ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಭಾರತೀಯ ರಸ್ತೆಗಳನ್ನು ಆಕ್ರಮಿಸುತ್ತಿವೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಹೆಚ್ಚುತ್ತಿರುವ ಇಂಧನ ಬೆಲೆ ಹಾಗೂ ವಾಯು ಮಾಲಿನ್ಯಕ್ಕೆ ಸೂಕ್ತ ಪರಿಹಾರವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಕೇಂದ್ರ ಸರ್ಕಾರವು ತನ್ನ ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ದೇಶದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಸಂಚಾರ ನಡೆಸುತ್ತಿವೆ. ಭಾರತದ ಕೆಲವು ನಗರಗಳಲ್ಲಿ ಸಂಚರಿಸುತ್ತಿರುವ 5 ದೊಡ್ಡ ಎಲೆಕ್ಟ್ರಿಕ್ ಬಸ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

1. ಟಾಟಾ ಸ್ಟಾರ್‌ಬಸ್ ಅರ್ಬನ್ 9/12 ಮೀ ಎಸಿ ಬಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಟಾಟಾ ಸ್ಟಾರ್‌ಬಸ್ ಅರ್ಬನ್ 9/12 ಮೀಟರ್ ಎಸಿ ಬಸ್‌ನೊಂದಿಗೆ ಎಲೆಕ್ಟ್ರಿಕ್ ಬಸ್ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ. ತಾಂತ್ರಿಕವಾಗಿ ಮುಂದುವರೆದಿರುವ ಈ ಬಸ್ 186 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ನಿರಂತವಾಗಿ 145 ಕಿ.ವ್ಯಾ ಪವರ್ ಹಾಗೂ ಗರಿಷ್ಠ 245 ಕಿ.ವ್ಯಾ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಈ ಎಲೆಕ್ಟ್ರಿಕ್ ಬಸ್‌ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 150 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಬಸ್ಸಿನಲ್ಲಿರುವ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಈ ವಾಹನದ ದಕ್ಷತೆಯನ್ನು ಹೆಚ್ಚಿಸುತ್ತದೆ. ಟಾಟಾ ಸ್ಟಾರ್ಬಸ್ ಅರ್ಬನ್ 9/12 ಮೀಟರ್ ಎಸಿ ಬಸ್ಸಿನ ಗರಿಷ್ಠ ವೇಗ ಪ್ರತಿ ಗಂಟೆಗೆ 75 ಕಿ.ಮೀಗಳಾಗಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

2. ಅಶೋಕ್ ಲೇಲ್ಯಾಂಡ್ ಸರ್ಕ್ಯೂಟ್ ಎಸ್

ಅಶೋಕ್ ಲೇಲ್ಯಾಂಡ್ ವಾಣಿಜ್ಯ ವಾಹನ ಉದ್ಯಮದಲ್ಲಿ ಮನೆಮಾತಾಗಿದೆ. ಅಶೋಕ್ ಲೇಲ್ಯಾಂಡ್ ಸರ್ಕ್ಯೂಟ್ ಎಸ್ ಎಲೆಕ್ಟ್ರಿಕ್ ಬಸ್ 500 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 50 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬಸ್ ವೇಗದ ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಇದರಿಂದ ಯಾವುದೇ ಬ್ಯಾಟರಿ ನಿಲ್ದಾಣದಲ್ಲಿ ಕೇವಲ ಎರಡು ನಿಮಿಷಗಳಲ್ಲಿ ಈ ಬಸ್ಸಿನಲ್ಲಿರುವ ಬ್ಯಾಟರಿಯನ್ನು ಬದಲಿಸಬಹುದು. ಈ ಎಲೆಕ್ಟ್ರಿಕ್ ಬಸ್ 30 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

