ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಯಜುವೇಂದ್ರ ಚಾಹಲ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರು. ಈಗ ಅವರು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಸೆಡಾನ್ ಕಾರು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಚಾಹಲ್ ಅವರ ಪತ್ನಿ ತನುಶ್ರೀ ವರ್ಮಾ ಈ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ತೆಗೆದುಕೊಂಡಿದ್ದಾರೆ. ಅವರು ಕಾರಿನ ವಿತರಣೆ ಪಡೆಯುತ್ತಿರುವ ಚಿತ್ರಗಳನ್ನು ಆಟೋಹ್ಯಾಂಗರ್ ಮರ್ಸಿಡಿಸ್ ಬೆಂಝ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಚಾಹಲ್ ನೀಲಿ ಬಣ್ಣದಲ್ಲಿರುವ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಈ ಬಣ್ಣವು ಆಕರ್ಷಕವಾಗಿದೆ. ಸಿ-ಕ್ಲಾಸ್ ಕಾರ್ ಅನ್ನು ಎ-ಕ್ಲಾಸ್ ಲಿಮೋಸಿನ್ ಹಾಗೂ ಇ-ಕ್ಲಾಸ್ ಕಾರಿನ ನಡುವೆ ಇರಿಸಲಾಗಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 50 ಲಕ್ಷಗಳಾಗಿದೆ. ಇನ್ನು ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.41 ಕೋಟಿಗಳಾಗಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಈ ಐಷಾರಾಮಿ ಕಾರನ್ನು ಹಲವಾರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಯಜುವೇಂದ್ರ ಚಾಹಲ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ ಯಾವ ಮಾದರಿಯನ್ನು ಖರೀದಿಸಿದರು, ಈ ಮಾದರಿಯ ಬೆಲೆಯೆಷ್ಟು ಎಂಬ ಮಾಹಿತಿ ಬಹಿರಂಗವಾಗಿಲ್ಲ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್'ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಈ ಕಾರು ಐಷಾರಾಮಿ ಇಂಟಿರಿಯರ್ ಅನ್ನು ಸಹ ಹೊಂದಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಈ ಕಾರಿನಲ್ಲಿರುವ ಸೀಟುಗಳಲ್ಲಿ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಹಾಗೂ ಮೆಮೊರಿ ಆಯ್ಕೆಯನ್ನು ನೀಡಲಾಗಿದೆ. ಮಸಾಜ್ ಪಾರ್ಲರ್ ಕೂಡ ನೀಡಲಾಗಿದೆ. ಇದರಿಂದ ದೂರದ ಪ್ರಯಾಣದಲ್ಲಿ ಆಯಾಸವುಂಟಾಗುವುದಿಲ್ಲ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಹಿಂಬದಿಯ ಪ್ರಯಾಣಿಕರಿಗಾಗಿ ವಿಂಡೋಗಳ ಮೇಲೆ ಹಿಂಭಾಗದ ಸನ್ ಶೇಡ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್‌ ಕಾರಿನಲ್ಲಿ ಆಂಬಿಯೆಂಟ್ ಲೈಟಿಂಗ್ ಹಾಗೂ ಪನೋರಾಮಿಕ್ ಸನ್‌ರೂಫ್ ಅಳವಡಿಸಲಾಗಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಈ ಕಾರಿನಲ್ಲಿ ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಫೀಚರ್'ಗಳನ್ನು ಹೊಂದಿರುವ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಸಹ ನೀಡಲಾಗಿದೆ. ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ವೈರ್‌ಲೆಸ್ ಚಾರ್ಜರ್ ಹಾಗೂ ಕ್ರೂಸ್ ಕಂಟ್ರೋಲ್'ಗಳನ್ನು ಹೊಂದಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನಲ್ಲಿ ಹಿಂಬದಿಯ ಕ್ಯಾಮೆರಾದೊಂದಿಗೆ ರೇರ್ ಪಾರ್ಕಿಂಗ್ ಸೆನ್ಸಾರ್'ಗಳನ್ನು ನೀಡಲಾಗಿದೆ. ಈ ಕಾರು ಎಲ್ಇಡಿ ಹೆಡ್ ಲ್ಯಾಂಪ್ಹೊಂದಿರುವ ಎಲ್ಇಡಿ ಡಿ‌ಆರ್‌ಎಲ್'ಗಳನ್ನು ಹೊಂದಿದೆ.

ಹೊಸ ಐಷಾರಾಮಿ ಕಾರು ಖರೀದಿಸಿದ ಟೀಂ ಇಂಡಿಯಾ ಸ್ಪಿನ್ನರ್

ಬಹುತೇಕ ಭಾರತೀಯ ಕ್ರಿಕೆಟಿಗರು ದುಬಾರಿ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಹಲವಾರು ಆಡಿ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Team India spinner Yuzvendra Chahal buys new Mercedes Benz C class car. Read in Kannada.
Story first published: Friday, July 30, 2021, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X