ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ವಿಧದ ಕಾರುಗಳಿವೆ. ಗ್ರಾಹಕರು ಕಾರು ಖರೀದಿಸುವಾಗ ಮೈಲೇಜ್, ಫೀಚರ್ಸ್, ವಿನ್ಯಾಸದ ಜೊತೆ ಕಾರಿನ ಸುರಕ್ಷತೆಯ ಬಗ್ಗೆ ಗಮನಹರಿಸುತ್ತಿದ್ದಾರೆ. ಭಾರತದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸುರಕ್ಷತೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಸುರಕ್ಷಿತ ವಾಹನಗಳ ಬಗ್ಗೆ ಜಾಗೃತಿ ಮೂಡಿಸಲು #SaferCarsForIndia ಅಭಿಯಾನದ ಅಡಿಯಲ್ಲಿ, ಗ್ಲೋಬಲ್ NCAP ಕಳೆದ ಕೆಲವು ವರ್ಷಗಳಲ್ಲಿ 40 ಮೇಡ್ ಇನ್ ಇಂಡಿಯಾ ವಾಹನಗಳನ್ನು ಪರೀಕ್ಷಿಸಿದೆ. ಈ ಮಾದರಿಗಳು ಕಳಪೆ ಶೂನ್ಯದಿಂದ 5 ಸ್ಟಾರ್ ರೇಟಿಂಗ್ ಪಡೆದ ಮಾದರಿಗಳು ಕೂಡ ಇವೆ. ಜಾಗತಿಕ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳ ಪ್ರಕಾರ ಭಾರತದಲ್ಲಿ ಮಾರಾಟದಲ್ಲಿರುವ ಟಾಪ್ 5 ಸುರಕ್ಷಿತ ಮೇಡ್ ಇನ್ ಇಂಡಿಯಾ ಕಾರುಗಳ ಮಾಹಿತಿ ಇಲ್ಲಿದೆ,

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಟಾಟಾ ಪಂಚ್

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹೊಸ ಪಂಚ್ ಮೈಕ್ರೊ ಎಸ್‍ಯುವಿ ಮಾದರಿಯು ಜಾಗತಿಕ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 5 ಸ್ಟಾರ್ ರೇಟಿಂಗ್ ಪಾಯಿಂಟ್ ಗಳನ್ನು ಪಡೆದುಕೊಂಡಿದೆ. ಈ ಸಣ್ಣ ಮೈಕ್ರೊ ಎಸ್‍ಯುವಿ ಕಾರು ಮಕ್ಕಳರ ರಕ್ಷಣೆಗಾಗಿ ನಾಲ್ಕು ಸ್ಟಾರ್ ರೇಟಿಂಗ್ ಪಾಯಿಂಟ್ ಗಳನ್ನು ಗಳಿಸಿದೆ. ಇದು ವಯಸ್ಕರ ರಕ್ಷಣೆ ಮತ್ತು ಮಕ್ಕಳ ರಕ್ಷಣೆ ಎರಡಕ್ಕೂ ಗರಿಷ್ಠ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಗಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯನ್ನು ಹಿಂದಿಕ್ಕಿ ಟಾಟಾ ಪಂಚ್ ಭಾರತದ ಅತಿ ಸುರಕ್ಷಿತ ಕಾರು ಎನಿಸಿಕೊಂಡಿದೆ. ಈಸಣ್ಣ ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಗರಿಷ್ಠ 17 ಪಾಯಿಂಟ್‌ಗಳಲ್ಲಿ 16.45 ಅನ್ನು ಪಡೆದುಕೊಂಡಿದೆ, ಏಕೆಂದರೆ ಇದು ಜಾಗತಿಕ ಎನ್‌ಸಿಎಪಿ ಪರೀಕ್ಷಿಸಿದ ಎಲ್ಲಾ ಭಾರತದಲ್ಲಿ ತಯಾರಿಸಿದ ವಾಹನಗಳಲ್ಲಿ ಅತಿ ಹೆಚ್ಚು.64kmph ವೇಗದಲ್ಲಿ ಪರೀಕ್ಷಿಸಲಾಗಿರುವ

