ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆಯು ಕೂಡ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಮಾರಾಟವಾಗುತ್ತಿವೆ. ಕೈಗೆಟುಕುವ ದರದ ಕಾರುಗಳಿಂದ ಬಹುಕೋಟಿ ಬೆಲೆಯ ಐಷಾರಾಮಿ ಸೂಪರ್ ಕಾರುಗಳು ಕೂಡ ಮಾರಾಟವಾಗುತ್ತಿವೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಕಾರು ಖರೀದಿಸುವುದು ನಾವು ಭಾರತೀಯರು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಕಾರನ್ನು ಆಯ್ಕೆಮಾಡುವಾಗ ಹಲವಾರು ಅಂಶಗಳಿವೆ. ಕೆಲವರು ಟರ್ಬೋ ಎಂಜಿನ್ ಕಾರುಗಳನ್ನು ಇಷ್ಟಪಡುತ್ತಾರೆ. ಕೆಲವು ವಾಹನ ಪ್ರೇಮಿಗಳಿಗೆ ಪವರ್ ಫುಲ್ ಕಾರುಗಳನ್ನು ಇಷ್ಟಪಡುತ್ತಾರೆ. 4-ಸಿಲಿಂಡರ್ ಟರ್ಭೋ ಪೆಟ್ರೋಲ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ 4-ಸಿಲಿಂಡರ್ ಟರ್ಭೋ ಪೆಟ್ರೋಲ್ ಎಂಜಿನ್ ಉತ್ತಮ ಪವರ್ ಅನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಕೈಗೆಟುಕುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಸ್ಕೋಡಾ ಕುಶಾಕ್

ಕುಶಾಕ್ ಅನ್ನು ಎರಡು ಟರ್ಬೊ ಪೆಟ್ರೋಲ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಮೊದಲನೆಯದು 1.0-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಮೋಟರ್ ಎಂಜಿನ್ ಆಗಿದೆ, ಈ ಎಂಜಿನ್ 108 ಬಿಎಚ್‌ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿಗೆ ಜೋಡಿಸಲಾಗಿದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಇನ್ನು 1.5-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಸ್ಕೋಡಾ ಕುಶಾಕ್ ಕೈಗೆಟುಕುವ ದರದ ಎಸ್‍ಯುವಿ ಮತ್ತು ಇದರ ಟರ್ಬೊ-ಪೆಟ್ರೋಲ್ ಎಂಜಿನ್ ಮೋಜಿನ್ ಡ್ರೈವಿಂಗ್ ಅನುಭವವನ್ನು ಪಡೆಯಬಹುದು. ಇದರಲ್ಲಿ ಉತ್ತಮ ಪ್ರಮಾಣದ ಟಾರ್ಕ್ ಕೂಡ ಇದೆ. ಉತ್ತಮ ಪವರ್ ಅಂಕಿಅಂಶಗಳ ಹೊರತಾಗಿಯೂ, ಅದರ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದ ಕಾರಣದಿಂದಾಗಿ ಯೋಗ್ಯ ಮೈಲೇಜ್ ಅನ್ನು ಒದಗಿಸುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಗುತ್ತಿರುವ ಮಿಡ್ ಸೈಜ್ ಎಸ್‍ಯುವಿಗಳಲ್ಲಿ ಅಗ್ರಸ್ಥಾನಗದಲ್ಲಿದೆ. ಈ ಹ್ಯುಂಡೈ ಕ್ರೆಟಾ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಜನಪ್ರಿಯ ಮಿಡ್ ಎಸ್‍ಯುವಿಯಾಗಿದೆ. ಇದರಲ್ಲಿ 1.4 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಈ ಎಂಜಿನ್ 138 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರು ವಿಶಾಲವಾದ ಕ್ಯಾಬಿನ್ ಅನ್ನು ಒದಗಿಸುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಈ ಕಾರಿನಲ್ಲಿ ಕ್ಯಾಬಿನ್ ಏರ್ ಪ್ಯೂರಿಫೈಯರ್, ಪನೋರಮಿಕ್ ಸನ್‌ರೂಫ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ಇತ್ತೀಚಿನ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ. ಈ ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಕಂಪನಿಯ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ, ಈ ಹೊಸ ಎಸ್‍ಯುವಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 75 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಮೂಲಕ ಕನಿಷ್ಠ 1 ವರ್ಷಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಈ ಹೊಸ ಎಕ್ಸ್‌ಯುವಿ700 ಮಾದರಿಯನ್ನು ಮಹೀಂದ್ರಾ ಕಂಪನಿಯು 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಈ ಎಸ್‍ಯುವಿಯಲ್ಲಿ 2.0-ಲೀಟರ್ mHawk ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ 197 ಬಿಹೆಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯು ಕೇವಲ 5 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಈ ಎಸ್‍ಯುವಿಯು ಮೂರು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ಈ ಎಕ್ಸ್‌ಯುವಿ700 ಎಸ್‍ಯುವಿಯು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯ ಕ್ಯಾಬಿನ್ ನಲ್ಲಿ ಇಂಟಿಲಿಜೆಂಟ್ ಕಾಕ್‌ಪಿಟ್, ಸ್ಕೈ-ರೂಫ್, ಕ್ಯಾಬಿನ್ ಏರ್ ಪ್ಯೂರಿಫೈಯರ್ ಇತ್ಯಾದಿಗಳಂತಹ ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಫೋಕ್ಸ್‌ವ್ಯಾಗನ್ ಟೈಗನ್

ಭಾರತದ ಫೋಕ್ಸ್‌ವ್ಯಾಗನ್‌ನಿಂದ ಅತ್ಯಂತ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಟೈಗನ್ ಭಾರತೀಯ ಮಾರುಕಟ್ಟೆಗೆ ಒಂದು ಪ್ರಮುಖ ಮಾದರಿಯಾಗಿದೆ ಏಕೆಂದರೆ ಇದು ಬ್ರಾಂಡ್‌ನ ಇಂಡಿಯಾ 2.0 ಸ್ಟ್ರಾಟಜಿ ಅಡಿಯಲ್ಲಿ ಹೊರಬಂದ ಮೊದಲ ಮಾದರಿಯಾಗಿದೆ

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಟೈಗನ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಡೈನಾಮಿಕ್ ಟ್ರಿಮ್ ಅಡಿಯಲ್ಲಿರುವ ರೂಪಾಂತರಗಳು 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, ಪರ್ಫಾರ್ಮೆನ್ಸ್ ಮಾದರಿಯು 1.5 ಲೀಟರ್ ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಕಾರುಗಳಿವು..

ಇದರಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದರೊಂದಿಗೆ 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

Most Read Articles

Kannada
English summary
The affordable 4 cylinder turbo petrol engine suvs in india find here more details
Story first published: Friday, December 31, 2021, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X