ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

Hiace, Toyota ಕಂಪನಿಯ ಜನಪ್ರಿಯ ಎಂಪಿವಿ ಕಾರುಗಳಲ್ಲಿ ಒಂದಾಗಿದೆ. Toyota ಕಂಪನಿಯು ಭಾರತದಲ್ಲಿ ಈ ವಾಹನವನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಿದೆ. ಈ ಕಾರಣದಿಂದಾಗಿಯೇ ಈ ವಾಹನವು ಭಾರತದ ರಸ್ತೆಗಳಲ್ಲಿ ಕಾಣುವುದು ತೀರಾ ಅಪರೂಪ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಇದನ್ನು ಖರೀದಿಸಿದವರೊಬ್ಬರು ಈ ವಾಹನವನ್ನು ಇನ್ನಷ್ಟು ವಿಶೇಷವಾಗಿಸಿದ್ದಾರೆ. ಅವರು ಈ ವಾಹನವನ್ನು ದೀರ್ಘ ಪ್ರಯಾಣಕ್ಕಾಗಿ ಒಂದು ಸಣ್ಣ ಮನೆಯಂತೆ ಮಾಡಿಫೈ ಮಾಡಿದ್ದಾರೆ. ಈ ಲೇಖನದಲ್ಲಿ Toyota Hiace ವಾಹನವು ಯಾವ ರೀತಿಯಲ್ಲಿ ವಿಶೇಷವಾಗಿ ಮಾಡಿಫೈಗೊಂಡಿದೆ ಎಂಬುದನ್ನು ನೋಡೋಣ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

Toyota Hiace ಎಂಪಿವಿ ಮಾದರಿಯ ವಾಹನವಾಗಿದ್ದು, ಒಳಗೆ ಸಾಕಷ್ಟು ಸ್ಥಳವನ್ನು ಹೊಂದಿದೆ. ಅನೇಕ Hiace ಬಳಕೆದಾರರು ಈ ವಾಹನವನ್ನು ತಮ್ಮ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಮಾಡಿಫೈ ಮಾಡುತ್ತಿದ್ದಾರೆ. ಈ ವಾಹನವು ಹೆಚ್ಚು ಜಾಗವನ್ನು ಹೊಂದಿರುವುದೇ ಇದಕ್ಕೆ ಕಾರಣ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಅದರಂತೆಯೇ ಕೇರಳದ Toyota Hiace ಬಳಕೆದಾರರೊಬ್ಬರು ತಮ್ಮ ಎಂಪಿವಿಯನ್ನು ಸಣ್ಣ ಮನೆಯನ್ನಾಗಿ ಪರಿವರ್ತಿಸಿದ್ದಾರೆ. Toyota Hiace ವಾಹನವನ್ನು ಮೋಟಾರ್ ಹೋಮ್ ನಂತೆ ಮಾಡಿಫೈ ಮಾಡಲಾಗಿದೆ. ಇದರಿಂದ Toyota Hiace ಎಂಪಿವಿಯು ಮನೆಯ ಎಲ್ಲಾ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಈ ಕಾರಣಕ್ಕೆ ಈ Toyota Hiace ಎಂಪಿವಿಯನ್ನು ನೋಡಿದವರು ಚಿಕ್ಕ ಮನೆ ಎಂದು ಕರೆಯುತ್ತಿದ್ದಾರೆ. ಈ ವಾಹನವು ಅಡುಗೆ ಮನೆ, ಶೌಚಾಲಯ ಹಾಗೂ ಆರಾಮದಾಯಕ ಆಸನ ಸೌಲಭ್ಯಗಳಂತಹ ವಿವಿಧ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಇದರ ಜೊತೆಗೆ ಈ Toyota Hiace ಹಲವು ಅದ್ಭುತ ಫೀಚರ್ ಗಳನ್ನು ಸಹ ಹೊಂದಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

Toyota Hiace ಇಂಟಿರಿಯರ್:

