ಅರ್ಬನ್ ಕ್ರೂಸರ್ ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಕೋವಿಡ್ ಸಂಕಷ್ಟದಿಂದಾಗಿ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರು ಸೆಳೆಯಲು ಪ್ರಮುಖ ಕಾರು ಕಂಪನಿಗಳು ಹರಸಾಹಸಪಡುತ್ತಿವೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮವು ಕಳೆದ ವರ್ಷಕ್ಕಿಂತೂ ಹೆಚ್ಚು ನಷ್ಟು ಅನುಭವಿಸುವ ಭೀತಿಯಲ್ಲಿವೆ. ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಇನ್ನು ಕೆಲವು ವಾಹನ ಕಂಪನಿಗಳು ಹೊಸ ವಾಹನಗಳ ಉತ್ಪಾದನೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಕೆ ಮಾಡಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಕುಸಿತ ಕಂಡಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕುಸಿತ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಕೂಡಾ ಈಗಾಗಲೇ ದಾಖಲಿಸಲಾಗಿದ್ದ ಬುಕ್ಕಿಂಗ್ ಅನ್ನು ಸಹ ಹಿಂಪಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯಿಂದ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಸದ್ಯ ಉಂಟಾಗುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯು ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಟೊಯೊಟಾ ಕಂಪನಿಯು ತನ್ನ ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಕಾರು ಖರೀದಿಯ ಮೇಲೆ ಹೊಸ ಫೈನಾನ್ಸ್ ಸ್ಕೀಮ್ ಪ್ರಕಟಿಸಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಹೊಸ ಫೈನಾನ್ಸ್ ಸ್ಕೀಮ್‌ನಲ್ಲಿ ಅರ್ಬನ್ ಕ್ರೂಸರ್ ಕಾರು ಖರೀದಿಸುವ ಗ್ರಾಹಕರಿಗೆ ಶೇ.100 ಸಾಲ ಸೌಲಭ್ಯದ ಜೊತೆಗೆ 3 ತಿಂಗಳು ಇಎಂಐ ಮರುಪಾವತಿಗೆ ಸಮಯಾವಕಾಶ ನೀಡಲಿದ್ದು, ಸದ್ಯ ಆರ್ಥಿಕ ಪರಿಸ್ಥಿತಿಯಿಂದ ಕಾರು ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಹೊಸ ಫೈನಾನ್ಸ್ ಸ್ಕೀಮ್ ಸಹಕಾರಿಯಾಗಲಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಕಾರು ಖರೀದಿ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಗ್ರಾಹಕರಿಗೆ ಟೊಯೊಟಾ ಹೊಸ ಯೋಜನೆ ಸಾಕಷ್ಟು ಅನುಕೂಲವಾಗಲಿದ್ದು, ವಿಶೇಷ ಹಣಕಾಸು ಸೌಲಭ್ಯವನ್ನು ಸದ್ಯಕ್ಕೆ ಅರ್ಬನ್ ಕ್ರೂಸರ್ ಕಾರಿಗಾಗಿ ಮಾತ್ರ ಪ್ರಕಟಿಸಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟವಾಗುತ್ತಿರುಪ ಅರ್ಬನ್ ಕ್ರೂಸರ್ ಮಾದರಿಯು ಮೂಲ ಮಾದರಿಗಿಂತಲೂ ವಿನೂತನ ಫೀಚರ್ಸ್ ಹೊಂದಿದ್ದು, ಹೊಸ ಕಾರು ಇದುವರೆಗೆ 20 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.62 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.40 ಲಕ್ಷ ಬೆಲೆ ಪಡೆದುಕೊಂಡಿದೆ.

ಕಾರು ಖರೀದಿಗೆ ಹೊಸ ಫೈನಾನ್ಸ್ ಸ್ಕೀಮ್ ಪರಿಚಯಿಸಿದ ಟೊಯೊಟಾ

ಹೊಸ ಕಾರಿನಲ್ಲಿ ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Announced Buy Now And Pay Later Scheme For Urban Cruiser. Read in Kannada.
Story first published: Thursday, June 10, 2021, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X