ವಾರದ ಸುದ್ದಿ: ಹೊಸ ವಾಹನಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಮಿಂಚಿದ ಪಂಚ್..

ಆರ್ಥಿಕ ಸಂಕಷ್ಟದಲ್ಲೂ ಆಟೋ ಉದ್ಯಮವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗಲೇ ಸೆಮಿಕಂಡಕ್ಟರ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಸೆಮಿಕಂಡಕ್ಟರ್ ಕೊರತೆಯು ಉತ್ಪಾದನಾ ಪ್ರಮಾಣದ ಮೇಲೆ ಪರಿಣಾಮ ಬೀರಲಿದ್ದು, ಬಿಡಿಭಾಗಗಳ ಕೊರತೆ ನಡುವೆಯೂ ಟಾಟಾ ಪಂಚ್ ಸೇರಿದಂತೆ ಪ್ರಮುಖ ಕಾರುಗಳು ರಸ್ತೆಗಿಳಿಯುತ್ತಿವೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಪ್ರಮುಖ ಆಟೋ ಸುದ್ದಿಗಳೊಂದಿಗೆ ಹೊಸ ಕಾರುಗಳ ಬಿಡುಗಡೆಯ ಜೊತೆಗೆ ಹಲವಾರು ಹೊಸ ನವೀಕರಣಗಳನ್ನು ಒಳಗೊಂಡ ಹೊಸ ಆವೃತ್ತಿಗಳು ಸಹ ಬಿಡುಗಡೆಯಾಗುತ್ತಿದ್ದು, ಪ್ರಮುಖ ಆಟೋಮೊಬೈಲ್ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಸೆಮಿ ಕಂಡಕ್ಟರ್ ಬಿಕ್ಕಟ್ಟು

ಹೊಸ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರವಾಗಿ ಏರಿಳಿತ ಉಂಟಾಗುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ. ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಲ್ಲಿ ಕನಿಷ್ಠ ಪ್ರಮಾಣದ ಉತ್ಪಾದನೆ ಕೈಗೊಳ್ಳುತ್ತಿದ್ದು, ಹೊಸ ಕಾರುಗಳ ಕಾಯುವಿಕೆ ಅವಧಿಯು ಹೆಚ್ಚಳವಾಗಲಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಎಂಜಿ ಆಸ್ಟರ್ ಎಸ್‌ಯುವಿ ಬಿಡುಗಡೆ

ಎಂಜಿ ಮೋಟಾರ್(MG Motor) ಕಂಪನಿಯು ತನ್ನ ಬಹುನೀರಿಕ್ಷಿತ ಆಸ್ಟರ್(Astor) ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಹೊಸ ಕಾರಿನಲ್ಲಿರುವ ಎಂಜಿ ಮೋಟಾರ್ ಕಂಪನಿಯು ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ವೆರಿಯೆಂಟ್‌ಗಳೊಂದಿಗೆ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಅಧಿಕೃತವಾಗಿ ಸೊನೆಟ್ ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಬೆಲೆಯು ರೂ.10.79 ಲಕ್ಷಗಳಾಗಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಮೊದಲ ವರ್ಷದ ಸಂಭ್ರಮದಲ್ಲಿರುವ ಕಿಯಾ ಸೊನೆಟ್ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಖಲಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಟರ್ಬೊ ಐಎಂಟಿ, ಟರ್ಬೊ ಡಿಸಿಟಿ, ಡೀಸೆಲ್ ಎಂಟಿ ಮತ್ತು ಡೀಸೆಲ್ ಎಟಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಆನಿವರ್ಸರಿ ಎಡಿಷನ್ ಮಿಡ್-ಲೆವೆಲ್ HTX ಟ್ರಿಮ್ ಅನ್ನು ಆಧರಿಸಿದೆ. ಸೊನೆಟ್ ಆನಿವರ್ಸರಿ ಎಡಿಷನ್ ಅನ್ನು ಅರೋರಾ ಬ್ಲಾಕ್ ಪರ್ಲ್, ಗ್ರಾವಿಟಿ ಗ್ರೇ, ಸಿಲ್ವರ್ ಸ್ಟೀಲ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಟಾಟಾ ಪಂಚ್ ಮೈಕ್ರೊ ಎಸ್‌ಯುವಿ

