ಹೊಸ ವಿನ್ಯಾಸದೊಂದಿಗೆ ಟಾಟಾ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಟಿಯಾಗೋ ಕಾರಿನ ಎನ್‌ಆರ್‌ಜಿ ಆವೃತ್ತಿಯನ್ನು ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.57 ಲಕ್ಷ ಬೆಲೆ ಹೊಂದಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಭಾರತದಲ್ಲಿ ಹೊಸ ಎಮಿಷನ್ ಜಾರಿ ನಂತರ ಕಳೆದ ವರ್ಷದ ಆರಂಭದಲ್ಲೇ ಟಿಯಾಗೋ ಎನ್‌ಆರ್‌ಜಿ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೊಸ ವಿನ್ಯಾಸ ಮತ್ತು ಉನ್ನತೀಕರಿಸಿದ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಹೊಸ ಕಾರಿನಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.57 ಲಕ್ಷ ಬೆಲೆ ಹೊಂದಿದ್ದರೆ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯು ರೂ. 7.09 ಲಕ್ಷ ಬೆಲೆ ಹೊಂದಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಹಳೆಯ ಆವೃತ್ತಿಗಿಂತಲೂ ಹೊಸ ಟಿಯಾಗೋ ಎನ್‌ಆರ್‌ಜಿ ಮಾದರಿಯು ಆಕರ್ಷಕ ವಿನ್ಯಾಸ ಪಡೆದುಕೊಂಡಿದ್ದು, ಹೊರಭಾಗದ ಪ್ರಮುಖ ತಾಂತ್ರಿಕ ಅಂಶಗಳು ಬದಲಾವಣೆಗೊಂಡಿವೆ. ಹೊಸ ಕಾರಿನಲ್ಲಿ ಈ ಬಾರಿ 15-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್ಸ್ ಮತ್ತು ಬ್ಲ್ಯಾಕ್ ಔಟ್ ರೂಫ್ ನೀಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಹೊಸ ಕಾರಿನ ಆಫ್ ರೋಡ್ ಸಾಮರ್ಥ್ಯ ಹೆಚ್ಚಿಸಲು ಡ್ಯುಯಲ್ ಪಾತ್ ಸಸ್ಷೆಷನ್ ನೀಡಲಾಗಿದ್ದು, ಈ ಮೂಲಕ ಹೊಸ ಕಾರಿನಲ್ಲಿ 181 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಜೊತೆಗೆ ಬಾಡಿ ಕ್ಲಾಡಿಂಗ್ ಕಾರಿನ ನೋಟಕ್ಕೆ ಹೊಸ ಮೆರುಗು ನೀಡಿವೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಟಿಯಾಗೋ ಎನ್‌ಆರ್‌ಜಿ ವರ್ಷನ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ ಹಲವಾರು ತಾಂತ್ರಿಕ ಅಂಶಗಳನ್ನು ಒಳಭಾಗದಲ್ಲೂ ಸೇರ್ಪಡೆಗೊಳಿಸಲಾಗಿದ್ದು, ಈ ಬಾರಿ ಹೊಸ ಕಾರಿನಲ್ಲಿ ಚಾರ್ಕೊಲ್ ಬ್ಲ್ಯಾಕ್ ಇಂಟಿರಿಯರ್ ನೀಡಿರುವುದು ಮತ್ತಷ್ಟು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಚಾರ್ಕೊಲ್ ಬ್ಲ್ಯಾಕ್ ಇಂಟಿರಿಯರ್‌ನೊಂದಿಗೆ ಫ್ಯಾಬ್ರಿಕ್ ಸೀಟ್, ಡಿಕೊ ಸ್ಟಿಚಿಂಗ್, ಕಾಂಟ್ರಾಸ್ಟ್ ಎಸಿ ವೆಂಟ್ಸ್, 8-ಸ್ಪೀಕರ್ಸ್ ಹರ್ಮನ್ ಸೌಂಡ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪುಶ್ ಸ್ಟಾರ್ಟ್ ಬಟನ್ ನೀಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

2021ರ ಟಿಯಾಗೋ ಎನ್‌ಆರ್‌ಜಿ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಟಿಯಾಗೋ ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಮಾದರಿಯನ್ನೇ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ತ್ರಿ ಸಿಲಿಂಡರ್ ಹೊಂದಿರುವ ರಿವೊಟ್ರಾನ್ 1.2-ಲೀಟರ್ ಪೆಟ್ರೋಲ್ ಮಾದರಿಯು 84.5-ಬಿಎಚ್‌ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಉತ್ತಮ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಸುರಕ್ಷಾ ಫೀಚರ್ಸ್‌ಗಳು

ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಹೊಸ ಟಿಯಾಗೋ ಎನ್ಆರ್‌ಜಿ ಕಾರು ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ನೀಡಲಾಗಿದ್ದು, ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್‌ಬ್ಯಾಗ್ ಕಡ್ಡಾಯವಾಗಿ ನೀಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಡೇ ಅಂಡ್ ನೈಟ್ ಐಆರ್‌ವಿಎಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಹೊಸ ಕಾರಿನ ಡಿಸೈನ್ ಮತ್ತು ಫೀಚರ್ಸ್‌ಗಳು ಗಮನಸೆಳೆಯಲಿವೆ.

ಹೊಸ ವಿನ್ಯಾಸದೊಂದಿಗೆ ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೋ ಎನ್‌ಆರ್‌ಜಿ ವರ್ಷನ್ ಬಿಡುಗಡೆ

ಇನ್ನು ಹೊಸ ಕಾರು ವಿವಿಧ ಬಣ್ಣದ ಆಯ್ಕೆಗಳನ್ನು ಹೊಂದಿದ್ದು, ಫೊರೆಸ್ಟಾ ಗ್ರೀನ್, ಫೈರ್ ರೆಡ್, ಸ್ನೋ ವೈಟ್ ಮತ್ತು ಕ್ಲೌಡಿ ಗ್ರೇ ಆಯ್ಕೆ ಹೊಂದಿದ್ದು, ಹೊಸ ಕಾರು ಖರೀದಿಗೆ ಆಸಕ್ತ ಗ್ರಾಹಕರಿಂದ ಈಗಾಗಲೇ ಬುಕ್ಕಿಂಗ್ ಸ್ವಿಕರಿಸಲಾಗುತ್ತಿದೆ.

Most Read Articles

Kannada
English summary
Tata Tiago NRG Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X