ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಟಾಲಿವುಡ್ ನಟ ರಾಮ್ ಚರಣ್ ತೇಜ ಮೆಗಾಸ್ಟಾರ್ ಚಿರಂಜೀವಿರವರ ಪುತ್ರ. ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈಗ ರಾಮ್ ಚರಣ್ ತೇಜರವರು ಮತ್ತೊಂದು ದುಬಾರಿ ಬೆಲೆಯ ಐಷಾರಾಮಿ ಕಾರ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ಲೇಖನದಲ್ಲಿ ಅವರು ಖರೀದಿಸಿದ ಕಾರು ಯಾವುದು, ಅದರ ಬೆಲೆ ಎಷ್ಟು ಎಂಬ ವಿವರಗಳನ್ನು ನೋಡೋಣ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

Maybach GLS 600 Mercedes Benz ಕಂಪನಿಯ ಹೊಸ ಕಾರು ಮಾದರಿಯಾಗಿದೆ. ಈ ಕಾರು ಉದ್ಯಮಿಗಳು ಹಾಗೂ ಚಲನಚಿತ್ರ ತಾರೆಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ Mercedes Benz ಕಂಪನಿಯ ಕಾರುಗಳಿಗೆ ಐಷಾರಾಮಿ ಕಾರು ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಆದರೆ ಕಂಪನಿಯ ಕೆಲವು ಕಾರುಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಅವುಗಳಲ್ಲಿ Maybach GLS 600 ಕಾರು ಸಹ ಸೇರಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಸೆಲೆಬ್ರಿಟಿಗಳು ಹೊಸ Maybach GLS 600 ಐಷಾರಾಮಿ ಕಾರ್ ಅನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟರಾದ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ರವರು ಸಹ Mercedes Benz Maybach GLS 600 ಐಷಾರಾಮಿ ಕಾರಿನ ವಿತರಣೆಯನ್ನು ಪಡೆದಿದ್ದರು.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಖ್ಯಾತ ನಟಿ ಕೃತಿ ಸನೋನ್ ಸಹ ಈ ಐಷಾರಾಮಿ ಕಾರ್ ಅನ್ನು ಖರೀದಿಸಿದರು. ಕೃತಿ ಸನೋನ್ ಖರೀದಿಸಿದ ಕಾರಿನ ಬೆಲೆ ರೂ. 2.43 ಕೋಟಿಗಳಾಗಿದೆ. ಪ್ರಮುಖ ನಟರಿಗೆ ಸಡ್ಡು ಹೊಡೆಯಲು ಕೃತಿ ಸನೋನ್ ಈ ಕಾರ್ ಅನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಈಗಿನ ಸರದಿ ಟಾಲಿವುಡ್ ನಟ ರಾಮ್ ಚರಣ್ ತೇಜ ಅವರದು. ಅವರು ಖರೀದಿಸಿರುವ Mercedes Benz Maybach GLS 600 ಐಷಾರಾಮಿ ಕಾರಿನ ಬೆಲೆ ರೂ. 4 ಕೋಟಿಗಳಿಗೂ ಹೆಚ್ಚು.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ರಾಮ್ ಚರಣ್ Mercedes Benz ವಿತರಕರಿಂದ ಐಷಾರಾಮಿ ಕಾರು ವಿತರಣೆ ಪಡೆಯುತ್ತಿರುವ ಚಿತ್ರಗಳು ಈಗ ಹೊರಬಂದಿವೆ. ಅವರು ಕಾರ್ ಅನ್ನು ಚಾಲನೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಮ್ ಚರಣ್ ತೇಜ ರವರು ಈಗಾಗಲೇ Aston Martin V 8 Vintage, Range Rover Autobiography, Rolls Royce Phantom ಹಾಗೂ Mercedes Benz GL 350 ಸೇರಿದಂತೆ ವಿವಿಧ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಈಗ ಅವುಗಳ ಸಾಲಿಗೆ Mercedes Benz Maybach GLS 600 ಐಷಾರಾಮಿ ಕಾರು ಹೊಸದಾಗಿ ಸೇರ್ಪಡೆಯಾಗಿದೆ. ಅವರು ಕಳೆದ ಭಾನುವಾರ ಈ ಕಾರಿನ ವಿತರಣೆಯನ್ನು ಪಡೆದಿದ್ದಾರೆ. ರಾಮ್ ಚರಣ್ ತೇಜರವರು ಈಗ ನಿರ್ದೇಶಕ ಶಂಕರ್ ರವರ ಆರ್‌ಸಿ 15 ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ರಾಮ್ ಚರಣ್ ಹೊಸ Maybach GLS 600 ಕಾರ್ ಅನ್ನು ತಮ್ಮ ಪ್ರವಾಸಗಳಿಗಾಗಿ ಖರೀದಿಸಿದ್ದಾರೆ. ಈ ಕಾರು ಹಲವಾರು ಹೊಸ ಫೀಚರ್ ಗಳ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಹೊಂದಿದೆ. Mercedes Maybach GLS 600 ಐಷಾರಾಮಿ ಎಸ್‌ಯು‌ವಿಯಾಗಿದೆ. ಈ ಎಸ್‌ಯು‌ವಿಯಲ್ಲಿ 4.0 ಲೀಟರ್, ಟ್ವಿನ್ ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಈ ಎಂಜಿನ್ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 558 ಬಿಹೆಚ್‌ಪಿ ಪವರ್ ಹಾಗೂ 730 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಈ ಎಂಜಿನ್ ನಲ್ಲಿರುವ ಇಕ್ಯೂ ಬೂಸ್ಟ್ ಆಕ್ಟಿವೇಟೆಡ್ ಹೈಬ್ರಿಡ್ ಸಿಸ್ಟಂ ಹೆಚ್ಚುವರಿ 22 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Mercedes Benz ಕಂಪನಿಯು ಈ ಎಸ್‌ಯು‌ವಿಯ ಕೇವಲ 50 ಯುನಿಟ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಲ್ಲಾ ಯುನಿಟ್'ಗಳು ಮಾರಾಟವಾಗಿವೆ ಎಂಬುದು ಗಮನಾರ್ಹ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಈ ಹಿನ್ನೆಲೆಯಲ್ಲಿ Mercedes ಕಂಪನಿಯು ಈ ಎಸ್‌ಯು‌ವಿಯ ಮತ್ತಷ್ಟು ಯುನಿಟ್'ಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. Mercedes Maybach GLS 600 ಎಸ್‌ಯು‌ವಿಯು ಪ್ರೀಮಿಯಂ ಗುಣಮಟ್ಟದ ಲೆದರ್, ದೊಡ್ಡ ಪನೋರಾಮಿಕ್ ಸನ್ ರೂಫ್ ಹಾಗೂ ಹೆಚ್ಚು ಸ್ಪೇಸ್ ಅನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ಈ ಎಲ್ಲಾ ಸೌಲಭ್ಯಗಳಿಂದಾಗಿ Maybach GLS 600 ಎಸ್‌ಯು‌ವಿಯು ಐಷಾರಾಮಿ ಮನೆಯಂತೆ ಕಾಣುತ್ತದೆ. ಈ ಎಸ್‌ಯು‌ವಿಯಲ್ಲಿ ಆಕ್ಟಿವ್ ಡಿಸ್ಟೆನ್ಸ್ ಅಸಿಸ್ಟ್ ಡೈಸ್ಟ್ರಾನಿಕ್, ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್, ಆಕ್ಟಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್, ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್, ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಪ್ಲಸ್ ಅಡಾಪ್ಟಿವ್ ಎಲ್ಇಡಿ ಟೈಲ್ ಲೈಟ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಮೆಗಾಸ್ಟಾರ್ ಪುತ್ರ

ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್‌ಟಿ‌ಆರ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಬಹು ನಿರೀಕ್ಷಿತ ಆರ್‌ಆರ್‌ಆರ್ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಈ ಬಹು ನಿರೀಕ್ಷಿತ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿವೆ.

Most Read Articles

Kannada
English summary
Tollywood actor ram charan teja buys mercedes maybach gls 600 car details
Story first published: Tuesday, September 14, 2021, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X