ವಾರದ ಸುದ್ದಿ: ವಿಂಟೇಜ್ ರೂಲ್ಸ್ ಜಾರಿ, ಬಾಡಿಗೆ ವಾಹನ ವಿಮೆ ಬದಲಾವಣೆ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಕೋವಿಡ್‌ನಿಂದ ತಗ್ಗಿದ್ದ ಆರ್ಥಿಕ ಚಟುವಟಿಕೆಗಳು ಇದೀಗ ಹಂತ-ಹಂತವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಆಟೋ ಉದ್ಯಮ ಚಟುವಟಿಕೆಗಳು ಈಗಾಗಲೇ ಪೂರ್ಣಪ್ರಮಾಣದಲ್ಲಿ ಪುನಾರಂಭಗೊಂಡಿವೆ. ಹೊಸ ವಾಹನ ಖರೀದಿ ಹೆಚ್ಚಳವಾಗುತ್ತಿದ್ದರೂ ಇಂಧನ ಬೆಲೆ ಏರಿಕೆ ವಾಹನ ಮಾಲೀಕತ್ವ ಹೊರೆಯಾಗಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಇನ್ನು ಯಾವೆಲ್ಲಾ ಪ್ರಮುಖ ಸುದ್ದಿಗಳಿವೆಂದು ಇಲ್ಲಿ ತಿಳಿಯೋಣ.

ವಾರದ ಸುದ್ದಿ

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿದ ಬೇಡಿಕೆ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ವಾರದ ಸುದ್ದಿ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿರುವುದರಿಂದ ವಿವಿಧ ವಾಹನಗಳು ಇವಿ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ವಾರದ ಸುದ್ದಿ

ದುಬಾರಿ ಬೆಲೆ ನಡುವೆಯು ಹೊಸ ಇವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2023ರ ವೇಳೆಗೆ ಒಟ್ಟು 6 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಹೊಂದಿರುವ ಗುರಿಹೊಂದಿದ್ದು, 2030ರ ವೇಳೆಗೆ ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಣಯ ಪ್ರಕಟಿಸಿದೆ.

ವಾರದ ಸುದ್ದಿ

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ನಿಯಮ

ವಿಂಟೇಜ್ ವಾಹನಗಳ ನೋಂದಣಿ ಕುರಿತಾದ ಗೊಂದಲಗಳಿಗೆ ಹೊಸ ಮಾರ್ಗಸೂಚಿ ಪಾಲನೆಗೆ ಅಸ್ತು ಎಂದಿರುವ ಕೇಂದ್ರ ಸಾರಿಗೆ ಸಚಿವಾಲಯವು ಹಲವು ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ. ಹೊಸ ಮಾನದಂಡಗಳ ಪ್ರಕಾರ ಹಳೆಯ ವಾಹನವನ್ನು ವಿಂಟೇಜ್ ಮಾದರಿ ಎಂದು ಪರಿಗಣಿಸಲು ನೋಂದಣಿ ದಿನಾಂಕದಿಂದ ಇಂದಿನವರಗೆ ಕನಿಷ್ಠ 50 ವರ್ಷ ಪೂರೈಸಿರಬೇಕಿದ್ದು, ವಿಂಟೇಜ್ ವಾಹನಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆ ಮಾಡುವುದಾಗಲಿ ಅಥವಾ ಸಾರ್ವಜನಿಕವಾಗಿ ಸಂಚಾರ ಮಾಡಲು ಯಾವುದೇ ಅವಕಾಶ ನೀಡಲಾಗಿಲ್ಲ.

ವಾರದ ಸುದ್ದಿ

ಕೇವಲ ಪ್ರದರ್ಶನ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡುವ ಅವಕಾಶವಿದ್ದು, ಹಳೆಯ ವಾಹನಗಳನ್ನು ವಿಂಟೇಜ್ ಮಾದರಿಯಾಗಿ ನೋಂದಾಯಿಸಲು ರೂ. 20 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಹಾಗೆಯೇ ಮರುನೋಂದಣಿಯಾಗಲಿರುವ ವಿಂಟೇಜ್ ವಾಹನಗಳಿಗೆ ರೂ. 5 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ.

ವಾರದ ಸುದ್ದಿ

ಬಾಡಿಗೆ ವಾಹನಗಳ ವಿಮೆಯಲ್ಲಿ ಬದಲಾವಣೆ

ಇತ್ತೀಚೆಗೆ ವಾಹನ ವಿಮೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಹನವನ್ನು ಬಾಡಿಗೆಗೆ ತೆಗೆದುಕೊಂಡರೆ ವಾಹನದ ಥರ್ಡ್ ಪಾರ್ಟಿ ವಿಮಾ ರಕ್ಷಣೆಯನ್ನು ಸಹ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಾರದ ಸುದ್ದಿ

