ಅಗಸ್ಟ್ ಅವಧಿಯಲ್ಲಿ ಟೊಯೊಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಇಂಡಿಯಾ ಕಂಪನಿಯು ಅಗಸ್ಟ್ ಅವಧಿಗಾಗಿ ವಿವಿಧ ಕಾರು ಮಾದರಿಗಳ ಮೇಲೆ ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದು, ಗ್ಲಾಂಝಾ, ಯಾರಿಸ್, ಅರ್ಬನ್ ಕ್ರೂಸರ್ ಕಾರುಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಿಸಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಆತಂಕದಿಂದ ಆಟೋ ಉದ್ಯಮವು ಏರಿಳಿತಗಳನ್ನು ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಗ್ರಾಹಕರಿಗೆ ಹಲವಾರು ರಿಯಾಯ್ತಿಗಳೊಂದಿಗೆ ಘೋಷಣೆ ಮಾಡಲಾಗುತ್ತಿದೆ. ಟೊಯೊಟಾ ಇಂಡಿಯಾ ಕಂಪನಿಯು ಸಹ ತನ್ನ ಆಯ್ದ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಣೆ ಮಾಡಿದ್ದು, ಈ ತಿಂಗಳ ಕೊನೆಯ ತನಕ ಹೊಸ ಆಫರ್ ಅನ್ವಯವಾಗಲಿವೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಗ್ಲಾಂಝಾ, ಅರ್ಬನ್ ಕ್ರೂಸರ್ ಮತ್ತು ಯಾರಿಸ್ ಕಾರುಗಳ ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಗ್ಲಾಂಝಾ ಕಾರು ಮಾದರಿಯ ಮೇಲೆ ಗರಿಷ್ಠ ರೂ. 30 ಸಾವಿರ, ಅರ್ಬನ್ ಕ್ರೂಸರ್ ಕಾರು ಮಾದರಿ ಮೇಲೆ ರೂ. 20 ಸಾವಿರ ಮತ್ತು ಯಾರಿಸ್ ಮಾದರಿಯ ಮೇಲೆ ರೂ.50 ಸಾವಿರ ಮೌಲ್ಯದ ಆಫರ್ ಲಭ್ಯವಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಹೊಸ ಆಫರ್‌ಗಳಲ್ಲಿ ಗ್ಲಾಂಝಾ ಕಾರಿನ ಮೇಲೆ ರೂ.10 ಸಾವಿರ ಕ್ಯಾಶ್‌ಬ್ಯಾಕ್, ರೂ. 18 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 2 ಸಾವಿರ ಕಾರ್ಪೊರೇಟ್ ರಿಯಾಯಿತಿ ನೀಡುತ್ತಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಅರ್ಬನ್ ಕ್ರೂಸರ್ ಕಾರು ಖರೀದಿಗಾಗಿ ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಯಾರಿಸ್ ಸೆಡಾನ್ ಮಾದರಿಯ ಮೇಲೆ ರೂ. 50 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಮತ್ತು ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಗ್ಲಾಂಝಾ, ಯಾರಿಸ್, ಅರ್ಬನ್ ಕ್ರೂಸರ್ ಕಾರುಗಳನ್ನು ಹೊರತುಪಡಿಸಿ ಕಂಪನಿಯು ಇನ್ನೊವಾ ಕ್ರಿಸ್ಟಾ, ಫಾರ್ಚೂನರ್ ಮತ್ತು ವೆಲ್‌ಫೈರ್ ಕಾರುಗಳ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಇನ್ನು ಕೋವಿಡ್ ಪರಿಣಾಮ ಸುರಕ್ಷಿತ ವಾಣಿಜ್ಯ ವ್ಯವಹಾರಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ವಾಣಿಜ್ಯ ವ್ಯವಹಾರಗಳು ಇದೀಗ ಮತ್ತೆ ವೈರಸ್ ಭೀತಿ ಎದುರಿಸುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೂ ತೀವ್ರ ಆರ್ಥಿಕ ಹಿನ್ನಡೆ ಉಂಟು ಮಾಡುವ ಸಾಧ್ಯತೆಗಳಿವೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಲಾಕ್‌ಡೌನ್ ಚರ್ಚೆಗಳು ನಡೆಸುತ್ತಿದ್ದು, ವೈರಸ್ ಪರಿಣಾಮ ನಿರಂತರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಾರಾಟವನ್ನು ಸುಧಾರಿಸುವತ್ತ ಹೊಸ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿವೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಹೆಚ್ಚುತ್ತಿರುವ ಪರಿಣಾಮ ಗ್ರಾಹಕರನ್ನು ನೇರವಾಗಿ ಶೋರೂಂ ಭೇಟಿಯನ್ನು ತಪ್ಪಿಸಲು ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ವಾಹನ ಕಂಪನಿಗಳ ಹೊಸ ಉಪಕ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಇದರ ಜೊತೆಗೆ ಹೊಸ ವಾಹನಗಳ ವೀಕ್ಷಣೆಗಾಗಿ ಮತ್ತೊಂದು ಪ್ರಮುಖ ಹೆಜ್ಜೆಯಿರಿಸಿರುವ ಆಟೋ ಉತ್ಪದನಾ ಕಂಪನಿಗಳು ವರ್ಚುವಲ್ ಶೋರೂಂಗಳನ್ನು ಸಹ ತೆರೆಯುತ್ತಿದ್ದು, ಇದು ಸಾಮಾನ್ಯ ವೆಬ್‌ತಾಣಗಳಲ್ಲಿ ಸಿಗುವ ವಾಹನಗಳ ಮಾಹಿತಿ ಪ್ರಸ್ತುತಪಡಿಸುವ ಶೈಲಿ ವಿಭಿನ್ನವಾಗಿರುತ್ತದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಇದೀಗ ಚಾಲನೆ ನೀಡಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ವಾಹನಗಳಿಗಾಗಿ ಟೊಯೊಟಾ ಕಂಪನಿಯು ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ್ದು, ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ.

ಅಗಸ್ಟ್ ಅವಧಿಯಲ್ಲಿ ಟೊಯೊಟಾ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

3ಡಿ ತಂತ್ರಜ್ಞಾನದ ಮೂಲಕ ನೀವು ಆಯ್ದಕೊಳ್ಳುವ ಕಾರಿನ ಸಂಪೂರ್ಣ ಮಾಹಿತಿಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲಿದ್ದು, 360 ಡಿಗ್ರಿ ಮಾದರಿಯಲ್ಲಿ ಹೊಸ ಕಾರನ್ನು ಕೂಲಂಕುಶ ಪರಿಶೀಲನೆ ಮಾಡಬಹುದಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota india announce august discounts and offers for selected models
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X