Just In
- 7 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 9 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 10 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 10 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸಫಾರಿ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಕಾರು ಮಾದರಿಯಾದ ಸಫಾರಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಸಫಾರಿ ಆಕ್ಸೆಸರಿಸ್ ಪ್ಯಾಕೇಜ್ನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ಗಳನ್ನು ಒದಗಿಸಲಿದ್ದು, ಏಳು ವಿವಿಧ ಪ್ಯಾಕೇಜ್ ಮೂಲಕ ಗ್ರಾಹಕರ ಬೇಡಿಕೆಗಳನ್ನು ಪೂರೈಸಲಾಗುತ್ತಿದೆ. ವಿವಿಧ ಪ್ಯಾಕೇಜ್ಗಳಲ್ಲಿ ವಿವಿಧ ಮಾದರಿಯ ಆಕ್ಸೆಸರಿಸ್ಗಳು ಲಭ್ಯವಿದ್ದು, ಫೀಚರ್ಸ್ಗಳ ಆಧಾರದ ದರ ನಿರ್ಧಾರವಾಗಲಿದ್ದು, ಆಕ್ಸಸರಿಸ್ ಪ್ಯಾಕೇಜ್ ದರವು ಕಾರಿನ ಮೂಲ ಬೆಲೆಯನ್ನು ಹೊರತುಪಡಿಸಿ ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ಅಚಿವ್, ಪ್ರೊ, ಅಡ್ವೆಂಚರ್, ಅಡ್ವೆಂಚರ್ ಪ್ರೋ, ಡಿಸೈನ್, ಸೇಫ್ಟಿ ಮತ್ತು ಕಂಫರ್ಟ್ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗುತ್ತಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಪ್ರಮುಖವಾಗಿ ರೂಫ್ ರಾಕ್, ಬ್ಯಾನೆಟ್ ಸಫಾರಿ ಲೊಗೊ, ಸೈಕಲ್ ಮೌಂಟ್, ಅಂಡರ್ಬಾಡಿ ಲೈಟ್ಸ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕ್ರೊಮ್ ಸೌಲಭ್ಯಗಳು, ಸೈಡ್ ಸ್ಟೆಪ್ಸ್ ನೀಡಲಾಗುತ್ತಿದೆ.

ಹೊಸ ಕಾರಿನ ಒಳಭಾಗದ ಆಕ್ಸೆಸರಿಸ್ನಲ್ಲಿ ಹಿಂಬದಿಯ ಸವಾರರಿಗಾಗಿ ಇನ್ಪೋಟೈನ್ಮೆಂಟ್ ಸಿಸ್ಟಂ, ವೈರ್ಲೆಸ್ ಚಾರ್ಜರ್, ಪೆಡಲ್ ಲ್ಯಾಂಪ್ಸ್, ಕೋಡ್ ಹ್ಯಾಂಗರ್, ಸನ್ ಶೇಡ್, 3ಡಿ ಮ್ಯಾಟ್ಸ್, ನೆಕ್ ರೆಸ್ಟ್ ಕೂಷನ್, ಆ್ಯಂಟಿ ಸ್ಕಿಡ್ ಡ್ಯಾಶ್ ಮೌಂಟ್, ವೀಲ್ಹ್ ಸ್ಟೆಪ್, ಡ್ಯಾಶ್ ಕ್ಯಾಮೆರಾ, ಎಮರ್ಜೆನ್ಸಿ ಟೂಲ್ ಕಿಟ್ ಸೇರಿದಂತೆ ಹಲವಾರು ತಾಂತ್ರಿಕ ಅಂಶಗಳನ್ನು ಹೆಚ್ಚುವರಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್ ಹೊರತುಪಡಿಸಿ ಹೊಸ ಕಾರಿನಲ್ಲಿ ಟಾಟಾ ಕಂಪನಿಯು ಹಲವಾರು ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, 2021ರ ಸಫಾರಿ ಆವೃತ್ತಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್ಟಿ, ಎಕ್ಸ್ಟಿ ಪ್ಲಸ್, ಎಕ್ಸ್ಜೆಡ್, ಎಕ್ಸ್ಜೆಡ್ ಪ್ಲಸ್ ಮತ್ತು ಎಕ್ಸ್ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಮಾದರಿಗಳಲ್ಲಿ ಖರೀದಿಸಬಹುದು.

ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್ಶೋರೂಂ ಪ್ರಕಾರ ರೂ.14.69 ಲಕ್ಷದಿಂದ ರೂ. 21.25 ಲಕ್ಷ ಬೆಲೆ ಹೊಂದಿದ್ದಲ್ಲಿ ಅಡ್ವೆಂಚರ್ ಪೆರಸೊನಾ ಮಾದರಿಯು ಎಕ್ಸ್ಶೋರೂಂ ಪ್ರಕಾರ ರೂ. 20.20 ಲಕ್ಷದಿಂದ ರೂ. 21.45 ಲಕ್ಷ ಬೆಲೆ ಪಡೆದುಕೊಂಡಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಸ್ಟ್ಯಾಂಡರ್ಡ್ ಎಕ್ಸ್ಜೆಡ್ ಪ್ಲಸ್ ಆಧರಿಸಿ ಅಭಿವೃದ್ದಿಗೊಂಡಿರುವ ಎಕ್ಸ್ಜೆಡ್ ಪ್ಲಸ್ ಪೆರಸೊನಾ ಅಡ್ವೆಂಚರ್ ಕಾರು ಮಾದರಿಯು ತಾಂತ್ರಿಕವಾಗಿ ಸ್ಟ್ಯಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಅಡ್ವೆಂಚರ್ ಮಾದರಿಯಾಗಿ ಗುರುತಿಸಿಕೊಳ್ಳಲು ಮೈಸ್ಟಿಕ್ ಬ್ಲ್ಯೂ ಬಣ್ಣದ ಆಯ್ಕೆಯೊಂದಿಗೆ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿದೆ.

ಸಫಾರಿ ಎಸ್ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 168-ಬಿಎಚ್ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟಾಟಾ ಕಂಪನಿಯು ಹೊಸ ಕಾರಿನ ಪ್ರತಿ ಮಾದರಿಯಲ್ಲೂ ಸದ್ಯಕ್ಕೆ 2 ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯಾಗಿರುವ ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಆಫ್ ರೋಡ್ ಪರ್ಫಾಮೆನ್ಸ್ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಿರುವುದಾಗಿ ಮಾಹಿತಿ ಹಂಚಿಕೊಂಡಿದೆ.