ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಪೋರ್ಡ್ ತನ್ನ ಜನಪ್ರಿಯ ಟೆರಿಟೋರಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಈ ಫೋರ್ಡ್ ಟೆರಿಟೋರಿ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ವರದಿಗಳ ಪ್ರಕಾರ, ಈ ವರ್ಷದಲ್ಲೇ ಈ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇನ್ನು ಟೆರಿಟೋರಿ ಆಗಿ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದನ್ನು ಚೆಂಗ್ಡು ಆಟೋ ಪ್ರದರ್ಶನದಲ್ಲಿ, ಚೀನಾ, ಕಾಂಬೋಡಿಯಾ, ಲಾವೋಸ್ ಮತ್ತು ಫಿಲಿಪೈನ್ಸ್‌ನಂತಹ ಕೆಲವು ಏಷ್ಯಾದ ಮಾರುಕಟ್ಟೆಗಳಲ್ಲಿ 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಇದೀಗ ಈ ಏಷ್ಯಾ ಮಾರುಕಟ್ಟೆಗಳಲ್ಲಿ ಟೆರಿಟೊರಿ ಎಸ್‍ಯುವಿಯನ್ನು ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಎಂಜಿನ್

ಮೊದಲಿಗೆ ವಾಹನಗಳ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍ಪಿ ಪವರ್ ಮತ್ತು 225 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಈ ಎಂಜಿನ್ ಗಳೊಂದಿಗೆ ಎರಡು ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಈ ಫೋರ್ಡ್ ಎಸ್‍ಯುವಿಯು 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂನೊಂದಿಗೆ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಆಯಾಮಗಳು

ಫೋರ್ಡ್ ಟೆರಿಟೊರಿ ಎಸ್‍ಯುವಿಯು 4,580 ಮಿ.ಮೀ ಉದ್ದ, 1,936 ಮಿ.ಮೀ ಅಗಲ ಮತ್ತು 1,674 ಮಿ.ಮೀ ಎತ್ತರವನ್ನು ಹೊಂದಿದೆ, ಇನ್ನು ಈ ಎಸ್‍ಯುವಿಯು 2,716 ಮಿ.ಮೀ ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಇದರಿಂದ ಒಳಭಾಗದಲ್ಲಿ ಸಾಕಷ್ಟು ಸ್ಪೇಸ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ವಿನ್ಯಾಸ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋರ್ಡ್ ಟೆರಿಟೋರಿ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ತೀಕ್ಷ್ಣವಾಗಿ ಕಾಣುವ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅಗಲವಾದ ಮುಂಭಾಗದ ಗ್ರಿಲ್, ವಿಶಾಲವಾದ ಏರ್‌ಡ್ಯಾಮ್ ಮತ್ತು ಮುಂಭಾಗದಲ್ಲಿ ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಇನ್ನು ಈ ಎಸ್‍ಯುವಿಯಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಮುಂಭಾಗ ಮತ್ತು ಹಿಂಭಾಗ ಬಂಪರ್‌ಗಳಲ್ಲಿ ಸ್ಕಿಡ್ ಪ್ಲೇಟ್‌ಗಳು, ರೂಪ್ ರೈಲ್ ಮತ್ತು ರೂಫ್-ಮೌಂಟಡ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ. ಹಿಂಭಾಗದ ಬಂಪರ್ ದೊಡ್ಡ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಈ ಎಸ್‍ಯುವಿಗೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಫೀಚರ್‌ಗಳು

ಇನ್ನು ಎಸ್‍ಯುವಿ ಒಳಭಾಗದಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ 10 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಇನ್ನು ಇದರಲ್ಲಿ ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್, ಎಲೆಕ್ಟ್ರಿಕ್ ಅಡಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೈರ್ಲೆಸ್ ಫೋನ್ ಚಾರ್ಜರ್ ಫೀಚರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಆಂಬಿಯೆಂಟ್ ಲೈಟಿಂಗ್, 8 ಸ್ಪೀಕರ್‌ಗಳು, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್ ನೊಂದಿಗೆ ಕೀ ಲೆಸ್ ಎಂಟ್ರಿ, ಲೆದರ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದ್ದು, ಇದು ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಯಿಂದ ಕೂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಸುರಕ್ಷತಾ ಫೀಚರ್‌ಗಳು

ಫೋರ್ಡ್ ಟೆರಿಟೋರಿ ಎಸ್‍ಯುವಿಯಲ್ಲಿ ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಎಕ್ಸಿಸ್ಟ್ ಎಚ್ಚರಿಕೆ, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಅಸಿಸ್ಟ್, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಇದರೊಂದಿಗೆ ಹಿಲ್ ಲಾಂಚ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಜೊತೆ ಇಂಡಿವಿಜುವಲ್ ಟೈರ್ ಪ್ರೆಶರ್ ಡಿಸ್ ಪ್ಲೇ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಐಸೊಫಿಕ್ಸ್ ಚೈಲ್ಡ್-ಸೀಟ್ ಆಂಕಾರೇಜ್ ಪಾಯಿಂಟ್‌ಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಫೋರ್ಡ್ ಟೆರಿಟೋರಿ ಎಸ್‍ಯುವಿಯ ವಿಶೇಷತೆಗಳು

ಪ್ರತಿಸ್ಪರ್ಧಿಗಳು

ಫೋರ್ಡ್ ಟೆರಿಟೋರಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್ ಮತ್ತು ಈ ವಿಭಾಗದ ಇತರ ಎಸ್‍ಯುವಿಗಳಿಗೆ ಪೈಪೋಟೀ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Top Things To Know About India-Bound Ford Territory. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X