ವಾರದ ಸುದ್ದಿ: ಎಂಜಿ ಆಸ್ಟರ್ ಮತ್ತು ಹೊಸ ಫೋರ್ಸ್ ಗೂರ್ಖಾ ಅನಾವರಣ, ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆ..

ದೇಶಾದ್ಯಂತ ಹಬ್ಬದ ಋತು ಹಿನ್ನಲೆ ಖರೀದಿ ಪ್ರಕ್ರಿಯೆ ಜೋರಾಗುತ್ತಿದ್ದು, ಆಟೋ ಉದ್ಯಮವು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಮುಂಬರುವ ದಸರಾ ಮತ್ತು ದೀಪಾವಳಿ ವೇಳೆ ಗರಿಷ್ಠ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯೊಂದಿಗೆ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಹೆಚ್ಚುತ್ತಿದೆ. ಹೊಸ ವಾಹನಗಳ ಬಿಡುಗಡೆಯು ಈ ವಾರದ ಪ್ರಮುಖ ಸುದ್ದಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಹೊಸ ವಾಹನಗಳ ಬಿಡುಗಡೆಯ ಜೊತೆ ಆಟೋ ಉದ್ಯಮದಲ್ಲಿ ಜರುಗಿದ ಮತ್ತಷ್ಟು ಸುದ್ದಿಗಳ ಹೈಲೈಟ್ಸ್ ಮುಂದಿನ ಸ್ಪೈಡ್‌ಗಳಲ್ಲಿ ತಿಳಿಯೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಂಜಿ ಆಸ್ಟರ್ ಅನಾವರಣ

ಪ್ರತಿ ಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆಯಲ್ಲಿ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯನ್ನು ಪಡೆದುಕೊಳ್ಳಲಿರುವ ಆಸ್ಟರ್ ಕಾರು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳ ಜೋಡಣೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುವ ಭಾರತದ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಸ ಕಾರು ದಸರಾ ಸಂಭ್ರಮಕ್ಕೂ ಮುನ್ನ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಆರಂಭಿಕ ಮಾದರಿಗಳಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 1.5-ಲೀಟರ್ ನ್ಯಾಚುರಲ್ ಆಸ್ಪೆರೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ತನ್ನ ಬಹುನೀರಿಕ್ಷಿತ 2021ರ ಗೂರ್ಖಾ( Gurkha) ಆಫ್-ರೋಡ್ ಎಸ್‌ಯುವಿ ಮಾದರಿಯನ್ನು ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಅನಾವರಣಗೊಳಿಸಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಗೂರ್ಖಾ ಎಸ್‌ಯುವಿ ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣದೊಂದಿಗೆ ಹೊಸ ಕಾರಿನ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿರುವ ಫೋರ್ಸ್ ಮೋಟಾರ್ಸ್ ಕಂಪನಿಯು ಇದೇ ತಿಂಗಳು 27ರಂದು ಬೆಲೆ ಮಾಹಿತಿಯನ್ನು ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದು, ಬೆಲೆ ಘೋಷಣೆಯೊಂದಿಗೆ ಹೊಸ ಕಾರಿನ ಖರೀದಿ ಅಧಿಕೃತ ಬುಕ್ಕಿಂಗ್ ಕೂಡಾ ಅಂದೇ ಆರಂಭಗೊಳ್ಳಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಸಫಾರಿ ಗೋಲ್ಡ್ ಎಡಿಷನ್ ಬಿಡುಗಡೆ

ಯುಎಇನಲ್ಲಿ ಆರಂಭವಾಗುತ್ತಿರುವ 14ನೇ ಆವೃತ್ತಿಯ ವಿವೊ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಿಸಿಸಿಐ ಜೊತೆಗೆ ಸತತ ನಾಲ್ಕನೇ ವರ್ಷವೂ ಪಾಲುದಾರಿಕೆ ಪ್ರಕಟಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ನ್ಯೂ ಸಫಾರಿ ಎಸ್‌ಯುವಿ ಮಾದರಿಯನ್ನು ಟೂರ್ನಿಯಲ್ಲಿ ಪ್ರದರ್ಶನಗೊಳಿಸಲಿದೆ. ಐಪಿಎಲ್ ಉದ್ದೇಶಕ್ಕಾಗಿ ಕಂಪನಿಯು ಸಫಾರಿ ಎಸ್‌ಯುವಿ ಗೋಲ್ಡ್ ಎಡಿಷನ್ ಪರಿಚಯಿಸಿದ್ದು, ಹೊಸ ಕಾರು ಮೊದಲು ಟೂರ್ನಿಯಲ್ಲಿ ಪ್ರದರ್ಶನಗೊಂಡ ನಂತರಷ್ಟೇ ಗ್ರಾಹಕರ ಕೈಸೇರಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಮೋಟಾರ್ಸ್ ಕಂಪನಿಯು ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ಸಫಾರಿ ಗೋಲ್ಡ್ ಆವೃತ್ತಿಯನ್ನು ಪ್ರಮುಖ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್‌ಜೆಡ್ ಪ್ಲಸ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 21.89 ಲಕ್ಷಕ್ಕೆ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆಟೋಮ್ಯಾಟಿಕ್ ಮಾದರಿಯು ರೂ. 23.17 ಲಕ್ಷ ಬೆಲೆ ಹೊಂದಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ ಕಿಯಾ ಕಾರ್ನಿವಾಲ್ ಬಿಡುಗಡೆ

