ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ತನ್ನ ಹೈಬ್ರಿಡ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ವರದಿಗಳಾಗಿದೆ. ಹೆಚ್ಚು ನಿರ್ದಿಷ್ಟವಾಗಿ ಜಿಡಿ ಹೈಬ್ರಿಡ್ ಎಂದು ಕರೆಯಲ್ಪಡುವ ಡೀಸೆಲ್ ಹೈಬ್ರಿಡ್ ಅನ್ನು ಅಭಿವೃದ್ಧಿಪಡಿಸುತ್ತದೆ.

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಈ ಜಿಡಿ ಸೀರಿಸ್ ಎಂಜಿನ್‌ಗಳನ್ನು ಇನೋವಾ ಕ್ರಿಸ್ಟಾ ಎಂಪಿವಿ, ಫಾರ್ಚೂನರ್ ಪೂರ್ಣ-ಗಾತ್ರದ ಎಸ್‍ಯುವಿಯು ಪಡೆಯಲಿದೆ. ಇದು 2.4-ಲೀಟರ್ 2ಜಿಡಿ-ಎಫ್‌ಟಿವಿ ಮತ್ತು 2.8-ಲೀಟರ್ 1ಜಿಡಿ-ಎಫ್‌ಟಿವಿ ಯುನಿಟ್ ಗಳಾಗಿರುತ್ತದೆ. ಥೈಲ್ಯಾಂಡ್‌ನಲ್ಲಿ ಜಿಡಿ ಹೈಬ್ರಿಡ್ ಅನ್ನು ಬಳುಸುವುದರಿಂದ ಫಾರ್ಚೂನರ್ ಎಸ್‍ಯುವಿಗೆ ಸರ್ಕಾರದ ಕೆಲವು ವಿನಾಯಿತಿಗಳನ್ನು ಪಡೆದುಕೊಳ್ಳಬಹುದು. ಪ್ರಸ್ತುತ ಶೇಕಡಾ 20 ರಷ್ಟು ಅಬಕಾರಿ ತೆರಿಗೆಯನ್ನು ನೀಡಬೇಕಾಗಿದೆ. ಇದನ್ನು ಅರ್ಧದಷ್ಟು ಕಡಿತಗೊಳಿಸಲಾಗುತ್ತದೆ. ಹೀಗಾಗಿ, ಜಿಡಿ ಹೈಬ್ರಿಡ್ ಎಂಜಿನ್ ನೊಂದಿಗೆ ಫಾರ್ಚೂನರ್ ಎಸ್‍ಯುವಿಯನ್ನು ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು.

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಭಾರತದಲ್ಲಿ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿವೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇನ್ನು ಇನೋವಾ ಕ್ರಿಸ್ಟಾ ಮಾದರಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ 164 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.4ಎಲ್ ಟರ್ಬೊ ಡೀಸೆಲ್ 148 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಟೊಯೊಟಾ ತನ್ನ ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್ ಮತ್ತು ಕ್ಯಾಮ್ರಿ ಮಾದರಿಗಳ ಬೆಲೆಯನ್ನು ಈ ತಿಂಗಳ ಆರಂಭದಿಂದ ಹೆಚ್ಚಿಸಿದೆ. ಉಳಿದಂತೆ ಗ್ಲಾಂಝಾ, ಅರ್ಬನ್ ಕ್ರೂಸರ್ ಮತ್ತು ಯಾರಿಸ್ ಸೆಡಾನ್ ಸೇರಿದಂತೆ ಇತರ ಕಾರುಗಳ ಬೆಲೆಗಳು ಒಂದೇ ಆಗಿರುತ್ತವೆ.

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಟೊಯೊಟಾ ಈ ವರ್ಷದ ಆರಂಭದಲ್ಲಿ ಫಾರ್ಚೂನರ್ ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಸಾಮಾನ್ಯ ಫಾರ್ಚೂನರ್ ಬೆಲೆಯನ್ನು ರೂ.36,000 ಗಳಿಂದ ಹೆಚ್ಚಿಸಲಾಗಿದೆ. ಇದರ ಟಾಪ್-ಆಫ್-ಲೈನ್ ಫಾರ್ಚೂನರ್ ಲೆಜೆಂಡರ್ ಬೆಲೆಯನ್ನು ರೂ.72,000 ವರೆಗೆ ಹೆಚ್ಚಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಟೊಯೊಟಾದ ಜನಪ್ರಿಯ ಇನೋವಾ ಕ್ರಿಸ್ಟಾ ಮಾದರಿಯು ಕೂಡ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಎಂಪಿವಿಯ ಬೆಲೆಯನ್ನು ರೂ.26,000 ಗಳರೆಗೆ ಹೆಚ್ಚಿಸಲಾಗಿದೆ. ಇದು ಫ್ಯಾಮಿಲಿ ಕಾರು ಎಂದೇ ಹೆಚ್ಚು ಜನಪ್ರಿಯವಾಗಿದೆ.

ಡೀಸೆಲ್ ಹೈಬ್ರಿಡ್ ಎಂಜಿನ್ ಪಡೆಯಲಿದೆ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇನ್ನು ಟೊಯೊಟಾದ ಪ್ತಮುಖ ಮಾದರಿಯಾದ ಕ್ಯಾಮ್ರಿ ಹೈಬ್ರಿಡ್ ಬೆಲೆಯನ್ನು ರೂ.1.18 ಲಕ್ಷಗಳವರೆಗೆ ಹೆಚ್ಚಿಸಲಾಗುತ್ತದೆ. ಇದೀಗ ಈ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.40.59 ಲಕ್ಷಗಳಾಗಿದೆ. ಇನ್ನು ಭಾರತದಲ್ಲಿ ಇನೋವಾ ಮತ್ತು ಫಾರ್ಚೂನರ್ ಮಾದರಿಗಳು ಟೊಯೊಟಾ ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
English summary
Toyota Innova Crysta & Fortuner To Likely Get Diesel Hybrid Engine. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X