ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಕೆಲವು ಅತ್ಯುತ್ತಮ ಹೆದ್ದಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ರೀತಿಯ ಸಮೀಕ್ಷೆಗಳನ್ನು ವಿಶ್ವದಾದ್ಯಂತ ನಿಯಮಿತವಾಗಿ ನಡೆಸಲಾಗುತ್ತದೆ.

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಆದರೆ ಭಾರತದಲ್ಲಿ ಈ ರೀತಿಯ ಸಮೀಕ್ಷೆ ನಡೆಸುತ್ತಿರುವುದು ಇದೇ ಮೊದಲು. ಈ ಸಮೀಕ್ಷೆಯು ದೇಶಾದ್ಯಂತವಿರುವ 219 ರಾಷ್ಟ್ರೀಯ ಹೆದ್ದಾರಿಗಳ 18,668 ಕಿ.ಮೀಗಳನ್ನು ಒಳಗೊಂಡಿದೆ. ಈ ಅಧ್ಯಯನದಲ್ಲಿ ಹೆದ್ದಾರಿಗಳ ಶ್ರೇಣಿಯನ್ನು ಅವುಗಳ ಗುಣಮಟ್ಟ, ಸುರಕ್ಷತೆ ಹಾಗೂ ಬಳಕೆದಾರರ ಅಂಶಗಳನ್ನು ಪರಿಗಣಿಸಿದ ನಂತರ ನಿರ್ಧರಿಸಲಾಗುತ್ತದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಅಧ್ಯಯನಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ.

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಇದರಿಂದ ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಾಯವಾಗಲಿದೆ ಎಂದು ಇಲಾಖೆ ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳ ಸಮೀಕ್ಷೆಯು ಸೇವೆಗಳ ಮಟ್ಟದ ಪ್ರಸ್ತುತ ಸ್ಥಿತಿಯ ಮೌಲ್ಯಮಾಪನವನ್ನು ನೀಡುತ್ತದೆ ಎಂದು ಎನ್‌ಎಚ್‌ಎಐ ತನ್ನ ವರದಿಯಲ್ಲಿ ತಿಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಇದರಿಂದ ನಿರ್ಮಾಣ ಕಾರ್ಯಗಳ ಗುಣಮಟ್ಟ, ಮಾನದಂಡಗಳನ್ನು ಅನುಸರಿಸುವುದು ಹಾಗೂ ನಿರ್ಮಾಣದಲ್ಲಿ ಅಳವಡಿಸಿಕೊಂಡ ಮಾರ್ಗಸೂಚಿಗಳ ಬಗ್ಗೆ ತಿಳಿಯಲು ಸಾಧ್ಯವಾಗಲಿದೆ. ಜೊತೆಗೆ ಹೆದ್ದಾರಿಗಳಲ್ಲಿನ ಸಮಸ್ಯೆಯನ್ನು ಕಂಡುಹಿಡಿದು ಸರಿಪಡಿಸಬಹುದು.

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಈ ಅಧ್ಯಯನದಲ್ಲಿ ಗುಣಮಟ್ಟ ಹಾಗೂ ಸೌಲಭ್ಯಗಳ ವಿಷಯದಲ್ಲಿ ಅಹಮದಾಬಾದ್ - ವಡೋದರಾ ನಡುವಿನ 102 ಕಿ.ಮೀ ಉದ್ದದ ಎನ್‌ಹೆಚ್ -48 ಪ್ರಥಮ ಸ್ಥಾನ ಪಡೆದಿದೆ. ದೇಶಾದ್ಯಂತವಿರುವ 219ಕ್ಕೂ ಹೆಚ್ಚು ಹೆದ್ದಾರಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಗೋವಾ - ಕರ್ನಾಟಕದ ನಡುವಿನ 141 ಕಿ.ಮೀ ಉದ್ದದ ಎನ್‌ಹೆಚ್ -66 ಎರಡನೇ ಸ್ಥಾನ ಪಡೆದರೆ, ಅಹಮದಾಬಾದ್ - ವಡೋದರಾವನ್ನು ಸಂಪರ್ಕಿಸುವ ಎನ್‌ಹೆಚ್ -1ರ 93 ಕಿ.ಮೀ ಉದ್ದದ ನಾಲ್ಕು ಪಥದ ರಸ್ತೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಈ ಎಲ್ಲಾ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಐ‌ಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್'ಗಳು ನಿರ್ಮಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಎನ್‌ಹೆಚ್-130ರಲ್ಲಿರುವ 42 ಕಿ.ಮೀ ಸಿಮ್ಗಾ - ಸರ್ಗಾನ್ ನಡುವಿನ ರಸ್ತೆ ಸ್ಥಾನ ಪಡೆದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಈ ಹೆದ್ದಾರಿಯನ್ನು ಲಾರ್ಸೆನ್ ಅಂಡ್ ಟುಬ್ರೊ ಕಂಪನಿ ಅಭಿವೃದ್ಧಿಪಡಿಸಿದೆ. ಎನ್‌ಹೆಚ್ -211ರ 98 ಕಿ.ಮೀ ಉದ್ದದ ಸೋಲಾಪುರ-ಯೆಡೆಶಿ ಮಾರ್ಗವು ಐದನೇ ಸ್ಥಾನದಲ್ಲಿದೆ.

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಕೃಷ್ಣಗಿರಿ - ವಲ್ಜಾಹ್‌ಪೇಟೆ ನಡುವಿನ 148 ಕಿ.ಮೀ ಉದ್ದದ ಎನ್‌ಹೆಚ್ -48 ಮಾರ್ಗವು ಆರನೇ ಸ್ಥಾನದಲ್ಲಿದೆ. ಗೋಧ್ರಾ ಮತ್ತು ಗುಜರಾತ್-ಮಧ್ಯಪ್ರದೇಶದ ಗಡಿಯನ್ನು ಸಂಪರ್ಕಿಸುವ 87.1 ಕಿ.ಮೀ ಉದ್ದದ ಎನ್‌ಹೆಚ್ -47 ಏಳನೇ ಸ್ಥಾನದಲ್ಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದಲ್ಲಿರುವ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳಿವು

ಬೆಂಗಳೂರಿನಿಂದ ನೆಲಮಂಗಲದವರೆಗಿನ ಎನ್‌ಹೆಚ್ -4 ಮಾರ್ಗವು ಎಂಟನೇ ಸ್ಥಾನದಲ್ಲಿದ್ದರೆ, ಇಸ್ಲಾಂ ನಗರ - ಕಡತಲ್ ನಡುವಿನ ಎನ್‌ಹೆಚ್ -44 ಒಂಭತ್ತನೇ ಸ್ಥಾನದಲ್ಲಿದೆ. ಇನ್ನು ಮಹೂಲಿಯಾವನ್ನು ಬಹರಗೋಡ ಹಾಗೂ ಬಹರಗೋಡವನ್ನು ಚಿಚಿರಾಕ್ಕೆ ಸಂಪರ್ಕಿಸುವ ಎನ್‌ಹೆಚ್ -33 ಹತ್ತನೇ ಸ್ಥಾನದಲ್ಲಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Top 10 best national highway stretches in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X