ಕಿಯಾ ಇಂಡಿಯಾ(Kia India) ಕಂಪನಿಯು ತನ್ನ 2021ರ ಕಾರ್ನಿವಾಲ್(Carnival) ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಂಪಿವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 24.95 ಲಕ್ಷಗಳಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಎಂಪಿವಿಯನ್ನು ಗ್ರಾಹಕರ ಬೇಡಿಕೆಯೆಂತೆ ಅಪ್ ಗ್ರೇಡ್ ಮಾಡಲಾಗಿದ್ದು, ಹಳೆಯ ಮಾದರಿಗಿಂತ ಒಂದೆರಡು ಹೊಸ ಅಪ್ ಡೇಟ್ ಗಳನ್ನು ಹೊಂದಿದೆ. Kia ಕಂಪನಿಯು Carnival ಎಂಪಿವಿಯ ಹೊಸ Limousine + ಟಾಪ್ ಎಂಡ್ ಮಾದರಿಯನ್ನು ಪರಿಚಯಿಸಿದೆ. ಹೊಸ ಎಂಪಿವಿಗಾಗಿ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಈ ಎಂಪಿವಿಯ ವಿತರಣೆ ಶೀಘ್ರದಲ್ಲಿಯೇ ಶುರುವಾಗುವ ಸಾಧ್ಯತೆಗಳಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಎಕ್ಸ್‌ಪ್ರೆಸ್ ಟಿ ವಾಣಿಜ್ಯ ಬಳಕೆಯ ಇವಿ ಕಾರು ಬಿಡುಗಡೆ

ಟಾಟಾ ಮೋಟಾರ್ಸ್(Tata Motors) ಕಂಪನಿಯು ವಾಣಿಜ್ಯ ಬಳಕೆಗಾಗಿಯೇ ವಿಶೇಷವಾಗಿ ಎಕ್ಸ್‌ಪ್ರೆಸ್ ಟಿ(Express T) ಎಂಬ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.54 ಲಕ್ಷಗಳಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರ ಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 213 ಕಿ.ಮೀಗಳವರೆಗೆ ಚಲಿಸುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ ಸ್ಪೋರ್ಟ್ಎಕ್ಸ್ ಎಸ್‍ಯುವಿ ಬಿಡುಗಡೆ

ಜರ್ಮನ್ ಮೂಲದ ಕಾರು ಉತ್ಪದನಾ ಕಂಪನಿಯಾದ ಬಿಎಂಡಬ್ಲ್ಯು(BMW) ತನ್ನ ಹೊಸ X5 xDrive SportX Plus ಎಸ್‍ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ BMW X5 xDrive SportX Plus ಎಸ್‍ಯುವಿಯು X5 xDrive30d SportX Plus ಮತ್ತು X5 xDrive40i SportX Plus ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

BMW X5 xDrive30d SportX Plus ವೆರಿಯೆಂಟ್ ಬೆಲೆಯು ರೂ,79.50 ಲಕ್ಷಗಳಾದರೆ, xDrive40i SportX Plus ವೆರಿಯೆಂಟ್ ಬೆಲೆಯು ರೂ.77.90 ಲಕ್ಷಗಳಾಗಿದೆ. ಈ ಎಲ್ಲಾ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಐಷಾರಾಮಿ ಎಸ್‍ಯುವಿಯನ್ನು ಚೆನ್ನೈನ BMW ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

