ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಬಹುನೀರಿಕ್ಷಿತ ಟಾಟಾ ಪಂಚ್(Tata Punch) ಮೈಕ್ರೊ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಪಂಚ್ ಕಾರಿನ ಇಂಧನ ದಕ್ಷತೆ ಕುರಿತಾಗಿ ಮಾಹಿತಿಯು ಇದೀಗ ಬಹಿರಂಗವಾಗಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಪಂಚ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪರಿಚಯಿಸಿದ್ದು, ಗ್ರಾಹಕರು ಹೊಸ ಕಾರನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಸಬಹುದಾಗಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಪಂಚ್ ಕಾರು ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್(83 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್) ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಮೈಲೇಜ್ ಪಡೆದುಕೊಂಡಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಕಾರಿನ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 18.97 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.82 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಕಾರುಗಳಲ್ಲಿ ಹೆಚ್ಚಿನ ಮಟ್ಟದ ಗ್ರಾಹಕರು ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಸುಲಭ ಚಾಲನೆಗಾಗಿ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ಪಂಚ್ ಕಾರಿನಲ್ಲೂ ಕೂಡಾ ಮ್ಯಾನುವಲ್ ಮಾದರಿಗಿಂತಲೂ ಆಟೋಮ್ಯಾಟಿಕ್ ಮಾದರಿಗೆ ಹೆಚ್ಚಿನ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಪಂಚ್ ಕಾರಿನಲ್ಲಿ ಮ್ಯಾನುವಲ್ ಮಾದರಿಗಿಂತಲೂ ಆಟೋಮ್ಯಾಟಿಕ್ ಮಾದರಿಯು ಹೆಚ್ಚುವರಿಯಾಗಿ ರೂ.60 ಸಾವಿರದಷ್ಟು ದುಬಾರಿಯಾಗಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಅಲ್ಫಾ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಟಾಟಾ ಪಂಚ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಪಂಚ್ ಕಾರಿನಲ್ಲಿ ವಿಭಜಿತವಾಗಿರುವ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ವೆರಿಯೆಂಟ್‌ಗಳಿಗೆ ಅನುಗುಣವಾಗಿ 15 ಮತ್ತು 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರಿನಲ್ಲಿ ಟಾಟಾ ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಜೊತೆಗೆ ಟಾಟಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ಫೀಚರ್ಸ್‌ಗಳನ್ನು ನೀಡಿದ್ದು, ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೊಲ್, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟಿಂಗ್ ಸಿಸ್ಟಂ, ಹೈ ಸ್ಪೀಡ್ ಅಲರ್ಟ್ ಸೌಲಭ್ಯಗಳಿಲಿವೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಎಸಿ ಕಂಟ್ರೋಲ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ರಿಯರ್ ಆರ್ಮ್ ರೆಸ್ಟ್, ಲೆದರ್ ಸ್ಟೀರಿಂಗ್ ಮತ್ತು ಗೇರ್ ನಾಬ್, 5 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 90 ಡಿಗ್ರಿ ಡೋರ್ ಓಪನ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಈ ಮೂಲಕ ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೊಸ ಕಾರು ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ನೊಂದಿಗೆ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನ ರಿದಿಂ, ಡ್ಯಾಜಲ್ ಮತ್ತು ಐರಾ ಎನ್ನುವ ಮೂರು ಕಸ್ಟಮೈಜ್ಡ್ ಪ್ಯಾಕೇಜ್ ಅಳವಡಿಕೆ ಸಹ ಲಭ್ಯವಿದೆ.

ಹೊಸ Tata Punch ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಟಾಪ್ ಎಂಡ್ ಮಾದರಿಗಳಲ್ಲಿರುವ ಐರಾ ಕಾರ್ ಟೆಕ್ನಾಲಜಿಯು ಮತ್ತೊಂದು ಪ್ರಮುಖ ಸೇಫ್ಟಿ ಫೀಚರ್ಸ್ ಆಗಿದ್ದು, ಒಂದೇ ಸೂರಿನಡಿ 27 ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಐರಾ(iRA) ಸಹಕಾರಿಯಾಗಿದೆ. ಸ್ಮಾರ್ಟ್‌ಫೋನ್ ಸಂಪರ್ಕಿತ ಐರಾ ಕಾರ್ ಕನೆಕ್ಟ್ ತಂತ್ರಜ್ಞಾನವನ್ನು ಕನೆಕ್ಟ್ ನೆಕ್ಸ್ಟ್ ಎಂಬ ಡೆಡಿಕೇಟೆಡ್ ಆ್ಯಪ್ ಮೂಲಕವೇ ಕಾರಿನ ಹಲವು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

Most Read Articles

Kannada
English summary
Tata revealed punch micro suv fuel efficiency details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X