3. ಒಲೆಕ್ಟ್ರಾ ಸಿ 9

ಭಾರತೀಯ ರಸ್ತೆಗಳಲ್ಲಿ ಒಲೆಕ್ಟ್ರಾ ಸಿ 9 ಎಲೆಕ್ಟ್ರಿಕ್ ಬಸ್ ಅನ್ನು ಕಾಣುವುದು ತೀರಾ ಅಪರೂಪ. ಒಲೆಕ್ಟ್ರಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಪ್ರೀಮಿಯಂ ವಾಣಿಜ್ಯ ಬಸ್‌ಗಳನ್ನು ತಯಾರಿಸಲು ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದೆ. ಒಲೆಕ್ಟ್ರಾ ಸಿ 9 ಎಲೆಕ್ಟ್ರಿಕ್ ಬಸ್ ಪೂರ್ತಿಯಾಗಿ ಚಾರ್ಜ್ ಆದ ನಂತರ 250 ಕಿ.ಮೀನಿಂದ 300 ಕಿ.ಮೀಗಳವರೆಗೆ ಚಲಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಒಲೆಕ್ಟ್ರಾ ಸಿ 9 ಎಲೆಕ್ಟ್ರಿಕ್ ಬಸ್ಸಿನಲ್ಲಿ ಎರಡು 180 ಕಿ.ವ್ಯಾ ಲಿಥಿಯಂ ಐಯಾನ್ ಎಲೆಕ್ಟ್ರಿಕ್ ಮೋಟರ್‌ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟರ್‌ 3000 ಎನ್ಎಂ ಟಾರ್ಕ್ ಹಾಗೂ 480 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಫಾಸ್ಟ್ ಚಾರ್ಜರ್ ಮೂಲಕ ಈ ಎಲೆಕ್ಟ್ರಿಕ್ ಬಸ್ಸಿನಲ್ಲಿರುವ ಬ್ಯಾಟರಿಯನ್ನು 2 - 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಬಸ್ಸಿನಲ್ಲಿ ಒಂದು ಬಾರಿ 45ರಿಂದ 49 ಪ್ರಯಾಣಿಕರು ಪ್ರಯಾಣಿಸಬಹುದು.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

4. ಜೆ‌ಬಿ‌ಎಂ ಇಕೋ ಲೈಫ್ ಎಲೆಕ್ಟ್ರಿಕ್

ಜೆ‌ಬಿ‌ಎಂ ಇಕೋ ಲೈಫ್ ಎಲೆಕ್ಟ್ರಿಕ್ ಬಸ್ ಭಾರತದ ಮೊದಲ 100% ಎಲೆಕ್ಟ್ರಿಕ್ ಬಸ್ ಆಗಿದೆ. ಈ ಎಲೆಕ್ಟ್ರಿಕ್ ಬಸ್ಸಿನಲ್ಲಿ ಅಳವಡಿಸಿರುವ ಲಿಥಿಯಂ ಐಯಾನ್ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಸುಮಾರು 250 ಕಿ.ಮೀಗಳವರೆಗೆ ಚಲಿಸಬಹುದು. ಈ ಬಸ್ಸಿನಲ್ಲಿ ಕೇವಲ ಒಂದು ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಈ ಎಲೆಕ್ಟ್ರಿಕ್ ಮೋಟರ್ 80 ರಿಂದ 160 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ. ಫಾಸ್ಟ್ ಚಾರ್ಜರ್ ಮೂಲಕ ಈ ಬಸ್ಸಿನಲ್ಲಿರುವ ಬ್ಯಾಟರಿಯನ್ನು 2ರಿಂದ 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮೆರಾ, ಸ್ಟಾಪ್ ರಿಕ್ವೆಸ್ಟ್ ಬಟನ್, ತುರ್ತು ಪರಿಸ್ಥಿತಿಗಾಗಿ ಪ್ಯಾನಿಕ್ ಬಟನ್ ಸೇರಿದಂತೆ ಹಲವು ಫೀಚರ್ ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

5. Olectra eBuzz K6 LuXe

ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ 7 ಮೀಟರ್ ಉದ್ದದ ಈ ಎಲೆಕ್ಟ್ರಿಕ್ ಮಿನಿ ಬಸ್ ಅನ್ನು 2018ರಲ್ಲಿ ಬಿಡುಗಡೆಗೊಳಿಸಿತು. ಭಾರತದಲ್ಲಿ ನಿರ್ಮಾಣವಾಗಿರುವ ಈ ರೀತಿಯ ಮೊದಲ ಬಸ್ ಇದಾಗಿದೆ. Olectra eBuzz K6 LuXe ಬಸ್ಸಿನಲ್ಲಿ 180 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುವ ಟಾಪ್ 5 ಎಲೆಕ್ಟ್ರಿಕ್ ಬಸ್ಸುಗಳಿವು

ಈ ಎಲೆಕ್ಟ್ರಿಕ್ ಮೋಟರ್ 1800 ಎನ್ಎಂವರೆಗೆ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಬಸ್ಸಿನಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಯು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 200 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬಸ್ಸಿನಲ್ಲಿರುವ ಅಳವಡಿಸಿರುವ ರಿಜನರೇಟಿವ್ ಬ್ರೇಕಿಂಗ್‌ ಸಿಸ್ಟಂ ವಾಹನದ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ.

Most Read Articles

Kannada
English summary
Top 5 electric buses sold in indian market details
Story first published: Friday, November 26, 2021, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X