ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ Toyota Motor ಥೈಲ್ಯಾಂಡ್‍ನಲ್ಲಿ ತನ್ನ Fortuner GR Sport ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾದರಿಯು Fortuner Legender ಅನ್ನು ಆಧರಿಸಿದೆ. ಇಂಡೋನೇಷ್ಯಾ-ಸ್ಪೆಕ್ Fortuner GR Sport ‌ಗಿಂತ ಭಿನ್ನವಾಗಿ ಇದು ಕೆಲವು ವಾರಗಳ ಹಿಂದೆ ಬಿಡುಗಡೆಗೊಳಿಸಿತು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

Toyota Fortuner GR Sport ಸಾಮಾನ್ಯ ಮಾದರಿಯಿಂದ ಭಿನ್ನವಾಗಲು ಹೊರಭಾಗ ಮತ್ತು ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಮುಂಭಾಗದ ಫಾಸಿಕ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ, ಮತ್ತು ಮುಂಭಾಗದ ಗ್ರಿಲ್ ಮತ್ತು ಬಂಪರ್ ಸ್ಟ್ಯಾಂಡರ್ಡ್ Fortuner ಎಸ್‍ಯುವಿಗೆ ಹೋಲಿಸಿದರೆ ವಿಭಿನ್ನವಾಗಿವೆ. ಟೈಲ್‌ಗೇಟ್‌ನಲ್ಲಿ, ಟೈಲ್‌ಲೈಟ್‌ಗಳ ನಡುವಿನ ಅಲಂಕಾರವು ಬಾಡಿಯ ಬಣ್ಣವನ್ನು ಹೊಂದಿದೆ. ಅದರ ಮೇಲೆ 'ಫಾರ್ಚುನರ್' ಬ್ಯಾಡ್ಜಿಂಗ್ ಇದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಸ್ಟ್ಯಾಂಡರ್ಡ್ ಫಾರ್ಚೂನರ್ ವಿನ್ಯಾಸದ ಇತರ ಬದಲಾವಣೆಗಳಲ್ಲಿ ಹೊಸ ರೂಫ್-ಮೌಂಟೆಡ್ ಸ್ಪಾಯ್ಲರ್, ಬಾಡಿ-ಬಣ್ಣದ ಡೋರ್ ಹ್ಯಾಂಡಲ್‌ಗಳು ಮತ್ತು ದೊಡ್ಡ 20 ಇಂಚಿನ ಬ್ಲ್ಯಾಕ್-ಔಟ್ ಆಲಾಯ್ ವ್ಹೀಲ್ ಗಳನ್ನು ಸೇರಿಸಲಾಗಿದೆ. ಈ ಎಸ್‍ಯುವಿಯು ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇನ್ನು ಈ Toyota Fortuner GR Sport ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಈ ಎಸ್‍ಯುವಿಯ ಕ್ಯಾಬಿನ್‌ಗೆ ಬ್ಲ್ಯಾಕ್ ಬಣ್ಣದ ಥೀಮ್ ಅನ್ನು ಬಳಸುತ್ತದೆ, ಅಪ್‌ಹೋಲ್‌ಸ್ಟರಿಗೆ ರೆಡ್ ಹೊಲಿಗೆ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಅಸ್ಸೆಂಟ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇದು ಜಿಆರ್-ನಿರ್ದಿಷ್ಟ ಕ್ಲಸ್ಟರ್ ಮತ್ತು ಸ್ಟೀರಿಂಗ್ ವೀಲ್ (ಲೆದರ್-ಸುತ್ತಿದ) ಪಡೆಯುತ್ತದೆ. ಹೆಡ್‌ರೆಸ್ಟ್‌ನಲ್ಲಿ ಜಿಆರ್ ಬ್ರ್ಯಾಂಡಿಂಗ್ ಇದೆ, ಮತ್ತು ಕ್ಯಾಬಿನ್ ಸುತ್ತಲೂ ಸಿಲ್ವರ್ ಅಸ್ಸೆಂಟ್ ಗಳಿವೆ. ಕ್ಯಾಬಿನ್‌ನಲ್ಲಿನ ಇತರ ಬದಲಾವಣೆಗಳೆಂದರೆ ಹೊಸ ಅಲ್ಯೂಮಿನಿಯಂ ಪೆಡಲ್‌ಗಳು, ಜಿಆರ್ ಸ್ಪೋರ್ಟ್ ಇಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಜಿಆರ್ ಸ್ಪೋರ್ಟ್ ಫ್ಲೋರ್ ಮ್ಯಾಟ್ಸ್. ತಯಾರಕರು ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಮಾಡಿದ್ದಾರೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇನ್ನು ಸಸ್ಪೆಂಕ್ಷನ್ ಎಲ್ಲಾ ನಾಲ್ಕು ಮೂಲೆಗಳಲ್ಲಿಯೂ ಮೋನೋಟ್ಯೂಬ್ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿದೆ, ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಸ್ಪೋರ್ಟಿಯರ್ ಟ್ಯೂನಿಂಗ್ ಹೊಂದಿದೆ. ಬ್ರೇಕ್‌ಗಳನ್ನು ಅಪ್‌ಗ್ರೇಡ್ ಮಾಡಿಲ್ಲ, ಆದರೆ ಕೆಂಪು ಕ್ಯಾಲಿಪರ್‌ಗಳನ್ನು ಇಲ್ಲಿ ಸೇರಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಥಾಯ್-ಸ್ಪೆಕ್ Toyota Fortuner GR Sport ಎಸ್‍ಯುವಿಯಲ್ಲಿ 2.8-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಆವೃತ್ತಿಯಂತೆಯೇ ಇದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್‌ಗ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, ಇನ್ನು ಇದರಲ್ಲಿ 4WD ಸಿಸ್ಟಂ ನೊಂದಿಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇನ್ನು ಭಾರತದಲ್ಲಿ ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ Toyota ಇಂಡಿಯಾ ಕಂಪನಿಯು ಕೂಡಾ ಇದೀಗ ಚಾಲನೆ ನೀಡಿದೆ. ಹೊಸ ವಾಹನಗಳಿಗಾಗಿ ಟೊಯೊಟಾ ಕಂಪನಿಯು ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ. 3ಡಿ ತಂತ್ರಜ್ಞಾನದ ಮೂಲಕ ನೀವು ಆಯ್ದಕೊಳ್ಳುವ ಕಾರಿನ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ. ಇದು 360 ಡಿಗ್ರಿ ಮಾದರಿಯಲ್ಲಿ ಹೊಸ ಕಾರನ್ನು ಕೂಲಂಕುಶ ಪರಿಶೀಲನೆ ಮಾಡಬಹುದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ವರ್ಚುವಲ್ ಶೋರೂಂನಲ್ಲಿ Toyota ನಿರ್ಮಾಣದ ಎಲ್ಲಾ ಕಾರು ಮಾದರಿಗಳು ವೀಕ್ಷಣೆಗೆ ಲಭ್ಯವಿದ್ದು, ಹೊಸ ವರ್ಚುವಲ್ ಪ್ಲ್ಯಾಟ್‌ಫಾರ್ಮ್ ಸದ್ಯ ಕೋವಿಡ್ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ಇದರಿಂದ ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇನ್ನು ಭಾರತದಲ್ಲಿ ಟೊಯೊಟಾ ಕಂಪನಿಯು 2021ರ ಜುಲೈ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಡಿಸಲಾಗಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 13,105 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಟೊಯೊಟಾ ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ 8801 ಯುನಿಟ್ ಗಳನ್ನು ಮಾರಾಟಗೊಳಿಸಿತ್ತು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇದು ಜುಲೈನಿಂದ ಮಾರಾಟ ಸಂಖ್ಯೆಗೆ ಹೋಲಿಸಿದರೆ 4,304 ಯುನಿಟ್‌ಗಳು ಕಡಿಮೆಯಾಗಿದೆ. ಇದು ಮಾಸಿಕ ಮಾರಾಟದಲ್ಲಿ ಶೇ.49 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತದೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 5,386 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Fortuner GR Sport

ಇದನ್ನು 2021ರ ಜುಲೈ ತಿಂಗಳ ಮಾರಾಟದ ಅಂಕಿಅಂಶಗಳಿಗಿಂತ 7719 ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.143 ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಈ ಹೊಸ Toyota Fortuner GR Sport ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota launched the new fortuner gr sport in thailand details
Story first published: Saturday, August 28, 2021, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X