ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಸ್ವದೇಶಿ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ಸರಣಿಯಲ್ಲಿರುವ ಕಾರುಗಳು ಉತ್ತಮ ಬೆಳವಣಿಗೆಯನ್ನು ಹೊಂದಿದೆ. ಇದರಲ್ಲಿ ಐಕಾನಿಕ್ ಸಫಾರಿ ಹೆಸರನ್ನು ಹೊಂದಿರುವ ಎಸ್‍ಯುವಿ ಮಾದರಿಯು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಟಾಟಾ ಮೋಟಾರ್ಸ್ ಕಂಪನಿಯ ಪ್ರಮುಖ ಸಫಾರಿ ಎಸ್‌ಯುವಿಯ ಎಕ್ಸ್‌ಟಿ ಮತ್ತು ಎಕ್ಸ್‌ಝಡ್ ವೆರಿಯೆಂಟ್‌ಗಳು ಹೊಸ ಫೀಚರ್ಸ್ ಗಳನ್ನು ಪಡೆಯಲಿವೆ. ಎಕ್ಸ್‌ಟಿ ಮತ್ತು ಎಕ್ಸ್‌ಝಡ್ ವೆರಿಯೆಂಟ್‌ಗಳು ಏರ್ ಪ್ಯೂರಿಫೈಯರ್ ಅನ್ನು ಹೊಂದಿದ್ದರೆ, ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್ಎ ವೆರಿಯೆಂಟ್‌ಗಳು ವೈರ್‌ಲೆಸ್ ಚಾರ್ಜರ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಪಡೆಯುತ್ತವೆ. ಈ ಟ್ರಿಮ್‌ಗಳಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಪ್ರಸ್ತುತ, ಟಾಟಾ ಸಫಾರಿ ಎಕ್ಸ್‌ಟಿ ವೆರಿಯೆಂಟ್ ನಲ್ಲಿ ಸ್ಪೀಕರ್ ಆಡಿಯೋ ಸಿಸ್ಟಂ, ಐಆರ್ಎ ಸಂಪರ್ಕಿತ ಕಾರ್ ತಂತ್ರಜ್ಞಾನ, ರಿಯರ್ ವ್ಯೂ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ರಿಯರ್ ಸೆಂಟರ್ ಆರ್ಮ್‌ರೆಸ್ಟ್, ಕೀಲೆಸ್ ಎಂಟ್ರಿ ಮತ್ತು ಗೋ ಮತ್ತು ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಹೊಂದಿದೆ,

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಇದರೊಂದಿಗೆ ಕ್ರೂಸ್ ಕಂಟ್ರೋಲ್, ಟೈರ್ ಒತ್ತಡ ಮಾನಿಟರಿಂಗ್ ಸಿಸ್ಟಂ, ಪವರ್ ಫೋಲ್ಡಿಂಗ್ ವಿಂಗ್ ಮಿರರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಸಫಾರಿ ಎಸ್‍ಯುವಿಯ ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್ಎ ವೆರಿಯೆಂಟ್‌ಗಳಲ್ಲಿ 8.8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 9-ಸ್ಪೀಕರ್ ಜೆಬಿಎಲ್ ಆಡಿಯೋ ಸಿಸ್ಟಂ, ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, 6-ವೇ ಎಲೆಕ್ಟ್ರಿಕ್ ಅಡ್ಜಸ್ಟ್ ಡ್ರೈವ್ ಸೀಟ್, ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಸಿಂಪಿ ವೈಟ್ ಲೆಥೆರೆಟ್ ಅಪ್‌ಹೋಲ್ಸ್ಟರಿ ಮತ್ತು ಟೆರೇನ್ ರೆಸ್ಪಾನ್ಸ್ ಮೋಡ್‌ಗಳಿವೆ

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಇನ್ನು ಇದರಲ್ಲಿ ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಡಿಸೆಟ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, 18 ಇಂಚಿನ ಅಲಾಯ್ ವ್ಹೀಲ್ ಗಳು, ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಕಾರ್ನಿಂಗ್ ಫಂಕ್ಷನ್ ಅನ್ನು ಒಳಗೊಂಡಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

