ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಕಾರು ಮಾರಾಟ ಮಾಡಲು ಬಿಟ್‌ಕಾಯಿನ್ ಸ್ವೀಕರಿಸುವ ಮೂಲಕ ಟೆಸ್ಲಾ ಕಂಪನಿಯು ಡಿಜಿಟಲ್ ಕರೆನ್ಸಿ ಮೂಲಕ ವಹಿವಾಟು ನಡೆಸಿದ ವಿಶ್ವದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಡಾಡ್ಜ್‌ಕಾಯಿನ್ ಕ್ರಿಪ್ಟೋಕರೆನ್ಸಿ ಜಗತ್ತಿನಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಈ ಕರೆನ್ಸಿಯನ್ನು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ. ಡಾಡ್ಜ್‌ಕಾಯಿನ್ ಕರೆನ್ಸಿಯನ್ನು ಟೆಸ್ಲಾ ಕಂಪನಿ ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂದು ಅವರು ಟ್ವೀಟ್ ಮೂಲಕ ಜನರ ಸಲಹೆ ಕೇಳಿದ್ದಾರೆ.

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಮಾರ್ಚ್ ತಿಂಗಳಿನಲ್ಲಿ ಎಲಾನ್ ಮಸ್ಕ್'ರವರು ಬಿಟ್ ಕಾಯಿನ್ ಮೂಲಕ ಟೆಸ್ಲಾ ಕಂಪನಿಯ ಕಾರುಗಳನ್ನು ಖರೀದಿಸಬಹುದು ಎಂದು ಟ್ವಿಟರ್ ಮೂಲಕ ಘೋಷಿಸಿದ್ದರು. ಸದ್ಯಕ್ಕೆ ಬಿಟ್‌ಕಾಯಿನ್ ವಿಶ್ವದ ಅತಿದೊಡ್ಡ ಡಿಜಿಟಲ್ ಕರೆನ್ಸಿಯಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಸದ್ಯಕ್ಕೆ ಈ ಕರೆನ್ಸಿಯು ಅಮೆರಿಕಾಗೆ ಮಾತ್ರ ಸೀಮಿತವಾಗಿದೆ. ಟೆಸ್ಲಾ ಕಂಪನಿಯು ಇಂಟರ್ನಲ್ ಹಾಗೂ ಓಪನ್ ಸೋರ್ಸ್ ಸಾಫ್ಟ್‌ವೇರ್ ಬಳಸುತ್ತಿದ್ದು, ಬಿಟ್‌ಕಾಯಿನ್ ನೋಡ್‌ಗಳನ್ನು ನೇರವಾಗಿ ಚಲಾಯಿಸುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಬಿಟ್‌ಕಾಯಿನ್‌ಗಳನ್ನು ಸ್ವೀಕರಿಸುವ ಕಂಪನಿಯು ಅವುಗಳನ್ನು ಬಿಟ್‌ಕಾಯಿನ್‌ಗಳಾಗಿಯೇ ಬಳಸಲಿದೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ಅಮೆರಿಕಾಗೆ ಮಾತ್ರ ಸೀಮಿತವಾಗಿರುವ ಈ ಕರೆನ್ಸಿಯನ್ನು 2021ರ ಅಂತ್ಯದ ವೇಳೆಗೆ ಕಂಪನಿಯು ವಿದೇಶಗಳಲ್ಲಿಯೂ ಬಳಸಲಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು 1.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿರುವುದಾಗಿ ತಿಳಿಸಿತ್ತು. ಎಲಾನ್ ಮಸ್ಕ್ ಟ್ವಿಟರ್'ನಲ್ಲಿ ಕೇಳಿರುವ ಸಲಹೆಗೆ 78%ನಷ್ಟು ಜನರು ಸಮ್ಮತಿ ಸೂಚಿಸಿದ್ದಾರೆ.

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಡಾಡ್ಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯನ್ನು ಬಿಲ್ಲಿ ಮಾರ್ಕಸ್ ಹಾಗೂ ಜಾಕ್ಸನ್ ಪಾಮರ್ ಎಂಬುವವರು ಸಂಶೋಧಿಸಿದ್ದಾರೆ. ಈ ಕರೆನ್ಸಿಯು ಕೆಲವು ತಿಂಗಳುಗಳಿಂದ ಭಾರೀ ಜನಪ್ರಿಯತೆ ಪಡೆಯುತ್ತಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಇದರಿಂದಾಗಿ ಜನವರಿ ತಿಂಗಳಿನಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್'ಗಳಿದ್ದ ಅದರ ಮೌಲ್ಯವು ಏಪ್ರಿಲ್ ಅಂತ್ಯದ ವೇಳೆಗೆ 45 ಬಿಲಿಯನ್ ಡಾಲರ್'ಗಳಿಗೆ ಏರಿಕೆಯಾಗಿದೆ. ಕ್ರಿಪ್ಟೋಕರೆನ್ಸಿಯನ್ನು ಇನ್ನೂ ಹಲವಾರು ದೇಶಗಳಲ್ಲಿ ಸ್ವೀಕರಿಸುತ್ತಿಲ್ಲ.

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಇಂತಹ ಪರಿಸ್ಥಿತಿಯಲ್ಲಿ ಟೆಸ್ಲಾ ಕಂಪನಿ ಹಾಗೂ ಅದರ ಸಿಇಒ ಎಲಾನ್ ಮಸ್ಕ್ ಈ ಕರೆನ್ಸಿಯನ್ನು ನಿರಂತರವಾಗಿ ಬೆಂಬಲಿಸುತ್ತಿದ್ದಾರೆ. ಈ ಮೂಲಕ ಜನರು ಕ್ರಿಪ್ಟೊಕರೆನ್ಸಿ ಬಳಸಲು ಪ್ರೋತ್ಸಾಹಿಸುತ್ತಿದ್ದಾರೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕ್ರಿಪ್ಟೋಕರೆನ್ಸಿ ಮೂಲಕ ಕಾರು ಮಾರಾಟ ಮಾಡಲು ಮುಂದಾದ ಟೆಸ್ಲಾ

ಟೆಸ್ಲಾ ಕಂಪನಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ. ಕೆಲವೇ ದಿನಗಳಲ್ಲಿ ಕಂಪನಿಯು ತನ್ನ ಮೊದಲ ಕಾರಿನ ಬಿಡುಗಡೆಯ ಬಗೆಗಿನ ಮಾಹಿತಿಯನ್ನು ನೀಡುವ ಸಾಧ್ಯತೆಗಳಿವೆ.

Most Read Articles

Kannada
Read more on ಟೆಸ್ಲಾ tesla
English summary
Tesla to sell cars through Dogecoin payment. Read in Kannada.
Story first published: Wednesday, May 12, 2021, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X