ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗಿರುವ ಟೆಸ್ಲಾ(Tesla) ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ವಾಣಿಜ್ಯ ನಗರಿ ಮುಂಬೈನಲ್ಲಿ ತನ್ನ ಕೇಂದ್ರ ಕಚೇರಿ ತೆರೆಯಲು ಉದ್ದೇಶಿಸಿರುವ ಟೆಸ್ಲಾ(Tesla) ಕಂಪನಿಯು ಮಾಡೆಲ್ 3(Model 3) ಮತ್ತು ಮಾಡೆಲ್ ವೈ(Model Y) ಕಾರು ಮಾದರಿಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಎರಡು ಕಾರು ಮಾದರಿಗಳಿಂದ ತಲಾ ಎರಡು ವೆರಿಯೆಂಟ್ ಬಿಡುಗಡೆ ಮಾಡುವ ನೀರಿಕ್ಷೆಯಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಕೇಂದ್ರ ಸಾರಿಗೆ ಇಲಾಖೆಯಿಂದ ಪಡೆದುಕೊಂಡಿರುವ ಅನುಮತಿ ಪತ್ರದಲ್ಲಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಟೆಸ್ಲಾ ಕಂಪನಿಯು ಆರಂಭಿಕವಾಗಿ ಮಾಡೆಲ್ 3 ಮಾದರಿಯನ್ನು ರಸ್ತೆಗಿಳಿಸುವ ಸಾಧ್ಯತೆಗಳಿವೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಹೊಸ ಕಾರುಗಳ ಬಿಡುಗಡೆಯ ಕುರಿತಂತೆ ಇನ್ನು ಕೂಡಾ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಡದ ಟೆಸ್ಲಾ ಕಂಪನಿಯು ಪ್ರಮುಖ ನಾಲ್ಕು ರೂಪಾಂತರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಅನುಮೋದನೆ ಪಡೆದಿರುವುದು ಮಾತ್ರ ಖಚಿತವಾಗಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಭಾರತದಲ್ಲಿ ಟೆಸ್ಲಾ ನಿರ್ಮಾಣದ ಎಂಟ್ರಿ ಲೆವಲ್ ಮಾದರಿಯಾದ ಮಾಡೆಲ್ 3 ಕಾರು ಮಾದರಿಯೇ ಮೊದಲ ಹಂತದಲ್ಲಿ ಬಿಡುಗಡೆಯಾಗಬಹುದಾಗದ್ದು, ಮಾಡೆಲ್ 3 ನಂತರ ಮಾಡೆಲ್ ವೈ, ಮಾಡೆಲ್ ಎಸ್ ಸರಣಿ ಎಲೆಕ್ಟ್ರಿಕ್ ಕಾರು ಮಾದರಿಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆಗಳಿವೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ಇದು ತುಸು ದುಬಾರಿಯಾಗಿರಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು 2023ರ ವೇಳೆಗೆ ಭಾರತದಲ್ಲೇ ಕಾರುಗಳನ್ನು ಅಸೆಂಬ್ಲಿ ಘಟಕ ಆರಂಭಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಭಾರತದಲ್ಲಿ ಹೊಸ ವಾಹನಗಳ ಮಾರಾಟಕ್ಕಾಗಿ ಮುಂಬೈ, ಬೆಂಗಳೂರು ಮತ್ತು ದೆಹಲಿ ಆಯ್ದಕೊಂಡಿರುವ ಟೆಸ್ಲಾ ಕಂಪನಿಯು ಮುಂಬೈನಲ್ಲಿ ಕೇಂದ್ರ ಕಚೇರಿಯೊಂದಿಗೆ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರ್‌ಡಿ ಕಚೇರಿ ಜೊತೆ ಮಾರಾಟ ಮಳಿಗೆಯನ್ನು ಮತ್ತು ದೆಹಲಿಯಲ್ಲಿ ಮಾರಾಟ ಮಳಿಗೆಯನ್ನು ತೆರೆಯುತ್ತಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಸದ್ಯಕ್ಕೆ ಸಿಬಿಯು ಮೂಲಕ ಮತ್ತು 2023ರಿಂದ ಸಿಕೆಡೆ ಆಮದು ನೀತಿ ಅಡಿಯಲ್ಲಿ ವಾಹನ ಮಾರಾಟ ಕೈಗೊಳ್ಳಲಿರುವ ಟೆಸ್ಲಾ ಕಂಪನಿಯು ಹೊಸ ಯೋಜನೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭವಿಷ್ಯದ ವಾಹನಗಳ ಮೇಲೆ ಟೆಸ್ಲಾ ಕಂಪನಿಯು ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಇದರ ನಡುವೆ ವಿದೇಶಿ ವಸ್ತುಗಳಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸುವ ಭಾರತ ಸರ್ಕಾರವು ಭವಿಷ್ಯದ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳಿಗೆ ಕೆಲವು ವಿನಾಯ್ತಿ ನೀಡುವಂತೆ ಟೆಸ್ಲಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಆದ್ಯತೆ ನೀಡುತ್ತಿರುವುದರಿಂದ ಭಾರತ ಸರ್ಕಾರವು ಕೂಡಾ ಇಂಧನ ಆಧರಿತ ವಾಹನಗಳನ್ನು ಹೊರತುಪಡಿಸಿ ಆಮದುಗೊಳ್ಳಿರುವ ಎಲೆಕ್ಟ್ರಿಕ್ ಮಾದರಿಗಳಿಗೆ ಆಮದು ಸುಂಕದಲ್ಲಿ ವಿನಾಯ್ತಿ ನೀಡಬಹುದೆಂಬ ನೀರಿಕ್ಷೆಯಲ್ಲಿತ್ತು.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಭಾರತದಲ್ಲಿ ವಿದೇಶ ವಸ್ತುಗಳಿಗೆ ವಿಧಿಸುವ ಆಮದು ಸುಂಕ ಕುರಿತು ಟ್ವಿಟ್ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಭಾರತ ಸರ್ಕಾರದಿಂದ ಉತ್ತಮ ಪ್ರಕ್ರಿಯೆ ನೀರಿಕ್ಷೆಯಲ್ಲಿದ್ದೇವೆ ಎಂದಿದ್ದರು.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಫೇಮ್ 2 ಸಬ್ಸಡಿ ಯೋಜನೆಯಡಿ ಹಲವಾರು ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಹೊಸ ಯೋಜನೆಗಳು ಜಾರಿಯಲ್ಲಿರುವಾದ ಆಮದು ಇವಿ ವಾಹನಗಳಿಗಾಗಿ ಪ್ರತ್ಯೇಕ ವಿನಾಯ್ತಿ ಪರಿಗಣಿಸಲು ಸಾಧ್ಯವಿಲ್ಲವೆಂದು ಕ್ರಿಶನ್ ಪಾಲ್ ಗುರ್ಜಾರ್ ಪ್ರಕ್ರಿಯೆಸಿದ್ದಾರೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಸದ್ಯ ಭಾರತದಲ್ಲಿ ವಿದೇಶಿಯಿಂದ ಆಮದುಗೊಳ್ಳುವ ವಾಹನಗಳಿಗೆ ಮೂಲ ಬೆಲೆ ಆಧರಿಸಿ ಶೇ.60(ರೂ.30 ಲಕ್ಷದೊಳಗಿನ ವಾಹನಗಳು) ಮತ್ತು ಶೇ. 100(ರೂ.30 ಲಕ್ಷ ಮೇಲ್ಪಟ್ಟ ವಾಹನಗಳು) ಸುಂಕ ವಿಧಿಸಲಿದ್ದು, ಕೇಂದ್ರ ಸರ್ಕಾರದ ಕೆಲವು ಕಠಿಣ ಕ್ರಮಗಳು ಭವಿಷ್ಯ ವಾಹನಗಳು ಭಾರತದ ಪ್ರವೇಶವನ್ನು ತಡೆಯಲಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಕೇಂದ್ರ ಸರ್ಕಾರದ ಸ್ಪಷ್ಟನೆ ನಂತರ ಟೆಸ್ಲಾ ಕಂಪನಿಯು ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲವಾದರೂ ಟೆಸ್ಲಾ ಭಾರತದ ಪ್ರವೇಶ ಮತ್ತಷ್ಟು ಕಠಿಣವಾಗಲಿದ್ದು, ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ನೆರವು ನೀಡಬೇಕೆಂಬುವುದು ಮತ್ತೆ ಕೆಲವು ಎಲೆಕ್ಟ್ರಿಕ್ ವಾಹನ ಕಂಪನಿಗಳ ಮನವಿಯಾಗಿದೆ.

ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಆಮದು ಸುಂಕ ವಿನಾಯ್ತಿ ದೊರೆತ್ತಿದ್ದರೆ ಉತ್ತಮ ಬೆಲೆಗಳೊಂದಿಗೆ ಹೆಚ್ಚಿನ ಮಟ್ಟದ ಬೇಡಿಕೆ ನೀರಿಕ್ಷೆಯಲ್ಲಿದ್ದ ಟೆಸ್ಲಾ ಕಂಪನಿಗೆ ಕೇಂದ್ರ ಸರ್ಕಾರದ ನಿರ್ಧಾರವು ಕಠಿಣವಾದರೂ ಭಾರತದಲ್ಲಿ ತನ್ನ ಸಂಭಾವ್ಯ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವತ್ತ ಯೋಜನೆ ರೂಪಿಸುತ್ತಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla gets approval for 4 electric cars in india expected models details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X