ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಟೊಯೊಟಾ ಕಂಪನಿಯು ಹೈಬ್ರಿಡ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಕಂಪನಿಯು ಹೈಬ್ರಿಡ್ ಕಾರುಗಳಿಗಾಗಿ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಸೆಲ್ಪ್-ರೀಚಾರ್ಜ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್‌(ಎಸ್‌ಹೆಚ್‌ಇವಿ)ಗಳ ಬ್ಯಾಟರಿ ಮೇಲೆ ಟೊಯೊಟಾ ಕಂಪನಿಯು ಸದ್ಯ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದ್ದು, ಅಗಸ್ಟ್ 1ರಿಂದ ಹೈಬ್ರಿಡ್ ಕಾರುಗಳ ಬ್ಯಾಟರಿ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ತನಕ ವಾರಂಟಿ ನೀಡಲು ನಿರ್ಧರಿಸಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಹೊಸ ವಾಹನ ಖರೀದಿದಾರರಿಗೆ ಮಾತ್ರವಲ್ಲದೇ ವಿಸ್ತರಿತ ವಾರಂಟಿ ಆಫರ್ ಅನ್ನು ಟೊಯೊಟಾ ಕಂಪನಿಯು ಜನವರಿ 2019ರ ನಂತರ ಖರೀದಿ ಮಾಡಿರುವ ಗ್ರಾಹಕರಿಗೂ ವಿಶೇಷ ದರದಲ್ಲಿ ವಾರಂಟಿ ವಿಸ್ತರಣೆಗೆ ಅವಕಾಶ ನೀಡಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ದೇಶಾದ್ಯಂತ ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೈಬ್ರಿಡ್ ವಾಹನಗಳನ್ನು ಉತ್ತೇಜಿಸಲು ವಿಸ್ತರಿತ ವಾರಂಟಿ ಘೋಷಣೆ ಮಾಡಿದ್ದು, ಹೈಬ್ರಿಡ್ ತಂತ್ರಜ್ಞಾನದ ಮೇಲೆ ಗರಿಷ್ಠ ಖಾತ್ರಿ ನೀಡುತ್ತಿರುವುದು ಕಾರು ಮಾಲೀಕತ್ವ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಟೊಯೊಟಾ ಕಂಪನಿಯು ಸದ್ಯ ತನ್ನ ಪ್ರಮುಖ ಕಾರು ಮಾದರಿಗಳಾದ ಕ್ಯಾಮ್ರಿ ಪ್ರೀಮಿಯಂ ಸೆಡಾನ್ ಮತ್ತು ವೆಲ್‌ಫೈರ್ ಲಗ್ಷುರಿ ಎಂಪಿವಿ ಮಾದರಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಭಾರತದಲ್ಲಿ ಅತಿ ಹೆಚ್ಚು ಹೈಬ್ರಿಡ್ ಕಾರು ಮಾರಾಟ ಮಾಡಿದ ಜನಪ್ರಿಯತೆ ಟೊಯೊಟಾ ಕಂಪನಿಗೆ ಸಲ್ಲುತ್ತದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಭಾರತದಲ್ಲಿ ಮೊದಲ ಬಾರಿಗೆ ಪ್ರಿಯಸ್ ಮತ್ತು ಕ್ಯಾಮ್ರಿ ಮೂಲಕ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಿದ ಟೊಯೊಟಾ ಕಂಪನಿಯು ಇದೀಗ ವೆಲ್‌ಫೈರ್ ಮಾದರಿಯಲ್ಲೂ ಹೈಬ್ರಿಡ್ ಎಂಜಿನ್ ಮಾಡುತ್ತಿದ್ದು, ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕ್ಯಾಮ್ರಿ ಮತ್ತು ವೆಲ್‌ಫೈರ್ ಕಾರುಗಳು ಮಾತ್ರ ಖರೀದಿಗೆ ಲಭ್ಯವಿವೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಟೊಯೊಟಾ ಕಂಪನಿಯು ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳಿಗಾಗಿ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್(ಹೆಚ್‌ಇವಿ), ಪ್ಲಗ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್(ಪಿಹೆಚ್ಇವಿ), ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್(ಬಿಇವಿ), ಸೆಲ್ಪ್-ರೀಚಾರ್ಜ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್‌(ಎಸ್‌ಹೆಚ್‌ಇವಿ) ಮತ್ತು ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಮಾರಾಟ ಮಾಡುತ್ತಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಭಾರತದಲ್ಲಿ ಸದ್ಯಕ್ಕೆ ಸೆಲ್ಪ್-ರೀಚಾರ್ಜ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್‌(ಎಸ್‌ಹೆಚ್‌ಇವಿ) ಕಾರು ಮಾದರಿಗಳನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದ್ದು, ಹೈಬ್ರಿಡ್ ಕಾರುಗಳಿಂದ ಶೇ.35ರಿಂದ ಶೇ.50ರಷ್ಟು ಹೆಚ್ಚುವರಿ ಇಂಧನ ದಕ್ಷತೆ ಪಡೆದುಕೊಳ್ಳಬಹುದಾಗಿದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ವೆಲ್‌ಫೈರ್ ಎಂಪಿವಿ ಕಾರಿನಲ್ಲಿರುವ 2.5-ಲೀಟರ್ ಪೆಟ್ರೋಲ್ ಮಾದರಿಯು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪ್ರತಿ ಲೀಟರ್‌ಗೆ 16.35 ಕಿ.ಮೀ ಮೈಲೇಜ್ ಹೊಂದಿದ್ದು, ಬೃಹತ್ ಕಾರು ಮಾದರಿಯು ಉತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಅತ್ಯಧಿಕ ಮೈಲೇಜ್ ಹಿಂದಿರುತ್ತದೆ.

ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ

ಇನ್ನು ಕ್ಯಾಮ್ರಿ ಕಾರು ಮಾದರಿಯು ಸಹ 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರತಿ ಲೀಟರ್‌ಗೆ 19 ಕಿ.ಮೀ ಮೈಲೇಜ್ ಹೊಂದಿದ್ದು, ಇದು ಸಾಮಾನ್ಯ ಪೆಟ್ರೋಲ್ ಸೆಡಾನ್ ಕಾರಿನ ಮೈಲೇಜ್ ಪ್ರಮಾಣಕ್ಕಿಂತಲೂ ಶೇ. 50 ರಷ್ಟು ಹೆಚ್ಚು ಎಂದು ಹೇಳಬಹುದು.

Most Read Articles

Kannada
English summary
Toyota Hybrid Cars Battery Warranty Extended. Read in Kannada.
Story first published: Thursday, July 29, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X