Toyota Hiace ವಾಹನದ ಒಳಗೆ ಒಟ್ಟು 7 ಜನರು ಕೂರ ಬಹುದು. ಮೊದಲ ಎರಡು ಸೀಟುಗಳನ್ನು ಎಲೆಕ್ಟ್ರಾನಿಕ್ ಬಟನ್ ಗಳಿಂದ ಅಡ್ಜಸ್ಟ್ ಮಾಡಬಹುದು.ಇವೆರಡೂ ಕ್ಯಾಪ್ಟನ್ ಮಾದರಿಯ ಸೀಟುಗಳು ಎಂಬುದು ವಿಶೇಷ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

Toyota Hiace ಎಂಪಿವಿಯು ಆಂಬಿಯೆಂಟ್ ಲೈಟ್, ಪ್ರೀಮಿಯಂ ಗುಣ ಮಟ್ಟದ ಸ್ಪೀಕರ್‌, ಎಲ್‌ಇಡಿ ಟಿವಿ ಹಾಗೂ ಸಣ್ಣ ರೆಫ್ರಿಜರೇಟರ್ ಸೇರಿದಂತೆ ಹಲವು ವಿಶೇಷ ಫೀಚರ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ Hiace ವಾಹನವು ಅಡುಗೆ ಮನೆಯ ಪಾತ್ರೆ ಹಾಗೂ ಗ್ಯಾಸ್ ಶೇಖರಣಾ ಜಾಗವನ್ನು ಸಹ ಹೊಂದಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಈ Hiace ವಾಹನದ ಕ್ಯಾಬಿನ್ ಅನ್ನು ಚಾಲಕನ ಪ್ರದೇಶದಿಂದ ಪ್ರತ್ಯೇಕವಾಗಿ ಮಾರ್ಪಡಿಸಲಾಗಿದೆ. ಅಂದರೆ, ಚಾಲಕನ ಕೋಣೆ ಹಾಗೂ ಪ್ರಯಾಣಿಕರ ಕೊಠಡಿ ಎರಡಕ್ಕೂ ಕೊಠಡಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಜೊತೆಗೆ ಚಾಲಕನ ಕ್ಯಾಬಿನ್ ಅನ್ನು ಇನ್ನೂ ಮೂರು ಜನರು ಕುಳಿತು ಕೊಳ್ಳುವ ರೀತಿಯಲ್ಲಿ ರಿ ಡಿಸೈನ್ ಮಾಡಲಾಗಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಇದರಿಂದ ಅಗತ್ಯವಾದರೆ ಇನ್ನೂ ಇಬ್ಬರು ಮುಂಭಾಗದ ಭಾಗದಲ್ಲಿ ಚಾಲಕರೊಂದಿಗೆ ಪ್ರಯಾಣಿಸಬಹುದು. Toyota Hiace ಎಂಪಿವಿಯ ಒಳಭಾಗವನ್ನು ಪ್ರೀಮಿಯಂ ಗುಣಮಟ್ಟದ ನೋಟವಾಗಿ ಪರಿವರ್ತಿಸಲು ವುಡ್ ಪ್ಯಾನಲ್‌ಗಳನ್ನು ಬಳಸಲಾಗಿದೆ. ಈ ಬದಲಾವಣೆಯಿಂದಾಗಿ Hiace ಎಂಪಿವಿ ದುಬಾರಿ ವಾಹನದಂತೆ ಕಾಣುತ್ತದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಇದರ ಜೊತೆಗೆ ಇಂಟಿರಿಯರ್ ಪ್ರೀಮಿಯಂ ಅನ್ನು ಮತ್ತಷ್ಟು ಹೆಚ್ಚಿಸಲು Toyota Hiace ಎಂಪಿವಿಯ ಹೊರಭಾಗದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಕಾನ್ ಫ್ಲಿಕ್ಟ್ ಎಸ್ಕೇಪ್ ಕ್ವಾರ್ಟ್‌, ಹೊಸ ಎಲ್‌ಇಡಿ ಮುಂಭಾಗದ ಹೆಡ್‌ಲೈಟ್‌, ಆಫ್ಟರ್ ಮಾರ್ಕೆಟ್ ಎಲ್‌ಇಡಿ ಟೇಲ್ ಲೈಟ್‌, ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳನ್ನು ಬದಲಾಯಿಸಲಾಗಿದೆ.

