ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಟೊಯೊಟಾ ಕಂಪನಿಯ ಫಾರ್ಚೂನರ್ ಎಸ್‍ಯುವಿಯು ಒಂದು ದಶಕಕ್ಕೂ ಹೆಚ್ಚು ಕಾಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಫಾರ್ಚೂನರ್ ಎಸ್‍ಯುವಿಗೆ ಸರಿಸಾಟಿ ಫಾರ್ಚೂನರ್ ಮಾತ್ರ ಎಂಬಂತೆ ಇಂದಿಗೂ ಉತ್ತಮ ಬೇಡಿಕೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಅಲ್ಲದೇ ಪೂರ್ಣ ಗಾತ್ರದ ಎಸ್‍ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿ ಇದಾಗಿದೆ. ಫಾರ್ಚೂನರ್ ಕಡಿಮೆ ವೆಚ್ಚದ ನಿರ್ವಹಣೆ ಮತ್ತು ವಿಶ್ವಾಸಾರ್ಹತೆ ಹೆಚ್ಚು ಹೆಸರುವಾಸಿಯಾಗಿದೆ. ಆದರೆ ಸವಾರಿ ಮಾಡುವಾಗ ಉತ್ತಮ ಕಂಫರ್ಟ್ ಅನ್ನು ನೀಡುವುದಿಲ್ಲ. ಯಾಕೆಂದರೆ ಇದು ಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಇದು ಎಲ್ಲಾ ಆಫ್-ರೋಡ್ ಎಸ್‍ಯುವಿಗಳಲ್ಲಿ ಈ ರೀತಿ ಸಮಸ್ಯೆ ಇರುತ್ತದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಫಾರ್ಚೂನರ್ ಮಾಲೀಕರು ಎಸ್‍ಯುವಿಯಲ್ಲಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಸವಾರಿ ಗುಣಮಟ್ಟವಾಗಿದೆ. ಆದರೆ ಉತ್ತಮ ಕಂಫರ್ಟ್ ಆಗಿ ಪ್ರಯಾಣ ಮಾಡಲು ಅಡಾಪ್ಟಿವ್ ಸಸ್ಪೆಂಕ್ಷನ್ ಸೆಟಪ್ ನೊಂದಿಗೆ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

2021ರ ಫಾರ್ಚೂನರ್ ಎಸ್‍ಯುವಿಯನ್ನು ಮಾಡಿಫೈಗೊಳಿಸಿರುವ ವಿಡಿಯೋವನ್ನು ಒನ್ ಡ್ರೈವ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಅವರು ಶೋ ರೂಂಗೆ ಭೇಟಿ ನೀಡಿದಾಗ, ಅವರು ತಮ್ಮ ಫಾರ್ಚೂನರ್‌ನ ಸವಾರಿ ಸೌಕರ್ಯ ಅಥವಾ ಗುಣಮಟ್ಟವನ್ನು ಸುಧಾರಿಸಬಲ್ಲ ಒಂದು ಸಸ್ಪೆಂಕ್ಷನ್ ಸೆಟಪ್ ಅನ್ನು ನೋಡಿದರು.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇದು ಟೀನ್‌ನಿಂದ ಹೊಂದಾಣಿಕೆಯ ಸಸ್ಪೆಂಕ್ಷನ್ ಸೆಟಪ್ ಆಗಿದೆ. ಇದು ಟೀನ್ ಎಲೆಕ್ಟ್ರಾನಿಕ್ ಡ್ಯಾಂಪಿಂಗ್ ಫೋರ್ಕ್ ಕಂಟ್ರೋಲರ್ ಆಕ್ಟಿವ್ ಸೆಟಪ್ ಆಗಿದೆ. ಈ ಹೊಸ ಸೆಟಪ್ ಅನ್ನು ಅಳವಡಿಸುವ ಸಲುವಾಗಿ ಹಳೆಯ ಸಸ್ಪೆಂಕ್ಷನ್ ಮತ್ತು ಕೂಲ್ಸ್ ಅನ್ನು ತೆಗೆದುಹಾಕಿ ಮತ್ತು ದಪ್ಪವಾದ ಕಾಯಿಲ್ ಮತ್ತು ಟೀನ್‌ನಿಂದ ಸಸ್ಪೆಂಕ್ಷನ್ ಅನ್ನು ಸೆಟಪ್ ಮಾಡಿದ್ದಾರೆ. ಈ ಸಸ್ಪೆಂಕ್ಷನ್ ಸ್ಟಾಕ್ ಯುನಿಟ್ ಗಿಂತ ಭಿನ್ನವಾಗಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಹೊಸ ಸಸ್ಪೆಂಕ್ಷನ್ ಸೆಟಪ್ ಫಾರ್ಚೂನರ್‌ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಿದೆ. ಇನ್ನು ಕ್ಯಾಬಿನ್ ಒಳಗೆ ಇರಿಸಲಾಗಿರುವ ಕಂಟ್ರೋಲರ್ ಗಳಿಂದ ಸಸ್ಪೆಂಕ್ಷನ್ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ.ಇನ್ನು ಈ ಫಾರ್ಚೂನರ್ ಎಸ್‍ಯುವಿ ಅಗ್ರೇಸಿವ್ ಲುಕ್ ನಲ್ಲಿ ಕಾಣಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಟೊಯೊಟಾ ತನ್ನ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಟೊಯೋಟಾ ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇದರೊಂದಿಗೆ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಅನ್ನು ಹೊಂದಿದೆ. ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ.

ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಅಳವಡಿಸಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಹೊಂದಿದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಫೀಚರ್ ಗಳಲ್ಲಿ ಹಿಂದೆ ಇತ್ತು, ಆದರೆ ಹೊಸ ಅಪ್ದೇಟ್ ಗಳನ್ನು ಪಡೆದು ಈ ಅಪವಾದಗಳಿಗೆ ಉತ್ತರ ನೀಡಿದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಫಾರ್ಚೂನರ್ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಟೂ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳಲ್ಲಿ ಹೊಂದಿರುತ್ತದೆ. ಹಿಂದಿನ ಫಾರ್ಚೂನರ್ ಮಾದರಿಗೆ ಹೋಲಿಸಿದರೆ ಫಾರ್ಚೂನರ್ ಫೇಸ್‌ಲಿಫ್ಟ್ ಹಲವು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

Image Courtesy: ONE DRIVE

Most Read Articles

Kannada
English summary
2021 Toyota Fortuner Modified With Adaptive Suspension. Read In Kannada.
Story first published: Monday, April 19, 2021, 21:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X