Tata Nexon EV ಮಾರಾಟದಲ್ಲಿ ಹೊಸ ದಾಖಲೆ

ಟಾಟಾ ಮೋಟಾರ್ಸ್(Tata Motors) ನಿರ್ಮಾಣದ ನೆಕ್ಸಾನ್ ಎಲೆಕ್ಟ್ರಿಕ್(Nexon Electric) ಆವೃತ್ತಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರು ಕಳೆದ ತಿಂಗಳು ಅಗಸ್ಟ್ ಅವಧಿಯಲ್ಲಿ ಮೊದಲ ಬಾರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಬೇಡಿಕೆ ಪಡೆದುಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಈ ಮೊದಲು ಪ್ರತಿ ತಿಂಗಳಿಗೆ 300 ರಿಂದ 400 ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದ್ದ ಟಾಟಾ ನೆಕ್ಸಾನ್ ಇವಿ ಕಾರು ಇದೇ ಮೊದಲ ಬಾರಿಗೆ ಜೂನ್ ಅವಧಿಯಲ್ಲಿ 1 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಇದು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅತ್ಯಧಿಕ ಸಂಖ್ಯೆಯಾಗಿದೆ. ಅಗಸ್ಟ್ ಅವಧಿಯಲ್ಲಿ ಪ್ರಮುಖ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುವ ಮೂಲಕ 1,022 ಯುನಿಟ್ ಮಾರಾಟಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ 407 ಸಿಎನ್‌ಜಿ ವರ್ಷನ್ ಬಿಡುಗಡೆ

ಟಾಟಾ ಮೋಟರ್ಸ್ ಕಂಪನಿಯು ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮೂಲಕ ಗಮನಸೆಳೆಯುತ್ತಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಬದಲಾವಣೆಗಾಗಿ ಸಿಎನ್‌ಜಿ ಆವೃತ್ತಿಯನ್ನು ಪರಿಚಯಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ದೇಶದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ 407 ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನ ಮಾದರಿಯಲ್ಲಿ ಸಿಎನ್‌ಜಿ ಮಾದರಿಯನ್ನು ಪರಿಚಯಿಸಿದ್ದು, ಹೊಸ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.07 ಲಕ್ಷ ಬೆಲೆ ಹೊಂದಿದೆ. ಈ ವಾಹನವು ಡೀಸೆಲ್ ವೇರಿಯಂಟ್ ಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಶೇ.35ರಷ್ಟು ಹೆಚ್ಚುವರಿ ಲಾಭವನ್ನು ತಂದುಕೊಡಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ ಕಿಯಾ ಸೊನೆಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ 1 ಲಕ್ಷ ಯುನಿಟ್ ಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ ಎಂದು ಕಿಯಾ ಇಂಡಿಯಾ ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್‌ಯುವಿ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು. ಈ ಎಸ್‍ಯುವಿಯು ಬಿಡುಗಡೆಯಾದ ಒಂದು ವರ್ಷದೊಳಗೆ ಈ ಹೆಗ್ಗುರುತನ್ನು ಸಾಧಿಸಿತು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮಹೀಂದ್ರಾ ಫ್ಯೂರಿಯೊ 7 ವಾಣಿಜ್ಯ ವಾಹನ ಬಿಡುಗಡೆ

ಹೊಸ ತಂತ್ರಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ವಾಣಿಜ್ಯ ವಾಹನಗಳು ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ವಾಣಿಜ್ಯ ವಾಹನದ ಬೆಲೆಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.14.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.16.82 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಗ್ರಾಹಕರ ಬೇಡಿಕೆ ಅರಿತು ಹೊಸ ವಾಣಿಜ್ಯ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಕಡಿಮೆ ಮಾಲೀಕತ್ವ ವೆಚ್ಚ (TCO), ಅತ್ಯುತ್ತಮ ಖಾತರಿ ಕೊಡುಗೆ, ಕಡಿಮೆ ನಿರ್ವಹಣೆ, ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಹೊಸ ಫ್ಯೂರಿಯೊ 7 ವಾಣಿಜ್ಯ ವಾಹನ ಸರಣಿಗಳು ಅತ್ಯುತ್ತಮ ದರ್ಜೆಯ ಮೈಲೇಜ್‌ ಹೊಂದಿದ್ದು, ಈ ಟ್ರಕ್ ಸೆಗ್ಮೆಂಟ್ ಬೆಸ್ಟ್ ಹೈ ಪೇಲೋಡ್, ಬೆಸ್ಟ್-ಇನ್-ಕ್ಲಾಸ್ ಕ್ಯಾಬಿನ್ ಆರಾಮ, ಉತ್ತಮ ಸುರಕ್ಷತೆ ಮತ್ತು ಅನುಕೂಲತೆ ಹೊಂದಿದೆ.

Most Read Articles

Kannada
English summary
Top auto news of the week mg astor and force gurkha bs6 unveiled new carnival launched and more
Story first published: Sunday, September 19, 2021, 2:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X