ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡ್ ಎಡಿಷನ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರು ಉತ್ಪನ್ನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಕಂಪನಿಯು ಇದೀಗ ಸಫಾರಿ ಎಸ್‌ಯುವಿ ಮಾದರಿಯಲ್ಲಿ ವಿಶೇಷ ಆವೃತ್ತಿಯೊಂದನ್ನು ಬಿಡುಗಡೆ ಮಾಡಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಯುಎಇನಲ್ಲಿ ಆರಂಭವಾಗುತ್ತಿರುವ 14ನೇ ಆವೃತ್ತಿಯ ವಿವೊ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಿಸಿಸಿಐ ಜೊತೆಗೆ ಸತತ ನಾಲ್ಕನೇ ವರ್ಷವೂ ಪಾಲುದಾರಿಕೆ ಪ್ರಕಟಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ನ್ಯೂ ಸಫಾರಿ ಎಸ್‌ಯುವಿ ಮಾದರಿಯನ್ನು ಟೂರ್ನಿಯಲ್ಲಿ ಪ್ರದರ್ಶನಗೊಳಿಸಲಿದೆ. ಐಪಿಎಲ್ ಉದ್ದೇಶಕ್ಕಾಗಿ ಕಂಪನಿಯು ಸಫಾರಿ ಎಸ್‌ಯುವಿ ಗೋಲ್ಡ್ ಎಡಿಷನ್ ಪರಿಚಯಿಸಿದ್ದು, ಹೊಸ ಕಾರು ಮೊದಲು ಟೂರ್ನಿಯಲ್ಲಿ ಪ್ರದರ್ಶನಗೊಂಡ ನಂತರಷ್ಟೇ ಗ್ರಾಹಕರ ಕೈಸೇರಲಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