ಪ್ರಯಾಣಿಕ ವಾಹನಗಳ ಸುರಕ್ಷತೆ ಕುರಿತು ಜಾಗತಿಕ ಮಟ್ಟದಲ್ಲಿ ಹೊಸ ಅಭಿಯಾನ ಕೈಗೊಂಡಿರುವ ಗ್ಲೊಬಲ್ ಎಸ್‌ಸಿಎಪಿ ಸಂಸ್ಥೆಯು ಭಾರತದಲ್ಲೂ ಕೂಡಾ #SAFERCARSFORINDIA ಅಭಿಯಾನದೊಂದಿಗೆ ಹೊಸ ಕಾರುಗಳ ಸುರಕ್ಷತೆಯ ಕುರಿತು ಕ್ರ್ಯಾಶ್ ಟೆಸ್ಟ್ ಮೂಲಕ ರೇಟಿಂಗ್ಸ್ ಬಹಿರಂಗಪಡಿಸುತ್ತಿದ್ದು, ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಹೊಸ ದಾಖಲೆಗೆ ಕಾರಣವಾಗಿವೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಕಾರುಗಳಲ್ಲಿ ಸುರುಕ್ಷೆ ವಿಚಾರವಾಗಿ ಎರಡು ಹಂತದ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಸುರಕ್ಷಾ ರೇಟಿಂಗ್ಸ್ ನಿರ್ಧರಿಸಲಿದ್ದು, ಹೊಸ ಪಂಚ್ ಕಾರು ಮಾದರಿಯು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ. ಭಾರತದಲ್ಲಿರುವ ಪ್ರಮುಖ ಹ್ಯಾಚ್‌ಬ್ಯಾಕ್ , ಸೆಡಾನ್ ಮತ್ತು ಎಸ್‍‌ಯುವಿ ಕಾರು ಮಾದರಿಗಳು ದುಬಾರಿ ಬೆಲೆ ನಡುವೆಯೂ ಗರಿಷ್ಠ ಮಟ್ಟದ ಸುರಕ್ಷತೆ ನೀಡಲು ವಿಫಲವಾಗಿದ್ದು , ಟಾಟಾ ಮೋಟಾರ್ಸ್ ಕಂಪನಿಗಳು ಮಾತ್ರ ದುಬಾರಿ ಕಾರುಗಳನ್ನೇ ಹಿಂದಿಕ್ಕಿ ಸುರಕ್ಷತೆಯಲ್ಲಿ ಅಗ್ರಸ್ಥಾನ ಗಳಿಸಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರ ಕಂಪನಿಯಾದ ಬಿಎಂಡಬ್ಲ್ಯು ತನ್ನ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.53.50 ಲಕ್ಷಗಳಾಗಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಹೊಸ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಮಾದರಿಯನ್ನು ಚೆನ್ನೈನ ಬಿಎಂಡಬ್ಲ್ಯು ಗ್ರೂಪ್ ಘಟಕದಲ್ಲಿ ಉತ್ಪಾದಿಸಲಾಗಿದೆ. ಲಾಂಗ್-ವೀಲ್‌ಬೇಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಶನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ವೆರಿಯಂಟ್‌ಗಳಲ್ಲಿ ದೇಶದಲ್ಲಿ ಇಂದಿನಿಂದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ. ಈ ಐಕಾನಿಕ್ ಸ್ಪೆಷಲ್ ಎಡಿಷನ್ ಮಾದರಿಯು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಹೊಸ ದಾಖಲೆ ನಿರ್ಮಿಸಿದ ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ700 ಮಾದರಿಯ ಬಿಡುಗಡೆಯೊಂದಿಗೆ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಕಂಪನಿಯು ಇದೀಗ ಹೊಸ ಕಾರಿನ ಮೂಲಕ ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದೆ.

ವಾರದ ಸುದ್ದಿ: ಹೊಸ ಕಾರುಗಳಿಗೆ ಬೇಡಿಕೆ, ಸೆಮಿಕಂಡಕ್ಟರ್ ಕೊರತೆ, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ಪಂಚ್..

ಹೊಸ ಎಕ್ಸ್‌ಯುವಿ700 ಮಾದರಿಗಳು ಮಹೀಂದ್ರಾ ಎಸ್‌ಯುವಿ ಪ್ರೂವಿಂಗ್ ಟ್ರ್ಯಾಕ್(MSPT) ನಲ್ಲಿ ದಿನದ 24 ಗಂಟೆಗಳ ತಡೆರಹಿತ ಚಾಲನೆ ನಡೆಸಿ ಹೊಸ ದಾಖಲೆಗೆ ಕಾರಣವಾಗಿದ್ದು, ಟ್ರ್ಯಾಕ್ ಡ್ರೈವ್ ಮೂಲಕವೇ ಹೊಸ ಎಸ್‌ಯುವಿ ಸರಾಸರಿಯಾಗಿ 4 ಸಾವಿರ ಕಿ.ಮೀ ಚಲಿಸಿ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ. ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಈ ಹಿಂದೆ ದಿನದ 24 ಗಂಟೆಗಳ ಚಲಿಸುವ ಮೂಲಕ 3,161 ಕಿ.ಮೀ ದಾಖಲೆ ಹೊಂದಿದ್ದ ಎಕ್ಸ್‌ಯುವಿ500 ದಾಖಲೆಯನ್ನು ಇದೀಗ ಎಕ್ಸ್‌ಯುವಿ700 ಮಾದರಿಯು ಹೊಸ ದಾಖಲೆ ನಿರ್ಮಿಸಿದೆ.

Most Read Articles

Kannada
English summary
Top auto news of the week tata punch global ncap test semiconductor shortage crisis mg astor launche
Story first published: Sunday, October 17, 2021, 0:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X