2021ರ ಟಾಟಾ ಸಫಾರಿ ಬ್ರ್ಯಾಂಡ್‌ನ ಇತ್ತೀಚಿನ ‘ಇಂಪ್ಯಾಕ್ಟ್ 2.0' ವಿನ್ಯಾಸ ಶೈಲಿಯನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯು ಒಮೆಗಾ ಆರ್ಗಿಟೆಕ್ಚರ್ ನಿಂದ ಸಂಯೋಜಿಸುತ್ತದೆ. ಲ್ಯಾಂಡ್ ರೋವರ್‌ನ ಪ್ರಸಿದ್ಧ ಡಿ8 ಪ್ಲಾಟ್‌ಫಾರ್ಮ್‌ನಿಂದ ಹೊಸ ಸಫಾರಿ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಈ ಎಸ್‍ಯುವಿಯ ಮುಂಭಾಗದಿಂದ ಸಿ-ಪಿಲ್ಲರ್ ವರೆಗೆ, ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎರಡೂ ಬಹುತೇಕ ಒಂದೇ ರೀತಿ ಇದೆ.ಅವುಗಳ ನಡುವೆ ಇರುವ ಏಕೈಕ ಬದಲಾವಣೆಯೆಂದರೆ ಸಫಾರಿಗಳಲ್ಲಿ ಕಂಡುಬರುವ ಹೊಸ ಟ್ರೈ-ಏರೋ ಮೆಷ್ ಗ್ರಿಲ್ ಆಗಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಇನ್ನು ಈ ಹೊಸ ಸಫಾರಿ ಎಸ್‌ಯುವಿ ಹ್ಯಾರಿಯರ್‌ನಂತೆಯೇ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡೀಗೆಟರ್ ಗಳೊಂದಿಗೆ ಮೇಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಒಳಗೊಂಡಿದೆ, ಅದರ ಕೆಳಗೆ ಮುಖ್ಯ ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳನ್ನು ಹೊಂದಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಈ ಎಸ್‍ಯುವಿ ಫಾಗ್ ಲ್ಯಾಂಪ್ ಗಳನ್ನು ಅದೇ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಯುನಿಟ್ ಗಿಂತ ಸ್ವಲ್ಪ ಕೆಳಗೆ ಹೊಂದಿದೆ. ಮುಂಭಾಗದ ಬಂಪರ್‌ಗಳಲ್ಲಿ ಸಫಾರಿ ಕ್ಲಾಡಿಂಗ್ ಹೊಂದಿದ್ದು, ಇದು ಸೆಂಟ್ರಲ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಕೆಳಭಾಗದಲ್ಲಿ ಸಿಲ್ವರ್ ಫಿನಿಶಿಂಗ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರುತ್ತದೆ. ಹಿಂಭಾಗದ ಮಧ್ಯಭಾಗದಲ್ಲಿ ಎಲ್ಇಡಿ ಸ್ಟಾಪ್ ಲೈಟ್ ಹೊಂದಿರುವ ರೂಫ್-ಮೌಂಟಡ್ ಸ್ಪಾಯ್ಲರ್ ಹೊಂದಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಆದರೆ ಬೂಟ್ ನಂಬರ್ ಪ್ಲೇಟ್ ಕೆಳಗೆ ಸಫಾರಿ' ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಇದರಲ್ಲಿ ಸಫಾರಿ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಬರುತ್ತಿದೆ. ಇದರೊಂದಿಗೆ ಮಾರ್ಮಲ್, ರಫ್ ಮತ್ತು ವೆಟ್ ಎಂಬ ಮೋಡ್ ಗಳನ್ನು ಹೊಂದಿದೆ. ಇದು ಇದು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗುತ್ತದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಇನ್ನು ಟಾಟಾ ಮೋಟಾರ್ಸ್ ಇತ್ತೀಚೆಗೆ ಸಫಾರಿ ಎಸ್‍ಯುವಿಯ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿತು. ಇದು ಕಾಸ್ಮೆಟಿಕ್ ಬದಲಾವಣೆಗಳನ್ನು ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಪಡೆಯುತ್ತದೆ. ಈ ಕೆಲವು ಫೀಚರ್ಸ್‌ಗಳು ಅಡ್ವೆಂಚರ್ ಎಡಿಷನ್ ಕೂಡ ಪಡೆಯಲಿದೆ ಎಂದು ವರದಿಗಳಾಗಿದೆ, ಗೋಲ್ಡ್ ಎಡಿಷನ್ ಸಫಾರಿಯ ಹೊಸ ಟಾಪ್-ಎಂಡ್ ರೂಪಾಂತರವಾಗಿದೆ, ಆದರೆ ಇದಕ್ಕಿಂತ ಮೊದಲು ಅಡ್ವೆಂಚರ್ ಎಡಿಷನ್ ಟಾಪ್-ಎಂಡ್ ರೂಪಾಂತರವಾಗಿತ್ತು. ಹೊಸ ಟಾಟಾ ಸಫಾರಿಯ ಅಡ್ವೆಂಚರ್ ಎಡಿಷನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಏರ್ ಪ್ಯೂರಿಫೈಯರ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸುತ್ತೇವೆ

ಹೊಸ ಫೀಚರ್ಸ್‌ಗಳನ್ನು ಪಡೆಯಲಿವೆ Tata Safari XT, XZ ವೆರಿಯೆಂಟ್‌ಗಳು

ಟಾಟಾ ಸಫಾರಿ ಎಸ್‍ಯುವಿಯಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್, ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

Most Read Articles

Kannada
English summary
Tata to be fills safari xt and xz variants with new features details
Story first published: Tuesday, September 28, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X