ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಟೆಸ್ಲಾ (Tesla) ಅಮೆರಿಕಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ನೋಟ, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ವಿಶೇಷ ಫೀಚರ್'ಗಳಿಗೆ ಹೆಸರುವಾಸಿಯಾಗಿವೆ. ಈಗ ಟೆಸ್ಲಾ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಸಾಫ್ಟ್‌ವೇರ್ ಅಪ್ ಡೇಟ್ ನೀಡಲು ಸಿದ್ಧತೆ ನಡೆಸುತ್ತಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಕಂಪನಿಯು ಈ ಅಪ್ ಡೇಟ್ ಅನ್ನು ಹಾಲಿಡೇ ಸಾಫ್ಟ್‌ವೇರ್ ಅಪ್‌ಡೇಟ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿವೆ. ಈ ಸಾಫ್ಟ್‌ವೇರ್ ಅಪ್‌ಡೇಟ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ. ಟೆಸ್ಲಾ ಕಂಪನಿಯ ಹೊಸ ಹಾಲಿಡೇ ಸಾಫ್ಟ್‌ವೇರ್ ಅಪ್‌ಡೇಟ್‌, ಸಂಗೀತಕ್ಕೆ ಅನುಗುಣವಾಗಿ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳನ್ನು ಆನ್ ಹಾಗೂ ಆಫ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಈ ಅಪ್ ಡೇಟ್ ಅನ್ನು ಬೇಸರದಲ್ಲಿರುವವರನ್ನು ಸಹ ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಈ ಫೀಚರ್ ಅನ್ನು ಮಿನಿ ಪಾರ್ಟಿ ಕವರ್ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸಾಫ್ಟ್‌ವೇರ್ ಅಪ್ ಡೇಟ್ ಕಂಪನಿಯ ಎಲ್ಲಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಟೆಸ್ಲಾ ಕಂಪನಿ ತಿಳಿಸಿದೆ. ಟೆಸ್ಲಾ ಕಂಪನಿಯು ಸದ್ಯಕ್ಕೆ ವಿಶ್ವಾದ್ಯಂತ ಮಾಡೆಲ್ 3, ಮಾಡೆಲ್ ಎಸ್, ಮಾಡೆಲ್ ವೈ ಹಾಗೂ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಆದರೆ ಇವುಗಳಲ್ಲಿ ಯಾವ ಕಾರುಗಳೂ ಸಹ ಭಾರತದಲ್ಲಿ ಮಾರಾಟವಾಗುತ್ತಿಲ್ಲ ಎಂಬುದು ಗಮನಾರ್ಹ. ಕೆಲವು ಭಾರತೀಯ ಉದ್ಯಮಿಗಳು ಆಮದು ಮಾಡಿಕೊಂಡ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಿದ್ದಾರೆ. ಅವರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಸಹ ಸೇರಿದ್ದಾರೆ. ಟೆಸ್ಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಾಕಷ್ಟು ಶ್ರಮಿಸುತ್ತಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಈಗ ತನ್ನ ಕಾರು ಬಳಕೆದಾರರನ್ನು ಹಾಗೂ ಹೊಸ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕಂಪನಿಯು ಎಲ್ಲಾ ಮಾದರಿಗಳಿಗಾಗಿ ಹೊಸ ಸಾಫ್ಟ್‌ವೇರ್ ನವೀಕರಣವನ್ನು ಬಿಡುಗಡೆ ಮಾಡಿದೆ. ಟೆಸ್ಲಾ ಕಂಪನಿಯ ಲೈಟ್ ಶೋ ಕಸ್ಟಮೈಸೇಶನ್ ಇಷ್ಟವಾಗದಿದ್ದರೆ ಗ್ರಾಹಕರು ತಮ್ಮದೇ ಆದ ಮರುವಿನ್ಯಾಸವನ್ನು ಹೊಂದಬಹುದು. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಟೆಸ್ಲಾ ಇದನ್ನು ಸುಗಮಗೊಳಿಸಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಇದಕ್ಕಾಗಿ ಕಂಪನಿಯು ಸಾಫ್ಟ್‌ವೇರ್ ಅನ್ನು ಸಹ ಬಿಡುಗಡೆ ಮಾಡಿದೆ. ಪ್ರೊಸೆಸರ್ ಮೂಲಕ ಗ್ರಾಹಕರು ಬೆಳಕಿನ ಪ್ರದರ್ಶನವನ್ನು ಮಾರ್ಪಡಿಸಬಹುದು. ಇದಕ್ಕೆ ಕೇವಲ ಒಂದು ಕಂಪ್ಯೂಟರ್'ನ ಅಗತ್ಯವಿರುತ್ತದೆ. ಈ ವೈಶಿಷ್ಟ್ಯವನ್ನು 11.0 ಆವೃತ್ತಿ ಮೂಲಕ ಒದಗಿಸಲಾಗಿದೆ. ಬೆಳಕಿನ ಪ್ರದರ್ಶನದ ಜೊತೆಗೆ, ಕಂಪನಿಯು ಈ ಅಪ್ ಡೇಟ್'ನಲ್ಲಿ ಇನ್ನೂ ಕೆಲವು ಅಪ್ ಡೇಟ್'ಗಳನ್ನು ಒದಗಿಸಿದೆ.

