನ ಆಲಾಯ್ ವ್ಹೀಲ್'ಗಳನ್ನು ಸಹ ಬದಲಿಸಲಾಗಿದ್ದು, ಹೊಸದಾಗಿ ಕಪ್ಪು ಬಣ್ಣದ ಆಲಾಯ್ ವ್ಹೀಲ್'ಗಳನ್ನು ಅಳವಡಿಸಲಾಗಿದೆ. ಕೆಂಪು-ಬಣ್ಣದ ಬ್ರೇಕ್ ಕಾಲಿಪರ್‌ಗಳನ್ನು ಬಳಸಿರುವುದರಿಂದ ಕಾರಿನ ಲುಕ್ ಆಕರ್ಷಕವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್‌ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ನೆಕ್ಸಾನ್‌ ಫೇಸ್‌ಲಿಫ್ಟ್‌ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಫೇಸ್‌ಲಿಫ್ಟ್‌ ಕಾರು ಹಳೆಯ ಮಾದರಿಗಿಂತ ಹೆಚ್ಚು ಶಾರ್ಪ್ ಆಗಿದ್ದು, ಸ್ಟೈಲಿಶ್ ಅಪ್ ಡೇಟ್'ಗಳನ್ನು ಹೊಂದಿದೆ.

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಕಂಪನಿಯು ಹೊಸ ಫೇಸ್‌ಲಿಫ್ಟ್ ನೆಕ್ಸಾನ್‌ ಕಾರಿನಲ್ಲಿ ಹಲವಾರು ಕಾಸ್ಮೆಟಿಕ್ ಅಪ್ ಡೇಟ್'ಗಳನ್ನು ಮಾಡಿದೆ. ಹೊಸ ನೆಕ್ಸಾನ್‌ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಹೊಂದಿರುವುದರಿಂದ ಈ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹಲವಾರು ಸುರಕ್ಷತಾ ಫೀಚರ್'ಗಳನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇವುಗಳಲ್ಲಿ ಎಬಿಎಸ್ ವಿಥ್ ಇಬಿಡಿ, ರೋಲ್-ಓವರ್ ಮಿಟಿಗೇಷನ್, ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ಅಲರ್ಟ್, ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್, ಲೋಡ್-ಲಿಮಿಟರ್ ಹೊಂದಿರುವ ಪ್ರಿ-ಟೆನ್ಷನರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ ಹಾಗೂ ಇನ್ನಿತರ ಫೀಚರ್'ಗಳು ಸೇರಿವೆ.

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ಈ ಕಾರಿನಲ್ಲಿರುವ ಎಂಜಿನ್ ಬಗ್ಗೆ ಹೇಳುವುದಾದರೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಾರ್ ಅನ್ನು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಗ್ರಾಫಿಕಲ್ ಡೆಕಲ್‌ಗಳೊಂದಿಗೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 170 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರ್ ಡೀಸೆಲ್ ಎಂಜಿನ್ 110 ಬಿಹೆಚ್‌ಪಿ ಪವರ್ ಹಾಗೂ 260 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಚಿತ್ರಕೃಪೆ: ಫೇಸ್‌ಬುಕ್ / ಟಾಟಾ ನೆಕ್ಸಾನ್‌ ಮಾಡಿಫಿಕೇಶನ್ / ಆಕ್ಸೆಸರಿಸ್

Most Read Articles

Kannada
English summary
Tata Nexon modified with graphical decals and new alloy wheels. Read in Kannada.
Story first published: Tuesday, March 9, 2021, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X