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಹೊಸ ಪಂಚ್ ಚಾಲಕ ಮತ್ತು ಪ್ರಯಾಣಿಕರ ತಲೆ, ಕುತ್ತಿಗೆ, ಎದೆ ಮತ್ತು ಮಂಡಿಗಳಿಗೆ ಉತ್ತಮ ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ. ಬಾಡಿಶೆಲ್ ಸ್ಥಿರವಾಗಿ ಕಂಡುಬರುತ್ತದೆ ಮತ್ತು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಪಂಚ್ ಮಕ್ಕಳ ರಕ್ಷಣೆಯಲ್ಲಿ ಗರಿಷ್ಠ 49 ಅಂಕಗಳಲ್ಲಿ 40.89 ಅಂಕಗಳನ್ನು ಗಳಿಸಿದೆ. ಇದು 41.11 ಅಂಕಗಳನ್ನು ಗಳಿಸಿದ ಹೊಸ ಮಹೀಂದ್ರಾ ಥಾರ್‌ಗಿಂತ ಸ್ವಲ್ಪ ಹಿಂದಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಇನ್ನು 3 ವರ್ಷ ಮತ್ತು 1.5 ವರ್ಷ ವಯಸ್ಸಿನ ಮಕ್ಕಳ ಸೀಟುಗಳು ISOFIX ಕನೆಕ್ಟರ್‌ಗಳು ಮತ್ತು ಬೆಂಬಲ ಕಾಲಿನೊಂದಿಗೆ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ. ಸಿಆರ್ಎಸ್ ಪ್ರಭಾವದ ಸಮಯದಲ್ಲಿ ಅತಿಯಾದ ಮುಂದಕ್ಕೆ ಚಲನೆಯನ್ನು ತಡೆಯಲು ಸಾಧ್ಯವಾಯಿತು ಮತ್ತು ಡಮ್ಮಿಗಳ ತಲೆ ಮತ್ತು ಎದೆಗೆ ಉತ್ತಮ ರಕ್ಷಣೆ ನೀಡುತ್ತದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಮಹೀಂದ್ರಾ ಎಕ್ಸ್‌ಯುವಿ300

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯು ವಯಸ್ಕ ಪ್ರಯಾಣಿಕರ ರಕ್ಷಣೆಗೆ 17 ಅಂಕಗಳಲ್ಲಿ 16.42 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 37.44 ಅಂಕಗಳನ್ನು ಗಳಿಸಿದೆ. ಮಹೀಂದ್ರಾ ಎಕ್ಸ್‌ಯುವಿ300 ವಯಸ್ಕ ಪ್ರಯಾಣಿಕರ' ತಲೆ, ಕುತ್ತಿಗೆ ಮತ್ತು ಮೊಣಕಾಲಿನ ರಕ್ಷಣೆಯನ್ನು ಉತ್ತಮವಾಗಿ ಒದಗಿಸಿದೆ ಎಂದು ಪರೀಕ್ಷಾ ಫಲಿತಾಂಶಗಳು ತೋರಿಸುತ್ತವೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಮುಂಭಾಗದ ಪ್ರಯಾಣಿಕರಿಗೆ ಎದೆಯ ರಕ್ಷಣೆ 'ಉತ್ತಮ' ಎಂದು ರೇಟ್ ಮಾಡಿದ್ದರೆ, ಚಾಲಕರ ರಕ್ಷಣೆ 'ಸಮರ್ಪಕ'. ಎಸ್‌ಯುವಿಯ ರಚನೆ ಮತ್ತು ಫುಟ್‌ವೆಲ್ ಪ್ರದೇಶವೂ ಸ್ಥಿರವಾಗಿದೆ. ಎಸ್‌ಯುವಿ 3 ವರ್ಷ ವಯಸ್ಸಿನ (ಮುಂದಕ್ಕೆ) ಮತ್ತು 1.5 ವರ್ಷದ ಮಕ್ಕಳ ಡಮ್ಮಿ (ಹಿಂಭಾಗಕ್ಕೆ ಎದುರಾಗಿರುವ) ಡಮ್ಮಿಗಳಿಗೆ ಕ್ರಮವಾಗಿ 'ಫೇರ್' ಮತ್ತು 'ಉತ್ತಮ' ರಕ್ಷಣೆಯನ್ನು ನೀಡಿತು.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಟಾಟಾ ಆಲ್‌‌ಟ್ರೊಜ್