ಈ ಒಟ್ಟಾರೆ ಬದಲಾವಣೆಗಳ ಮೂಲಕ Toyota Hiace ಕುಟುಂಬ ಸ್ನೇಹಿ ವಾಹನವಾಗಿ ಮಾರ್ಪಟ್ಟಿದೆ. ಸ್ಪಷ್ಟವಾಗಿ ಹೇಳ ಬೇಕೆಂದರೆ Toyota Hiace ವಾಹನವು ಮೇಲೆ ಹೇಳಿದಂತೆ ಮೋಟಾರ್ ಹೋಮ್ ಆಗಿ ಮಾರ್ಪಟ್ಟಿದೆ. ಈ ವಾಹನವನ್ನು ಒಜೆಎಸ್ ಆಟೋಮೊಬೈಲ್ಸ್ ಮಾಡಿಫೈ ಮಾಡಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ಮಾಡಿಫೈಗೊಂಡಿರುವ ಈ Toyota Hiace 2016 ರ ಮಾದರಿಯಾಗಿದೆ. ಆಧುನಿಕ ವಿನ್ಯಾಸದ ಫೀಚರ್ ಗಳೊಂದಿಗೆ ಈ ವಾಹನವನ್ನು ಭಾರತದಲ್ಲಿ ಮರು ಬಿಡುಗಡೆ ಮಾಡಲು Toyota ಕಂಪನಿಯು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಸದ್ಯಕ್ಕೆ Toyota Innova Crysta ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವಕಂಪನಿಯ ಎಂಪಿವಿ ಆಗಿದೆ.

ಮೋಟಾರ್ ಹೋಂನಂತೆ ಮಾಡಿಫೈಗೊಂಡ Toyota Hiace ಎಂಪಿವಿ

ವಿದೇಶಗಳಲ್ಲಿ ವಾಹನಗಳನ್ನು ಮೋಟಾರ್ ಹೋಂಗಳ ರೀತಿಯಲ್ಲಿ ಮಾಡಿಫೈ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಭಾರತದಲ್ಲಿ ಮೋಟಾರ್ ಹೋಂಗಳ ರೀತಿ ವಾಹನಗಳನ್ನು ಮಾಡಿಫೈ ಮಾಡುವುದು ತೀರಾ ವಿರಳವೆಂದೇ ಹೇಳಬಹುದು. ಆದರೂ ಕೆಲವು ವಾಹನ ಉತ್ಸಾಹಿಗಳು ತಮ್ಮ ವಾಹನಗಳನ್ನು ಮೋಟಾರ್ ಹೋಂಗಳ ರೀತಿ ಮಾಡಿಫೈ ಮಾಡಿಸುತ್ತಾರೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ವಾಹನಗಳನ್ನು ಮಾಡಿಫೈ ಮಾಡುವುದನ್ನು ಭಾರತದಲ್ಲಿ ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಮಾಡಿಫೈ ಗೊಂಡ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾಣಿಸಿಕೊಂಡರೆ ಸಂಬಂಧ ಪಟ್ಟ ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಹ ವಾಹನಗಳನ್ನು ವಶಕ್ಕೆ ಪಡೆಯುತ್ತಾರೆ. ಕೆಲವೊಮ್ಮೆ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಾರೆ. ಭಾರತದಲ್ಲಿ ಕೇರಳ ರಾಜ್ಯದಲ್ಲಿ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಫೈ ಮಾಡಲಾಗುತ್ತದೆ. ಈ ಕಾರಣಕ್ಕೆ ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಆಗಾಗ ಮಾಡಿಫೈ ಗೊಂಡ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಇರುತ್ತಾರೆ.

ಚಿತ್ರ ಕೃಪೆ: ರಿವೊಕಿಡ್ ವ್ಲಾಗ್ಸ್

Most Read Articles

Kannada
English summary
Toyota hiace mpv modified like a motor home details
Story first published: Sunday, August 22, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X