ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಏಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ನೋಂದಾಯಿಸಲಾಗಿದೆ. ಆಟೋಮೋಟಿವ್ ಇನ್ ಸೈಟ್ ಹಾಗೂ ವಿಶ್ಲೇಷಣಾ ಪೂರೈಕೆದಾರನಾದ ಜಾಟೊ ಡೈನಾಮಿಕ್ಸ್ ಇಂಡಿಯಾ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಈ ಮಾಹಿತಿಯನ್ನು ಸಾರಿಗೆ ಇಲಾಖೆಯ ವಾಹನ್ ಆನ್‌ಲೈನ್ ಪೋರ್ಟಲ್‌ನಿಂದ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ 2020ರ ಏಪ್ರಿಲ್ ತಿಂಗಳಿನಿಂದ 2021ರ ಮೇ ತಿಂಗಳವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 2,82,330 ವಾಹನಗಳು ನೋಂದಣಿಯಾಗಿವೆ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಆದರೆ 2020ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಹೊಸ ವಾಹನಗಳ ನೋಂದಣಿಯಲ್ಲಿ 6%ನಷ್ಟು ಕುಸಿತ ಕಂಡುಬಂದಿದೆ. ಮಹಾರಾಷ್ಟ್ರವು ವರ್ಷದಿಂದ ವರ್ಷಕ್ಕೆ ಮಾರಾಟ ಕುಸಿಯುತ್ತಿರುವ ದೇಶದ ಟಾಪ್ 10 ರಾಜ್ಯಗಳಲ್ಲಿ 9ನೇ ಸ್ಥಾನದಲ್ಲಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಅಚ್ಚರಿಯ ಸಂಗತಿಯೆಂದರೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕದ ವಾಹನ ನೋಂದಣಿಯಲ್ಲಿ ಯಾವುದೇ ಕುಸಿತವಾಗಲಿ ಅಥವಾ ಹೆಚ್ಚಳವಾಗಲಿ ಕಂಡು ಬಂದಿಲ್ಲ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

2020-21ರ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ ಒಟ್ಟು 1,81,143 ವಾಹನಗಳನ್ನು ನೋಂದಣಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 2,59,510 ವಾಹನಗಳು ನೋಂದಣಿಯಾಗಿದ್ದು, ನೋಂದಣಿ ಪ್ರಮಾಣವು 11%ನಷ್ಟು ಕಡಿಮೆಯಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಮೂರನೇ ಸ್ಥಾನದಲ್ಲಿರುವ ಗುಜರಾತ್'ನಲ್ಲಿ ಒಟ್ಟು 2,25,557 ಯುನಿಟ್ ವಾಹನಗಳನ್ನು ನೋಂದಣಿ ಮಾಡಲಾಗಿದೆ. ಗುಜರಾತ್ ರಾಜ್ಯವು ಹೊಸ ವಾಹನ ನೋಂದಣಿಯಲ್ಲಿ 11%ನಷ್ಟು ಕುಸಿತವನ್ನು ದಾಖಲಿಸಿದೆ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಟಾಪ್ 10 ರಾಜ್ಯಗಳಲ್ಲಿ ಕೇರಳ ಭಾರೀ ಪ್ರಮಾಣದ ಕುಸಿತ ದಾಖಲಿಸಿದೆ. ಕೇರಳದಲ್ಲಿ ಹೊಸ ವಾಹನಗಳ ನೋಂದಣಿ ಪ್ರಮಾಣದಲ್ಲಿ 15%ನಷ್ಟು ಇಳಿಕೆ ಕಂಡುಬಂದಿದೆ. ಕೇರಳದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 1,63,186 ಯುನಿಟ್‌ ವಾಹನಗಳನ್ನು ನೋಂದಣಿ ಮಾಡಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ತಮಿಳುನಾಡಿನಲ್ಲಿ ಒಟ್ಟು 1,56,844 ವಾಹನಗಳನ್ನು ನೋಂದಣಿ ಮಾಡಲಾಗಿದೆ. ತಮಿಳುನಾಡಿನಲ್ಲಿ ನೋಂದಣಿ ಪ್ರಮಾಣವು 14%ನಷ್ಟು ಕುಸಿದಿದೆ. ಈ ಅವಧಿಯಲ್ಲಿ ದೆಹಲಿಯಲ್ಲಿ 1,27,936, ರಾಜಸ್ಥಾನದಲ್ಲಿ 1,35,172 ವಾಹನಗಳು ನೋಂದಣಿಯಾಗಿವೆ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಹರಿಯಾಣದಲ್ಲಿ 1,45,646 ವಾಹನಗಳು ನೋಂದಣಿಯಾಗಿವೆ. ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಂಜಾಬ್'ನಲ್ಲಿ ಅತಿ ಕಡಿಮೆ ಸಂಖ್ಯೆಯ ಅಂದರೆ 88,513 ಹೊಸ ವಾಹನಗಳನ್ನು ನೋಂದಣಿ ಮಾಡಲಾಗಿದೆ. ಪಂಜಾಬ್'ನ ನೋಂದಣಿ ಪ್ರಮಾಣವು 14%ನಷ್ಟು ಕುಸಿದಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಕೋವಿಡ್ 19 ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ದೇಶದ ಆಟೋಮೊಬೈಲ್ ಉದ್ಯಮವು 2020ರ ಹಣಕಾಸು ವರ್ಷದಿಂದ ಕುಸಿತವನ್ನು ಎದುರಿಸುತ್ತಿದೆ.

ಲಾಕ್‌ಡೌನ್‌ ನಡುವೆಯೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ ಟಾಪ್ 10 ರಾಜ್ಯಗಳಿವು

ಆಟೋ ಮೊಬೈಲ್ ಉದ್ಯಮವು ಇನ್ನೇನು ಚೇತರಿಸಿಕೊಂಡಿತು ಎನ್ನುವಷ್ಟರಲ್ಲಿ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸವನ್ನು ಮೆರೆಯುತ್ತಿದೆ. ಕರೋನಾ ಸಾಂಕ್ರಾಮಿಕವು ಸಾರಿಗೆ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಇತ್ತೀಚಿನ ವರದಿಗಳ ಪ್ರಕಾರ ಲಾಕ್‌ಡೌನ್‌ನಿಂದಾಗಿ ಸಾರಿಗೆ ಕ್ಷೇತ್ರವು ಪ್ರತಿದಿನ ರೂ.315 ಕೋಟಿಗಳಷ್ಟು ನಷ್ಟ ಅನುಭವಿಸುತ್ತಿದೆ.

Most Read Articles

Kannada
English summary
Top ten Indian states with highest number of new vehicles registration. Read in Kannada.
Story first published: Tuesday, May 18, 2021, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X