Just In
Don't Miss!
- News
"ಕಾಂಗ್ರೆಸ್ ಈಗ ಒಡೆದ ಮನೆ; ಮೂರು ಗುಂಪುಗಳ ನಡುವೆ ನಿರಂತರ ಗುದ್ದಾಟ''
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Sports
ಶ್ರೀಲಂಕಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ, ಗೇಲ್ ವಾಪಸ್
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾರದ ಪ್ರಮುಖ ಆಟೋ ಸುದ್ದಿ: ಆಲ್ಟ್ರೊಜ್ ಐಟರ್ಬೋ ಬಿಡುಗಡೆ, ಜಾರಿಗೆ ಬರಲಿದೆ ಹೊಸ ಆಟೋ ಇನ್ಸುರೆನ್ಸ್..
ಹೊಸ ವರ್ಷದ ಆರಂಭದಲ್ಲಿ ಭಾರತೀಯ ಆಟೋ ಉದ್ಯಮವು ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಹೊಸ ವಾಹನ ಮಾರಾಟವು ಸುಧಾರಣೆಗೊಂಡಿರುವ ಹಿನ್ನಲೆಯಲ್ಲಿ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದೆ.

ಹೊಸ ವಾಹನಗಳ ಬಿಡುಗಡೆಯ ಜೊತೆಗೆ ವಾಹನ ಉದ್ಯಮದಲ್ಲಿ ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿದ್ದ ಆಟೋ ಉತ್ಪಾದನಾ ಚಟುವಟಿಕೆಗಳು ಇದೀಗ ವೇಗ ಪಡೆದುಕೊಳ್ಳುತ್ತಿವೆ. ಈ ವಾರದ ಪ್ರಮುಖ ಆಟೋ ಉತ್ಪಾದನಾ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಜೊತೆಗೆ ಕೆಲವು ಪ್ರಮುಖ ಆಟೋ ಉತ್ಪಾದನಾ ನೀತಿಗಳು ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಪ್ರಮುಖ ಸುದ್ದಿಗಳ ಹೈಲೈಟ್ಸ್ ಇಲ್ಲಿದೆ ನೋಡಿ.

ಆಲ್ಟ್ರೊಜ್ ಐ-ಟರ್ಬೊ ವರ್ಷನ್ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಆಲ್ಟ್ರೊಜ್ ಆವೃತ್ತಿಯಲ್ಲಿ ಪರ್ಫಾಮೆನ್ಸ್ ಮಾದರಿಯಾದ 108 ಬಿಎಚ್ಪಿ ಉತ್ಪಾದಿತ 1.2-ಲೀಟರ್ ಐ-ಟರ್ಬೊ ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.73 ಲಕ್ಷ ಬೆಲೆ ಹೊಂದಿದೆ.

ಹೊಸ ಆಲ್ಟ್ರೊಜ್ ಟರ್ಬೋ ವರ್ಷನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಯಾದ ಹ್ಯುಂಡೈ ಐ20, ಮಾರುತಿ ಸುಜುಕಿ ಬಲೆನೊ ಮತ್ತು ಫೋರ್ಕ್ಸ್ವ್ಯಾಗನ್ ಪೊಲೊ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಆಲ್ಟ್ರೊಜ್ ಐ-ಟರ್ಬೊ ಮಾದರಿಯನ್ನು ಎಕ್ಸ್ಟಿ, ಎಕ್ಸ್ಜೆಡ್, ಎಕ್ಸ್ಜೆಡ್ ಪ್ಲಸ್ನಲ್ಲಿ ಪರಿಚಯಿಸಲಾಗಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಆವೃತ್ತಿಯು ಬೆಲೆಯಲ್ಲೂ ತುಸು ದುಬಾರಿಯಾಗಿದೆ.

3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಹೊಸ ಮಾದರಿಯ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ಸ್ಟ್ಯಾಂಡರ್ಡ್ 3 ಸೀರಿಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರು ಮಾದರಿಯು 330ಎಲ್ಐ ಲಗ್ಷುರಿ ಲೈನ್, 330ಎಲ್ ಎಂ ಸ್ಪೋರ್ಟ್ ಮತ್ತು 320ಎಲ್ಡಿ ಲಗ್ಷುರಿ ಲೈನ್ ಹೊಂದಿದೆ.

ಪ್ಯಾನ್ ಇಂಡಿಯಾ ಎಕ್ಸ್ಶೋರೂಂ ಪ್ರಕಾರ ಆರಂಭಿಕ ಕಾರು ಮಾದರಿಯು ರೂ.51.50 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 53.90 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
ಬಜೆಟ್ ಬೆಲೆಗಳಲ್ಲಿ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರುಗಳ ಖರೀದಿಯು ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯೂ ಕೂಡಾ ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಗರಿಷ್ಠ ರೇಟಿಂಗ್ಸ್ ಪಡೆದುಕೊಳ್ಳುವ ಯಶಸ್ವಿಯಾಗಿದೆ.

ಹೊಸ ಕಾರುಗಳ ಪೈಕಿ ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯು ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಏಷಿಯನ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ನಲ್ಲಿ 5ಕ್ಕೆ 4 ಸೇಫ್ಟಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಟ್ರಾಫಿಕ್ ನಿಯಮ ಉಲ್ಲಂಘನೆ ಆಧಾರ ಮೇಲೆ ಇನ್ಸುರೆನ್ಸ್ ಮೊತ್ತ
ವಿಮಾ ನಿಯಂತ್ರಣ ಪ್ರಾಧಿಕಾರವು ರಚಿಸಿರುವ ತಂಡವು ಸ್ವಂತ ಹಾನಿ, ಥರ್ಡ್ ಪಾರ್ಟಿ ಹಾಗೂ ಇತರ ರೀತಿಯ ಮೋಟಾರು ವಿಮಾ ಕಂತುಗಳ ಜೊತೆಗೆ ಹೊಸದಾಗಿ ಸಂಚಾರ ಉಲ್ಲಂಘನೆ ಪ್ರೀಮಿಯಂಗಳನ್ನು ಸಹ ಸೇರಿಸಲು ಸೂಚಿಸಿದೆ.

ಸಂಚಾರ ನಿಯಮ ಉಲ್ಲಂಘನೆಗಳ ಪ್ರೀಮಿಯಂ ಅನ್ನು ಐದನೇ ವಿಭಾಗವಾಗಿ ಸೇರಿಸಲು ಈ ತಂಡವು ಶಿಫಾರಸು ಮಾಡಿದೆ. ವಾಹನ ಹಾನಿ ವಿಮೆ, ಮೂಲ ತೃತೀಯ ವಿಮೆ, ಹೆಚ್ಚುವರಿ ತೃತೀಯ ವಿಮೆ ಹಾಗೂ ಕಡ್ಡಾಯ ವೈಯಕ್ತಿಕ ಅಪಘಾತ ವಿಮೆ ಪ್ರೀಮಿಯಂನಲ್ಲಿರುವ ನಾಲ್ಕು ವಿಭಾಗಗಳಾಗಿವೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಹೊಸ ವಿಮೆಯ ಮಾನ್ಯತೆಗಾಗಿ ಕರಡನ್ನು ಬಿಡುಗಡೆಗೊಳಿಸಿದೆ.

ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ
ಭಾರತದಲ್ಲಿ ಕಾರುಗಳ ಗ್ಲಾಸುಗಳ ಮೇಲೆ ಯಾವುದೇ ರೀತಿಯ ಸನ್ ಫಿಲ್ಮ್ ಅಥವಾ ಸ್ಕ್ರೀನ್'ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ವಾಹನಗಳಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

ಆದರೂ ಕೆಲವರು ಇನ್ನೂ ಸಹ ಕಾರುಗಳಲ್ಲಿ ಸನ್ ಫಿಲ್ಮ್'ಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕಾರುಗಳಲ್ಲಿ ಸನ್ ಫಿಲ್ಮ್ ಬಳಸುವುದರ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಕೇರಳ ಪೊಲೀಸರು ಸನ್ ಫಿಲ್ಮ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಬೈಕ್ ಉತ್ಪಾದನೆಯಲ್ಲಿ ಹೀರೋ ಹೊಸ ಮೈಲಿಗಲ್ಲು
ಭಾರತದಲ್ಲಿ ಮಾತ್ರವಲ್ಲ ವಿಶ್ವದ ಮುಂಚೂಣಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

1984ರಲ್ಲಿ ಹೀರೋ ಹೋಂಡಾ ಮೋಟಾರ್ ಸೈಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಂಪನಿಯು ಜಪಾನ್ ಕಂಪನಿಯಾದ ಹೋಂಡಾ ಮೋಟಾರ್ಸೈಕಲ್ ಜೊತೆಗೂಡಿ ಆಟೋ ಉತ್ಪಾದನಾ ವಲಯದಲ್ಲಿ ಮೊದಲ ಕಾರ್ಯಾಚರಣೆ ಆರಂಭಿಸಿತ್ತು. ಒಟ್ಟು 34 ವರ್ಷಗಳಲ್ಲಿ 10 ಕೋಟಿ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅಗ್ರಗಣ್ಯ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ.

ಸೀಮನ್ಸ್ ಕಂಪನಿಯ ಜೊತೆಗೂಡಿದ ಓಲಾ
ತಮಿಳುನಾಡಿನಲ್ಲಿ ಭಾರತದ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ಧಿಪಡಿಸಲು ಓಲಾ ಹಾಗೂ ಸೀಮನ್ಸ್ ಕಂಪನಿಗಳು ಮುಂದಾಗಿವೆ. ಈ ಎರಡೂ ಕಂಪನಿಗಳು ಸಹಭಾಗಿತ್ವದಲ್ಲಿ ಈ ಘಟಕವನ್ನು ಅಭಿವೃದ್ಧಿಪಡಿಸಲಿವೆ.

ಓಲಾ ಕಂಪನಿಯು ತನ್ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಳೆದ ತಿಂಗಳು ತಮಿಳುನಾಡು ಸರ್ಕಾರದೊಂದಿಗೆ ರೂ.2,400 ಕೋಟಿಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಉತ್ಪಾದನಾ ಘಟಕವು ರಾಜ್ಯದಲ್ಲಿ 10,000 ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಓಲಾದ ತಮಿಳುನಾಡು ಘಟಕವು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕವಾಗಲಿದ್ದು, ಪ್ರತಿವರ್ಷ ಸುಮಾರು ಎರಡು ಮಿಲಿಯನ್ ಸ್ಕೂಟರ್ಗಳನ್ನು ಉತ್ಪಾದಿಸುವ ಸಿದ್ದತೆಯಲ್ಲಿದೆ.