ಪವರ್‌ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ಕಾರಿನ ವಿಡಿಯೋ

ಟೊಯೊಟಾ ಫಾರ್ಚೂನರ್ ಎಸ್‍ಯುವಿ ಮಾದರಿಯು ಮಾರುಕಟ್ಟೆ ಪ್ರವೇಶಿಸಿ ಬರೋಬ್ಬರಿ ಒಂದು ದಶಕ ಕಳೆದರೂ ದೇಶಿಯ ಮಾರುಕಟ್ಟೆಯಲ್ಲಿ ಇನ್ನು ಉತ್ತಮ ಮಾರುಕಟ್ಟೆ ಹೊಂದಿದ್ದು, ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ.

ಫಾರ್ಚೂನರ್ ಎಸ್‍ಯುವಿಯನ್ನು ಟೊಯೊಟಾ ಕಂಪನಿಯು ಇತ್ತೀಚೆಗೆ ಹೊಸ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಫಾರ್ಚೂನರ್ ರೇಂಜ್-ಟಾಪಿಂಗ್ ಫೇಸ್‌ಲಿಫ್ಟ್ ಲೆಜೆಂಡರ್ ಮಾದರಿಯು ಪ್ರಮುಖ ಆಕರ್ಷಣೆಯಾಗಿದೆ.

ವಿಶೇಷ ವಿನ್ಯಾಸ ಹೊಂದಿರುವ ಫಾರ್ಚನೂರ್ ಲೆಜೆಂಡರ್ ಆವೃತ್ತಿಯು ಸ್ಟ್ಯಾಂಡರ್ಡ್ ಫಾರ್ಚೂನರ್‌ ಎಸ್‍ಯುವಿಗಿಂತಲೂ ಹೆಚ್ಚಿನ ಮಟ್ಟದ ಸ್ಪೋರ್ಟಿಯರ್ ಮಾದರಿಯಾಗಿದ್ದು, ಹೊಸ ಫಸ್ಟ್ ಡ್ರೈವ್‌ಗಾಗಿ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನಿಸಿತ್ತು.

ಹೊಸ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯನ್ನು ನಾವು ಒಂದೆರಡು ದಿನಗಳ ಕಾಲ ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್‍ಯುವಿಯ ವಿನ್ಯಾಸ, ಪರ್ಫಾಮೆನ್ಸ್, ಎಂಜಿನ್ ಹಾಗೂ ಡ್ರೈವ್ ಬಗೆಗಿನ ಅನುಭವವನ್ನು ಮೇಲಿನ ವೀಡಿಯೊದಲ್ಲಿ ಹಂತ-ಹಂತವಾಗಿ ಚರ್ಚಿಸಲಾಗಿದೆ.

ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯಲ್ಲಿ ಟೊಯೊಟಾ ಕಂಪನಿಯು 2.8-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಈ ಎಂಜಿನ್ 3 ಸಾವಿರದಿಂದ 3,400 ಆರ್‌ಪಿಎಂ ನಡುವೆ 201- ಬಿಹೆಚ್‌ಪಿ ಹಾಗೂ 1,600 ರಿಂದ 2,800 ಆರ್‌ಪಿಎಂ ನಡುವೆ 500-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ ಹೊಂದಿರುವ ಹೊಸ ಕಾರು ಬೆಂಗಳೂರಿನಲ್ಲಿ ಆನ್-ರೋಡ್ ಪ್ರಕಾರು ರೂ.47.90 ಲಕ್ಷಗಳಾಗಿದ್ದು, ಹೊಸ ಕಾರು ಎಂಜಿ ಗ್ಲೊಸ್ಟರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಉತ್ತಮ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota Fortuner Legender Road Test Review Video. Read in Kannada.
Story first published: Monday, April 19, 2021, 21:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X