ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಅಮೆರಿಕಾ ಮೂಲದ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಭಾರತೀಯ ಗ್ರಾಹಕರು ಸಹ ಟೆಸ್ಲಾ ಕಂಪನಿಯ ಕಾರುಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಕೆಲವರು ಟೆಸ್ಲಾ ಕಾರನ್ನು ವಿದೇಶಿ ಮಾರಾಟಗಾರರ ಬಳಿ ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಂಡು ಬಳಸುತ್ತಿದ್ದಾರೆ. ಆದರೆ ಕಾರುಗಳನ್ನು ಆಮದು ಮಾಡಿಕೊಂಡು ಬಳಸುವುದರಿಂದ ನಿರೀಕ್ಷೆಗಿಂತ ಹೆಚ್ಚು ವೆಚ್ಚವಾಗುತ್ತದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಅಂಬಾನಿ ಕುಟುಂಬದಂತಹ ಬಿಲಿಯನೇರ್‌ಗಳು ಟೆಸ್ಲಾ ಕಾರುಗಳನ್ನು ಈ ರೀತಿ ಆಮದು ಮಾಡಿಕೊಂಡು ಬಳಸುತ್ತಾರೆ. ಆದರೆ ಭಾರತದಲ್ಲಿ ಸದ್ಯಕ್ಕೆ ಯಾರೂ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿಲ್ಲ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಈಗ ಭಾರತದ ಮೊದಲ ಟೆಸ್ಲಾ ಮಾಡೆಲ್ 3 ಕಾರು ನಮ್ಮ ಬೆಂಗಳೂರಿಗೆ ಕಾಲಿಟ್ಟಿದೆ. ಕೆಂಪು ಬಣ್ಣದಲ್ಲಿರುವ ಭಾರತದ ಮೊದಲ ಟೆಸ್ಲಾ ಮಾಡೆಲ್ 3 ಕಾರಿನ ಚಿತ್ರಗಳನ್ನು ಆಟೋಮೊಬೈಲ್ ಆರ್ಟೆಂಡ್‌ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಆದರೆ ಈ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಯಾರು ಖರೀದಿಸಿದ್ದಾರೆ ಎಂಬ ವಿವರಗಳು ಲಭ್ಯವಾಗಿಲ್ಲ. ಈ ಚಿತ್ರಗಳಲ್ಲಿ ಕೆಂಪು ಬಣ್ಣದಲ್ಲಿರುವ ಟೆಸ್ಲಾ ಕಾರಿನ ಬಳಿ ಐಷಾರಾಮಿ ಕಾರುಗಳಾದ ಬೆಂಟ್ಲಿ ಮಾಲ್ಜೆನ್ ವೆಬ್ ಸೆಂಚುರಿ ಎಡಿಷನ್ ಹಾಗೂ ಪೋರ್ಷೆ 911 ಜಿಟಿ 3 ಆರ್‌ಎಸ್ ಕಾರುಗಳನ್ನು ನಿಲ್ಲಿಸಲಾಗಿದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಈ ಮೊದಲ ಭಾರತೀಯ ಟೆಸ್ಲಾ ಮಾಡೆಲ್ 3 ಕಾರ್ ಅನ್ನು ಬೆಂಗಳೂರಿನ ಕೋಟ್ಯಾಧಿಪತಿ ಖರೀದಿಸಿರುವ ಸಾಧ್ಯತೆಗಳಿವೆ. ಟೆಸ್ಲಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಬಿಡುಗಡೆಗೊಳಿಸಲು ಉದ್ದೇಶಿಸಿರುವ ಕಾರುಗಳಲ್ಲಿ ಮಾಡೆಲ್ 3 ಕಾರು ಸಹ ಸೇರಿದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಇತ್ತೀಚಿಗೆ ಭಾರತದ ರಸ್ತೆಗಳಲ್ಲಿ ಟೆಸ್ಲಾ ಮಾಡೆಲ್ 3 ಕಾರನ್ನು ಪರೀಕ್ಷಿಸಲಾಗುತ್ತಿರುವುದರ ಬಗ್ಗೆ ವರದಿಗಳಾಗಿದ್ದವು. ಮಾಡೆಲ್ 3 ಎಲೆಕ್ಟ್ರಿಕ್ ಕಾರು ಅಮೆರಿಕಾದಲ್ಲಿ ಟೆಸ್ಲಾ ಕಂಪನಿಯು ಮಾರಾಟ ಮಾಡುವ ಅಗ್ಗದ ಬೆಲೆಯ ಕಾರುಗಳಲ್ಲಿ ಒಂದಾಗಿದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಈ ಕಾರಿನ ಬೆಲೆ 39,990 ಅಮೆರಿಕನ್ ಡಾಲರ್'ಗಳಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 30 ಲಕ್ಷಗಳಾಗುತ್ತದೆ. ಆದರೆ ಆಮದಿನ ಮೇಲೆ ವಿಧಿಸುವ ಎಲ್ಲಾ ತೆರಿಗೆಗಳನ್ನು ಸೇರಿಸಿದರೆ ಈ ಟೆಸ್ಲಾ ಕಾರಿನ ಖರೀದಿಗೆ ಸುಮಾರು ರೂ. 70 - 80 ಲಕ್ಷ ಪಾವತಿಸಬೇಕಾಗುತ್ತದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ರೇರ್ ವ್ಹೀಲ್'ಗಳಿಂದ ನಿಯಂತ್ರಿಸಲ್ಪಡುವ ಈ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 423 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.ಈ ಕಾರು 6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಬಿಡುಗಡೆಗೂ ಮುನ್ನವೇ ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟೆಸ್ಲಾ ಮಾಡೆಲ್ 3 ಕಾರು

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಮಾದರಿಯಲ್ಲಿ ಲಭ್ಯವಿದೆ. ಎರಡು ಮೋಟರ್‌ಗಳನ್ನು ಹೊಂದಿರುವ ಮಾಡೆಲ್ 3 ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 568 ಕಿ.ಮೀಗಳವರೆಗೆ ಚಲಿಸುತ್ತದೆ.

Most Read Articles

Kannada
Read more on ಟೆಸ್ಲಾ tesla
English summary
Tesla Model 3 car arrives in Bengaluru ahead of launch. Read in Kannada.
Story first published: Tuesday, July 20, 2021, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X