ಜಾಗತಿಕ NCAP ಕ್ರ್ಯಾಶ್‌ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿರುವ ಹೊಸ ಟಾಟಾ ಆಲ್‌‌ಟ್ರೊಜ್ ಭಾರತದಲ್ಲಿ ಸುರಕ್ಷಿತವಾದ ಹ್ಯಾಚ್ ಬ್ಯಾಕ್ ಆಗಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಆಲ್ಟ್ರೋಜ್ 17 ರಲ್ಲಿ 16.13 ಅಂಕಗಳನ್ನು ಪಡೆದುಕೊಂಡಿದೆ. ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 29 ಅಂಕಗಳೊಂದಿಗೆ 3 ಸ್ಟಾರ್ ಗಳನ್ನು ಪಡೆದುಕೊಂಡಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಹ್ಯಾಚ್ ಬ್ಯಾಕ್ ಚಾಲಕ ಮತ್ತು ಪ್ರಯಾಣಿಕರ ತಲೆ, ಕುತ್ತಿಗೆ ಮತ್ತು ಮೊಣಕಾಲುಗಳಿಗೆ ಉತ್ತಮ ರಕ್ಷಣೆ ನೀಡುತ್ತದೆ ಮತ್ತು ಘರ್ಷಣೆಯ ಸಮಯದಲ್ಲಿ ಎದೆಗೆ ಸಾಕಷ್ಟು ರಕ್ಷಣೆ ನೀಡುತ್ತದೆ. ಟಾಟಾ ಆಲ್‌‌ಟ್ರೊಜ್ ಬಾಡಿಶೆಲ್ ಅನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಇದು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು. ಫುಟ್ ವೆಲ್ ಪ್ರದೇಶವನ್ನು ಸ್ಥಿರ ಎಂದು ರೇಟ್ ಮಾಡಲಾಗಿದೆ. 1.5 ವರ್ಷದ ಮಗುವಿನ ಡಮ್ಮಿಗೆ ರಕ್ಷಣೆ ಉತ್ತಮವಾಗಿದ್ದರೂ, ಅಪಘಾತದ ಸಮಯದಲ್ಲಿ 3 ವರ್ಷದ ಮಗುವಿನ ಡಮ್ಮಿಗೆ ಚೈಲ್ಡ್ ಸೀಟಿನ ಹಿಂಬದಿ ಹಿಡಿಸಲಾಗಿಲ್ಲ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಟಾಟಾ ನೆಕ್ಸಾನ್

ಜಾಗತಿಕ ಎನ್‌ಸಿಎಪಿಯಲ್ಲಿ 5 ಸ್ಟಾರ್‌ಗಳ ಕ್ರ್ಯಾಶ್‌ ಟೆಸ್ಟ್‌ 5 ರೇಟಿಂಗ್‌ ಗಳಿಸಿದ ಭಾರತದ ಮೊದಲ ಮೇಡ್‌ ಇನ್ ಕಾರು ಟಾಟಾ ನೆಕ್ಸಾನ್ ಆಗಿದೆ, ವಯಸ್ಕರ ರಕ್ಷಣೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ 17 ಪಾಯಿಂಟ್‌ಗಳಲ್ಲಿ 16 ಅಂಕಗಳನ್ನು ಗಳಿಸಿದೆ ಮತ್ತು 49 ರಲ್ಲಿ 25 ಪಾಯಿಂಟ್‌ಗಳನ್ನು ಸಾಧಿಸುವ ಮೂಲಕ ಮಕ್ಕಳ ರಕ್ಷಣೆಗಾಗಿ 3 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ನೆಕ್ಸಾನ್‌ನ ಬಾಡಿಶೆಲ್ ಅನ್ನು ಸ್ಥಿರವಾಗಿ ರೇಟ್ ಮಾಡಲಾಗಿದೆ ಮತ್ತು ಇದು ಮತ್ತಷ್ಟು ಲೋಡಿಂಗ್‌ಗಳನ್ನು ತಡೆದುಕೊಳ್ಳಬಲ್ಲದು. ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಎದೆಗೆ ನೀಡಿದ ರಕ್ಷಣೆ ಸಮರ್ಪಕವಾಗಿತ್ತು. ಟಾಟಾ ನೆಕ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ.

ಗರಿಷ್ಠ ಸುರಕ್ಷತೆ ಹೊಂದಿರುವ ಮೇಡ್ ಇನ್ ಇಂಡಿಯಾ ಕಾರುಗಳಿವು

ಮಹೀಂದ್ರಾ ಮರಾಜೋ

ಈ ಮಹೀಂದ್ರಾ ಮರಾಜೋ 7 ಆಸನಗಳ ಪ್ರೀಮಿಯಂ ಎಂಪಿವಿ ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 4 ಸ್ಟಾರ್ ರೇಟಿಂಗ್‌ ಮತ್ತು ಮಕ್ಕಳ ರಕ್ಷಣೆಯಲ್ಲಿ 2 ಸ್ಟಾರ್ ರೇಟಿಂಗ್ ಪಡೆದಿದೆ. #SaferCarsForIndia ಅಭಿಯಾನದ ಅಡಿಯಲ್ಲಿ ಟೆಸ್ಟ್ ಮಾಡಿದ ಮರಾಜೋ ವಯಸ್ಕರ ಸುರಕ್ಷತಾ ರೇಟಿಂಗ್‌ಗಳಲ್ಲಿ 17 ರಲ್ಲಿ 12.85 ಅಂಕಗಳನ್ನು ಗಳಿಸಿದೆ. ಮಕ್ಕಳ ಸುರಕ್ಷತೆಯಲ್ಲಿ, 49 ರಲ್ಲಿ 22.22 ಅಂಕಗಳನ್ನು ಗಳಿಸುವ ಮೂಲಕ 2 ಸ್ಟಾರ್ ರೇಟಿಂಗ್ ಪಡೆದಿದೆ,

Most Read Articles

Kannada
English summary
Top safest indian made cars from tata punch to mahindra marazzo details
Story first published: Saturday, October 16, 2021, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X