ಈ ಸಂದರ್ಭದಲ್ಲಿ ವಾಹನವನ್ನು ಬಾಡಿಗೆಗೆ ಪಡೆದ ವ್ಯಕ್ತಿಯನ್ನು ವಾಹನದ ಮಾಲೀಕರೆಂದು ಪರಿಗಣಿಸಲಾಗುತ್ತದೆ. ವಾಹನವನ್ನು ಬಾಡಿಗೆಗೆ ಪಡೆದ ನಂತರ ಅಪಘಾತವಾದರೆ ವಿಮಾ ಕಂಪನಿಯು ಪರಿಹಾರವನ್ನು ನೀಡಬೇಕಾಗುತ್ತದೆ. ವಾಹನಗಳ ಬಾಡಿಗೆ ಒಪ್ಪಂದದ ಅವಧಿಯಲ್ಲಿ ವಾಹನವು ಅಪಘಾತಕ್ಕೀಡಾದರೆ ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಲು ಹೊಣೆಯಾಗಿರಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ವಾರದ ಸುದ್ದಿ

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಇ-ಟ್ರಾನ್ ಕಾರು ಗ್ರಾಹಕರ ಬೇಡಿಕೆಯೆಂತೆ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ವಾರದ ಸುದ್ದಿ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಇ-ಟ್ರಾನ್ 50 ಮಾದರಿಗೆ ರೂ.99.99 ಲಕ್ಷ, ಇ-ಟ್ರಾನ್ 55 ಮಾದರಿಗೆ ರೂ. 1.16 ಕೋಟಿ ಮತ್ತು ಇ-ಟ್ರಾನ 55 ಸ್ಪೋರ್ಟ್‌ಬ್ಯಾಕ್ ಮಾದರಿಗೆ ರೂ. 1.17 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ವಾರದ ಸುದ್ದಿ

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದೆ ಟೈಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯ ಉತ್ಪಾದನಾ ಮಾದರಿಯ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಕಾರು ಮುಂಬರುವ ಸೆಪ್ಟೆಂಬರ್ ಕೊನೆಯಲ್ಲಿ ಬಿಡುಗಡೆಗೊಳ್ಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಾರದ ಸುದ್ದಿ

ಹೊಚ್ಚ ಹೊಸ ಟೈಗನ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಸ್ಟ್ಯಾಂಡರ್ಡ್ ಜೋಡಣೆಯೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಸಹಭಾಗಿತ್ವ ಸಂಸ್ಥೆಯಾದ ಸ್ಕೋಡಾ ಕುಶಾಕ್ ಕಾರು ಮಾದರಿಯಲ್ಲೇ ಹೊಸ ಟೈಗನ್ ಕೂಡಾ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ವಾರದ ಸುದ್ದಿ

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಬಜೆಟ್ ಕಾರುಗಳ ಮೂಲಕ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಕಳೆದ ಮೂರು ವರ್ಷಗಳಿಂದ ಅತ್ಯಧಿಕ ಮಟ್ಟದ ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ದಾಖಲೆ ಪ್ರಮಾಣದ ಬೆಳವಣಿಗೆ ಸಾಧಿಸಿದೆ.

ವಾರದ ಸುದ್ದಿ

ಗ್ರಾಮೀಣ ಭಾಗದಲ್ಲಿನ ಕಾರು ಮಾರಾಟದಲ್ಲಿ ಬಜೆಟ್ ಕಾರುಗಳ ಮೂಲಕ ಅತ್ಯಧಿಕ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದುವರೆಗೆ ಸುಮಾರು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಇದು ಕೇವಲ ಗ್ರಾಮೀಣ ಭಾಗದಲ್ಲಿನ ಗ್ರಾಹಕರು ಖರೀದಿಸಿದ ಮಾರುತಿ ಸುಜುಕಿ ಕಾರುಗಳ ಸಂಖ್ಯೆಯಾಗಿದ್ದು, ಮಾಹಾನಗರಗಳು, ಟೈರ್ 1 ಮತ್ತು ಟೈರ್ 2 ನಗರಗಳಲ್ಲಿನ ಕಾರು ಮಾರಾಟವು ಅತ್ಯಧಿಕವಾಗಿದೆ.

ವಾರದ ಸುದ್ದಿ

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಪರ್ಮಿಟ್

ದೆಹಲಿ ನಗರದಲ್ಲಿ 4,000 ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಹೊಸ ಆಟೋ ಪರ್ಮಿಟ್ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ದೆಹಲಿ ಸರ್ಕಾರವು ಶೀಘ್ರದಲ್ಲಿಯೇ ಎಲ್ಲಾ ಸಿಎನ್‌ಜಿ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಆರಂಭಿಸಲಿದೆ.

ವಾರದ ಸುದ್ದಿ

ದೆಹಲಿ ನಗರದಲ್ಲಿ ಮಾಲಿನ್ಯ ಮುಕ್ತ ಸಾರಿಗೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಹೊಸ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದೆ. ಸದ್ಯಕ್ಕೆ ದೆಹಲಿಯಲ್ಲಿ ಸುಮಾರು 95,000 ನೋಂದಾಯಿತ ಸಿಎನ್‌ಜಿ ಆಟೋ ರಿಕ್ಷಾಗಳು ಕಾರ್ಯನಿರ್ವಹಿಸುತ್ತಿವೆ. ಈ ಆಟೋ ರಿಕ್ಷಾಗಳ ಗರಿಷ್ಠ ಮಿತಿಯನ್ನು 1 ಲಕ್ಷದವರೆಗೆ ನಿಗದಿ ಪಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Top Auto News Of This Week. Read in Kannada.
Story first published: Sunday, July 25, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X