2018ರಿಂದಲೇ ಬಿಸಿಸಿಐ ಜೊತೆಗೆ ಅಧಿಕೃತ ಪಾಲುದಾರಿಕೆ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಮೊಲು ಮೂರು ವರ್ಷಗಳ ಪಾಲುದಾರಿಕೆ ವಹಿಸಿಕೊಂಡಿತ್ತು. ಇದೀಗ ನಾಲ್ಕನೇ ವರ್ಷಕ್ಕೂ ಪಾಲುದಾರಿಕೆ ಮುಂದುವರಿಸಲಾಗಿದ್ದು, ತನ್ನ ಹೊಸ ತಲೆಮಾರಿನ ಸಫಾರಿ ಎಸ್‌ಯುವಿ ಮಾದರಿಯನ್ನು ಹೊಸ ಆವೃತ್ತಿಯೊಂದಿಗೆ ಪ್ರತಿ ಟೂರ್ನಿಯಲ್ಲೂ ಪ್ರದರ್ಶನಗೊಳಿಸಲಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಗೋಲ್ಡ್ ಆವೃತ್ತಿಯನ್ನು ಪ್ರಮುಖ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್‌ಜೆಡ್ ಪ್ಲಸ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 21.89 ಲಕ್ಷಕ್ಕೆ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆಟೋಮ್ಯಾಟಿಕ್ ಮಾದರಿಯು ರೂ. 23.17 ಲಕ್ಷ ಬೆಲೆ ಹೊಂದಿವೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಆರಂಭಿಕ ಮಾದರಿಯಾದ ಫ್ರಾಸ್ಟ್ ವೈಟ್ ಬಾಡಿ ಪೇಂಟ್ ಹೊಂದಿರುವ ವೈಟ್ ಗೋಲ್ಡ್ ಆವೃತ್ತಿಯು ಬ್ಲ್ಯಾಕ್ ಕಾಂಟ್ರಾಸ್ಟ್ ರೂಫ್ ಜೊತೆಗೆ ಗ್ರಿಲ್, ಹೆಡ್‌ಲ್ಯಾಂಪ್ ಸುತ್ತಮತ್ತ, ರೂಫ್ ರೈಲ್ಸ್, ಡೋರ್ ಹ್ಯಾಂಡಲ್‌ಮತ್ತು ಬ್ಯಾಡ್ಜ್‌ಗಳಲ್ಲಿ ಗೋಲ್ಡ್ ಆಕ್ಸೆಂಟ್ ನೀಡಲಾಗಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಹಾಗೆಯೇ ಬ್ಲ್ಯಾಕ್ ಎಡಿಷನ್ ಹೊಂದಿರುವ ಮಾದರಿಯಲ್ಲೂ ಬ್ಲ್ಯಾಕ್ ಕಂಟ್ರಾಸ್ಟ್ ಜೊತೆಗೆ ಗೋಲ್ಡ್ ಆಕ್ಸೆಂಟ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗದಲ್ಲಿ ಎಸಿ ವೆಂಟ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೋರ್ ಹ್ಯಾಂಡಲ್ಸ್ ಮತ್ತು ಸೀಟ್ ಹೆಡ್‌ರೆಸ್ಟ್ ಸುತ್ತಲೂ ಗೋಲ್ಡ್ ಆಕ್ಸೆಂಟ್ ಒಳಗೊಂಡಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಜೊತೆಗೆ ಹೊಸ ಕಾರಿನಲ್ಲಿ ಓಲಿಸ್ಟರ್ ವೈಟ್ ಡೈಮಂಡ್ ಕ್ವಿಲ್ಟೆಡ್ ಲೆದರ್ ಸೀಟುಗಳು, 1 ನೇ ಮತ್ತು 2 ನೇ ಸಾಲುಗಳಲ್ಲೂ ವೆಂಟೆಲೇಷನ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸೌಲಭ್ಯಗಳನ್ನು ನೀಡಲಾಗಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ವಿಶೇಷವೆಂದರೆ ಟಾಟಾ ಮೋಟಾರ್ಸ್ ಕಂಪನಿಯು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗಾಗಿಯೇ 'ಸಫಾರಿ ಗೋಲ್ಡ್ ಹಿಟ್ ಚಾಲೆಂಜ್' ಅನ್ನು ಪರಿಚಯಿಸಿದ್ದು, ಹೊಸ ಚಾಲೆಂಜ್‌ನಲ್ಲಿ ಬ್ಯಾಟ್ಸ್‌ಮನ್ ಪ್ರತಿ ಬಾರಿಯು ಸಿಕ್ಸರ್ ಹೊಡೆದಾಗ ಆ ಚೆಂಡು ಸಫಾರಿ ಕಾರು ಅಥವಾ ಕಾರ್ ಡಿಸ್‌ಪ್ಲೇ ವೇದಿಕೆಗೆ ಮಟ್ಟಿದ್ದಲ್ಲಿ ಪ್ರತಿ ಹೊಡೆತ ರೂ. 2 ಲಕ್ಷ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲು ನಿರ್ಧರಿಸಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಸಫಾರಿ ಕಾರು ಪ್ರದರ್ಶನಗೊಳ್ಳುವ ವೇದಿಕೆಗೆ ಅಪ್ಪಳಿಸುವ ಪ್ರತಿ ಸಿಕ್ಸರ್‌ಗೂ ರೂ.2 ಲಕ್ಷ ದೇಣಿಗೆಯನ್ನು ಘೋಷಣೆ ಮಾಡಿದ್ದು, ಕೋವಿಡ್ ಪರಿಹಾರವಾಗಿ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ಹೊಸ ಮಾದರಿಯಲ್ಲಿ ದೇಣಿಗೆ ಸಂಗ್ರಹಿಕಸಲು ಹೊಸ ಯೋಜನೆ ರೂಪಿಸಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಇದರೊಂದಿಗೆ ಸಫಾರಿ ಹೊಸ ಆವೃತ್ತಿಯ ಮತ್ತೊಂದು ವಿಶೇಷವೆಂದರೆ ನ್ಯೂ ಜನರೇಷನ್ ಸಫಾರಿ ಮಾದರಿಯು ಇದುವರೆಗೆ ಸುಮಾರು 10 ಸಾವಿರ ಯುನಿಟ್‌ಗಳು ಉತ್ಪಾದನೆಗೊಂಡಿದ್ದು, 10 ಸಾವಿರ ಯುನಿಟ್ ಉತ್ಪಾದನೆ ಸಂಭ್ರಮ ಭಾಗವಾಗಿಯೂ ಗೋಲ್ಡನ್ ಎಡಿಷನ್ ಮಾರುಕಟ್ಟೆ ಪ್ರವೇಶಿಸಿದೆ ಎಂದು ಟಾಟಾ ಮೋಟಾರ್ಸ್ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಐಪಿಎಲ್‌ನಲ್ಲಿ ಪ್ರದರ್ಶನಗೊಂಡ ನಂತರಷ್ಟೇ ಹೊಸ ಸಫಾರಿ ಗೋಲ್ಡ್ ಎಡಿಷನ್ ಗ್ರಾಹಕರ ಸೇರಲಿದ್ದು, ಹೊಸ ಕಾರು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರಬಹುದಾಗಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಇನ್ನು ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ತಿಂಗಳಿನಲ್ಲಿಯೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನ್ಯೂ ಜನರೇಷನ್ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಗೋಲ್ಡ್ ಎಡಿಷನ್ ಹೊರತುಪಡಿಸಿ ಸಫಾರಿ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಸಫಾರಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಹೊಸ ಎಡಿಷನ್ ಸೇರ್ಪಡೆ ನಂತರ ಟಾಪ್ ಎಂಡ್ ಮಾದರಿಯು ರೂ. 23.17 ಲಕ್ಷ ಬೆಲೆ ಹೊಂದಿದ್ದು, ಒಮೆಗಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳುವ ಮೂಲಕ ಹೊಸ ಸಫಾರಿ ಕಾರು ಐಷಾರಾಮಿ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ವಿಶೇಷ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಂಡ Tata Safari ಗೋಲ್ಡನ್ ಎಡಿಷನ್

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

Most Read Articles

Kannada
English summary
Tata safari gold edition launched in india at rs 21 89 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X