ಇವುಗಳಲ್ಲಿ ನ್ಯಾವಿಗೇಶನ್, ಗೇಮ್, ಎಂಟರ್ ಟೆನ್'ಮೆಂಟ್, ಆಡಿಯೊ (ಹಿಂದಿನದಕ್ಕಿಂತ ಹಲವು ಪಟ್ಟು ಉತ್ತಮವಾಗಿದೆ), ಬ್ಲೈಂಡ್ ಸ್ಪಾಟ್ ಹಾಗೂ ಆಟೊಪೈಲಟ್ ಸಮಯದಲ್ಲಿ ಆರಾಮದಾಯಕವಾಗಿರುವ ಸಸ್ಪೆಂಷನ್'ಗಳು ಸೇರಿವೆ. ಇದರಿಂದ ಈ ಅಪ್ ಡೇಟ್ ಖಂಡಿತವಾಗಿಯೂ ಟೆಸ್ಲಾ ಎಲೆಕ್ಟ್ರಿಕ್ ಕಾರು ಬಳಕೆದಾರರನ್ನು ಆಕರ್ಷಿಸುವ ನಿರೀಕ್ಷೆಗಳಿವೆ. ಹಲವು ಗ್ರಾಹಕರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಅಪ್ ಡೇಟ್ ಕುರಿತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಟೆಸ್ಲಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೆಸ್ಲಾ ಕಂಪನಿಯ ಪ್ರಮುಖ ಕಾರುಗಳಲ್ಲಿ ಒಂದಾದ ಮಾಡೆಲ್ 3 ಎಲೆಕ್ಟ್ರಿಕ್ ಕಾರ್ ಅನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಈ ಕಾರು ಭಾರತದಲ್ಲಿ ಬಿಡುಗಡೆಯಾದ ನಂತರ ಕೋನಾ ಎಲೆಕ್ಟ್ರಿಕ್, ಆಡಿ ಇ-ಟ್ರಾನ್, ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಇನ್ನು ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶ್ವದ ಯಾವುದೇ ಕಂಪನಿಯು ಟೆಸ್ಲಾ ಕಂಪನಿಯ ರೀತಿಯಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಇತ್ತೀಚಿಗೆ ಟೆಸ್ಲಾ ಕಂಪನಿಯು ತನ್ನ ಆಸ್ತಿ ಮೌಲ್ಯದ ವಿವರಗಳನ್ನು ಬಿಡುಗಡೆ ಮಾಡಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಟೆಸ್ಲಾ ಕಂಪನಿಯು ವಿಶ್ವಾದಾದ್ಯಂತ 1 ಟ್ರಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದೆ. ಅಮೆರಿಕಾದ ಜನಪ್ರಿಯ ಬಾಡಿಗೆ ಕಾರು ಕಂಪನಿಯಾದ ಹರ್ಟ್ಜ್, ಟೆಸ್ಲಾ ಕಂಪನಿಯಿಂದ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಇದಾದ ನಂತರ ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ಗಳನ್ನು ಮೀರಿದೆ. ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರುಗಳನ್ನು ವೈಯಕ್ತಿಕ ಬಳಕೆದಾರರು ಹಾಗೂ ಹರ್ಟ್ಜ್‌ನಂತಹ ಬಾಡಿಗೆ ಕಾರು ಕಂಪನಿಗಳು ಹೆಚ್ಚು ಖರೀದಿಸುತ್ತಿದ್ದಾರೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಇದರಿಂದ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಟೆಸ್ಲಾ ಕಂಪನಿಯು ಸದಾ ಕಾಲ ಕ್ರಿಯಾಶೀಲರಾಗಿರುವುದರಿಂದ ಹರ್ಟ್ಜ್‌ನಂತಹ ಹೊಸ ಕಂಪನಿಗಳೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿದೆ. ಟೆಸ್ಲಾ ಹಾಗೂ ಹರ್ಟ್ಜ್ ನಡುವಿನ ಒಪ್ಪಂದವು 4 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆ ಅಮೆರಿಕಾದಲ್ಲಿ 40,000 ಡಾಲರ್ ಗಳಾಗಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಈ ಮೂಲಕ ಟೆಸ್ಲಾ ಹಾಗೂ ಹರ್ಟ್ಜ್ ನಡುವೆ 4 ಬಿಲಿಯನ್ ಡಾಲರ್ ಒಪ್ಪಂದವೇರ್ಪಟ್ಟಿದ್ದು, ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ದಾಟಿದೆ. ಈ ಸುದ್ದಿ ಟೆಸ್ಲಾ ಕಂಪನಿಯ ಷೇರುಗಳನ್ನು ಖರೀದಿಸಿದವರಿಗೆ ಸಿಹಿ ನೀಡಿದೆ. ಇದರಿಂದ ಟೆಸ್ಲಾ ಕಂಪನಿಯ ಷೇರು ಬೆಲೆ 1,024.86 ಡಾಲರ್ ಗಳಿಗೆ ಏರಿಕೆಯಾಗಿದೆ. ಅಂದರೆ ಮೊದಲಿಗಿಂತ 13% ನಷ್ಟು ಏರಿಕೆಯಾಗಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 255.8 ಬಿಲಿಯನ್ ಡಾಲರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಎಲಾನ್ ಮಸ್ಕ್ ರವರ ಆಸ್ತಿ ಮೌಲ್ಯವು 11.4% ನಷ್ಟು ಹೆಚ್ಚಾಗಿದೆ. ಅಂದ ಹಾಗೆ ಟೆಸ್ಲಾ ಕಂಪನಿಯು ಈ ವರ್ಷದ ಜನವರಿಯಲ್ಲಿ ತನ್ನ ಕಚೇರಿಯನ್ನು ನಮ್ಮ ಬೆಂಗಳೂರಿನಲ್ಲಿ ನೋಂದಾಯಿಸಿತ್ತು.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಭಾರತೀಯ ಗ್ರಾಹಕರು ಟೆಸ್ಲಾ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ. ಟೆಸ್ಲಾ ಕಂಪನಿಯ ಮಾಡೆಲ್ 3 ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲಾಗಿದೆ.

ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ ಟೆಸ್ಲಾ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು

ಇತ್ತೀಚೆಗೆ ಎಲಾನ್ ಮಸ್ಕ್'ರವರು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಭಾರತದಲ್ಲಿ ಟೆಸ್ಲಾ ಕಂಪನಿಯ ಕಾರುಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಟೆಸ್ಲಾ ಕಂಪನಿಯ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ.

Most Read Articles

Kannada
Read more on ಟೆಸ್ಲಾ tesla
English summary
Tesla launches holiday software update in its electric cars details
Story first published: Monday, December 27, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X