Just In
- 3 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 4 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 4 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 6 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies ಕುಚಿಕು ಕುಚಿಕು: 'ಸೀತಾರಾಮ' ಧಾರಾವಾಹಿಯ ಅಶೋಕ್, ರಾಮ್ ರಿಯಲ್ ಲೈಫ್ನಲ್ಲಿ ಎಷ್ಟು ಕ್ಲೋಸ್ ನೋಡಿ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಐಕಾನಿಕ್ ಟಾಟಾ ಸಫಾರಿ ಎಸ್ಯುವಿ
ಟಾಟಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ 7-ಸೀಟರ್ ಎಸ್ಯುವಿಯನ್ನು ಸಫಾರಿ ಹೆಸರಿನಲ್ಲಿ ಬಿಡುಗಡೆಗೊಳಿಸಲಿದೆ. ಟಾಟಾ ತನ್ನ ಈ ಹೊಸ ಸಫಾರಿ ಎಸ್ಯುವಿಗಾಗಿ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಇದೀಗ ಟಾಟಾ ಹೊಸ ಸಫಾರಿ ಎಸ್ಯುವಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ಚಿತ್ರದಲ್ಲಿ ಆಕರ್ಷಕವಾಗಿದ್ದು, ಈ ಎಸ್ಯುವಿಯ ಹೊಸ ಫ್ರಂಟ್ ಗ್ರಿಲ್ ಹ್ಯಾರಿಯರ್ ಮಾದರಿಗಿಂತ ಭಿನ್ನವಾಗಿದೆ. ಆದರೆ ಪ್ರೊಜೆಕ್ಟರ್ ಹೆಡ್ಲೈಟ್ಗಳು ಒಂದೇ ರೀತಿಯಲ್ಲಿದೆ. ಈ ಹೊಸ ಟಾಟಾ ಸಫಾರಿ ಎಸ್ಯುವಿಯು ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಆರಂಭದಲ್ಲಿ 7-ಸೀಟರ್ ಎಸ್ಯುವಿಯನ್ನು ಗ್ರಾವಿಟಾಸ್ ಎಂದು ಕರೆಯಲಾಗುತ್ತಿತ್ತು, ಆದರೆ ಎಸ್ಯುವಿಗೆ ಅಧಿಕೃತವಾಗಿ ಸಫಾರಿ ಎಂದು ಹೆಸರಿಡಲಾಗಿದೆ. ಈ ಹೊಸ ಎಸ್ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಆದರೆ ಈ ಹೊಸ ಎಸ್ಯುವಿಗೆ ಐಕಾನಿಕ್ ಆದ ಸಫಾರಿ ಹೆಸರನ್ನು ನೀಡವ ಮೂಲಕ ಕುತೂಹಲವನ್ನು ಮೂಡಿಸಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು
ಕಂಪನಿಯ ಪ್ರಕಾರ, ಭಾರತದಲ್ಲಿ ಟಾಟಾ ಸಫಾರಿ ಲೈಫ್ ಸ್ಟೈಲ್ ಎಸ್ಯುವಿಯಾಗಿರಲಿದೆ ಮತ್ತು ಈ ವಿಭಾಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಬಹುದು. ಸಫಾರಿ ಭಾರತದಲ್ಲಿ ಎರಡು ದಶಕಗಳವರೆಗೆ ಮಾರಾಟವಾದ ಎಸ್ಯುವಿಯಾಗಿದೆ.
ಇದೀಗ ಹೊಸ ರೂಪಾತಾಳಿ ಮತ್ತೆ ಈ ಐಕಾನಿಕ್ ಸಫಾರಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಗ್ರಾಹಕರ ಗಮನಸೆಳೆಯಲು ಸಫಾರಿ ಎಸ್ಯುವಿಯ ಟ್ಯಾಗ್ ಲೈನ್ 'ರಿಕ್ಲೈಮ್ ದೇರ್ ಲೈಫ್' ತರಲು ಕಂಪನಿಯು ಸಜ್ಜಾಗಿದೆ. ಹೊಸ ಸಫಾರಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಲ್ಯಾಂಡ್ ರೋವರ್ನಿಂದ ಹೆಸರಾಂತ ಡಿ8 ಪ್ಲಾಟ್ಫಾರ್ಮ್ನಿಂದ ಪಡೆದ ಒಮೆಗಾರ್ಕ್ ಪ್ಲಾಟ್ಫಾರ್ಮ್ ಜೊತೆಗೆ ಎಸ್ಯುವಿ ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ.
ಟಾಟಾ ಸಫಾರಿ 2.0-ಲೀಟರ್, ನಾಲ್ಕು ಸಿಲಿಂಡರ್, 'ಕ್ರಯೋಟೆಕ್' ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 168 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ
ಹೊಸ ಸಫಾರಿ ಎಸ್ಯುವಿಗಾಗಿ ಇದೇ ತಿಂಗಳಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಿದೆ ಎಂದು ಟಾಟಾ ಖಚಿತಪಡಿಸಿದೆ. ಈ ಹೊಸ ಸಫಾರಿ ಎಸ್ಯುವಿಯಲ್ಲಿ ಫ್ಹೂರ್ ವ್ಹೀಲ್ ಡ್ರೈವ್ ಕಾನ್ಫಿಗರೇಷನ್ ಅನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೆದೆ. ಈ ಎಸ್ಯುವಿಯು ಉತ್ತಮ ಆಫ್-ರೋಡ್ ಸಾಮರ್ಧ್ಯವನ್ನು ಹೊಂದಿದ್ದರೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಹೊಸ ಟಾಟಾ ಸಫಾರಿ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪಾರುಪತ್ಯ ಸಾಧಿಸಲು ಸಜಾಗುತ್ತಿದೆ. ಈಗಗಾಲೇ ಟಾಟಾ ಕಂಪನಿಯು ಹೊಸ ಎಸ್ಯುವಿಯನ್ನು ಸಫಾರಿ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದಾಗಲೇ ಸಾಕಷ್ಟು ಕುತೂಹಲ ಮತ್ತು ಸಂಚಲನವನ್ನು ಸೃಷ್ಟಿಸಿದೆ.