ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

2019ರಲ್ಲಿ ಬಿಡುಗಡೆಯಾದ ವಿಲಕ್ಷಣ ವಿನ್ಯಾಸವನ್ನು ಹೊಂದಿರುವ ಟೆಸ್ಲಾ ಕಂಪನಿಯ ಸೈಬರ್ ಟ್ರಕ್ ಗ್ರಾಹಕರನ್ನು ಮಾತ್ರವಲ್ಲದೇ ಆಟೋಮೊಬೈಲ್ ಉದ್ಯಮವನ್ನೇ ಅಚ್ಚರಿಗೊಳಿಸಿದೆ. ಈ ಸೈಬರ್ ಪಿಕಪ್ ಟ್ರಕ್‌ನ ವ್ಯಾಪ್ತಿ ಹಾಗೂ ಸಾಮರ್ಥ್ಯವು ದಿಗ್ಭ್ರಮೆಯನ್ನುಂಟು ಮಾಡದೇ ಇರಲಾರದು.

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಟೆಸ್ಲಾ ಸೈಬರ್ ಟ್ರಕ್‌ನಲ್ಲಿ ಅತ್ಯಂತ ಶಕ್ತಿಶಾಲಿಯಾದ ಬ್ಯಾಟರಿ ಪ್ಯಾಕ್ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಲಾಗಿದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸೈಬರ್ ಟ್ರಕ್ 804 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಅಮೆರಿಕಾದ ಅತ್ಯಂತ ಜನಪ್ರಿಯ ವೈಯಕ್ತಿಕ ಬಳಕೆಯ ಪಿಕಪ್ ಟ್ರಕ್ ಆದ ಸೈಬರ್ ಟ್ರಕ್ ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸೈಬರ್ ಟ್ರಕ್'ಗಳ ಹಿಂಭಾಗದಲ್ಲಿ ಸಣ್ಣ ಮೊಬೈಲ್ ಮನೆಗಳನ್ನು ಸಾಗಿಸುವ ಸೌಲಭ್ಯವನ್ನು ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಸೈಬರ್ ಟ್ರಕ್ 6.35 ಟನ್ ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. ಸೈಬರ್ ಟ್ರಕ್ ಸಣ್ಣ ಮೊಬೈಲ್ ಮನೆಯನ್ನು ಟೋವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಈ ರೀತಿಯ ಮೊಬೈಲ್ ಮನೆಗಳಿಗೆ ಸಣ್ಣ ಜನರೇಟರ್‌ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೈಬರ್ ಟ್ರಕ್ ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ ಎಂದು ತಿಳಿದುಬಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಈ ಬಗ್ಗೆ ಟೆಸ್ಲಾ ಕಂಪನಿಯ ಮಾಲೀಕರಾದ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ. ಇದರಿಂದಾಗಿ ಸೈಬರ್ ಟ್ರಕ್ ಖರೀದಿಸುವವರು ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಾಗ ವಿದ್ಯುತ್ ಸರಬರಾಜು ಪಡೆಯಲು ಸಾಧ್ಯವಾಗುತ್ತದೆ.

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಹೊಸ ಟೆಸ್ಲಾ ಸೈಬರ್ ಟ್ರಕ್ ವಾಹನವನ್ನು ಅಮೆರಿಕಾದ ಟೆಕ್ಸಾಸ್‌ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿರುವ ಹೊಸ ಗಿಗಾಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಈ ವಾಹನದ ಉತ್ಪಾದನೆಯು ಈ ವರ್ಷದ ಕೊನೆಯಲ್ಲಿ ಆರಂಭವಾಗಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಮುಂದಿನ ವರ್ಷದಿಂದ ಸೈಬರ್ ಟ್ರಕ್'ನ ಪೂರ್ಣ ಪ್ರಮಾಣದ ಉತ್ಪಾದನೆ ಹಾಗೂ ವಿತರಣಾ ಕಾರ್ಯಗಳು ಆರಂಭವಾಗುವ ನಿರೀಕ್ಷೆಗಳಿವೆ. ಟೆಸ್ಲಾ ಸೈಬರ್ ಟ್ರಕ್, ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯುಂಟು ಮಾಡುವ ಹಲವಾರು ವಿಶೇಷ ತಂತ್ರಜ್ಞಾನಗಳನ್ನು ಹೊಂದಿರಲಿದೆ.

ಮೊಬೈಲ್ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲಿದೆ ಈ ವಾಹನ

ಬಹು ನಿರೀಕ್ಷಿತ ಟೆಸ್ಲಾ ಸೈಬರ್ ಟ್ರಕ್ ವಾಹನವನ್ನು ಈಗಾಗಲೇ ಲಕ್ಷಾಂತರ ಜನ ಬುಕ್ ಮಾಡಿದ್ದಾರೆ. ವಿಶ್ವದಾದ್ಯಂತ ಜನರು ಸೈಬರ್ ಟ್ರಕ್ ವಾಹನದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Most Read Articles

Kannada
Read more on ಟೆಸ್ಲಾ tesla
English summary
Tesla Cyber Truck can supply power to motor homes. Read in Kannada.
Story first published: Friday, March 12, 2021, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X