ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಕಿರ್ಲೊಸ್ಕರ್ ಮೋಟಾರ್(Toyota Kirloskar Motor) ಕಂಪನಿಯು ಅಕ್ಟೋಬರ್ ಅವಧಿಗಾಗಿ ವಿವಿಧ ಕಾರು ಮಾದರಿಗಳ ಮೇಲೆ ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದು, ಗ್ಲಾಂಝಾ, ಅರ್ಬನ್ ಕ್ರೂಸರ್ ಕಾರುಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಿಸಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಆತಂಕ ಮತ್ತು ಬಿಡಿಭಾಗಗಳ ಕೊರೆತಯಿಂದಾಗಿ ಆಟೋ ಉದ್ಯಮವು ಏರಿಳಿತಗಳನ್ನು ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಗ್ರಾಹಕರಿಗೆ ಆಟೋ ಕಂಪನಿಗಳು ಹಲವಾರು ರಿಯಾಯ್ತಿಗಳೊಂದಿಗೆ ಘೋಷಣೆ ಮಾಡಲಾಗುತ್ತಿದೆ. ಟೊಯೊಟಾ ಇಂಡಿಯಾ ಕಂಪನಿಯು ಸಹ ತನ್ನ ಆಯ್ದ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಣೆ ಮಾಡಿದ್ದು, ಈ ತಿಂಗಳ ಕೊನೆಯ ತನಕ ಹೊಸ ಆಫರ್ ಅನ್ವಯವಾಗಲಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಗ್ಲಾಂಝಾ, ಅರ್ಬನ್ ಕ್ರೂಸರ್ ಕಾರುಗಳ ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಆಕರ್ಷಕ ಬಡ್ಡಿದರದಲ್ಲಿ ಗರಿಷ್ಠ ಸಾಲಸೌಲಭ್ಯ, ಬೈಬ್ಯಾಕ್ ಆಫರ್ ಮತ್ತು ಕೆಲವು ವಿಶೇಷ ಆಫರ್ ಘೋಷಣೆ ಮಾಡಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರು ಮಾದರಿಯ ಮೇಲೆ ಕಂಪನಿಯು ಶೇ.90 ರಷ್ಟು ಆನ್‌ರೋಡ್ ದರದ ಮೇಲೆ ಸಾಲಸೌಲಭ್ಯ ಒದಗಿಸುವುದಾಗಿ ತಿಳಿಸಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಜೊತೆಗೆ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎರಡು ಕಾರುಗಳ ಮೇಲೂ ಬೈಬ್ಯಾಕ್ ಮತ್ತು ಇಎಂಐ ಮರುಪಾವತಿಯನ್ನು 2022ರ ಫೆಬ್ರವರಿಯಿಂದ ಮರುಪಾವತಿಸುವ ಆಯ್ಕೆ ನೀಡಿದ್ದು, ಗ್ರಾಹಕರು ತಾವು ಖರೀದಿ ಮಾಡಿದ ಕಾರನ್ನು ನಿಗದಿತ ಅವಧಿಯಲ್ಲಿ ಕಂಪನಿಗೆಯೇ ಉತ್ತಮ ಬೆಲೆಯಲ್ಲಿ ಮರುಮಾರಾಟ ಮಾಡಬಹುದಾದ ಆಯ್ಕೆ ನೀಡಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಬೈಬ್ಯಾಕ್ ಮತ್ತು ಬೈ ನೌ ಪೇ ಇನ್ 2022 ಆಯ್ಕೆಯು ಕಾರಿನ ಮೌಲ್ಯವನ್ನು ಹೆಚ್ಚಿಸಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು. ಹಾಗೆಯೇ ಹೊಸ ಕಾರುಗಳ ಖರೀದಿಗಾಗಿ ಗರಿಷ್ಠ ಮಟ್ಟದ ಆನ್ ರೋಡ್ ದರದ ಮೇಲೆ ಸಾಲಸೌಲಭ್ಯ ಒದಗಿಸಿರುವುದು ಕಾರು ಖರೀದಿಯನ್ನು ಸುಲಭಗೊಳಿಸುತ್ತದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಹೊಸ ಆಫರ್‌ಗಳನ್ನು ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡುವ, ಆಂಧ್ರಪ್ರದೇಶ. ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಘೋಷಣೆ ಮಾಡಿದ್ದು, ಡೀಲರ್ಸ್ ಮಟ್ಟದಲ್ಲೂ ಗ್ರಾಹಕರು ಕೆಲವು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಇನ್ನು ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಟೊಯೊಟಾ ಕಂಪನಿಯು ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 60 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಪರಿಣಾಮ ಸುರಕ್ಷಿತ ವಾಣಿಜ್ಯ ವ್ಯವಹಾರಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ವಾಣಿಜ್ಯ ವ್ಯವಹಾರಗಳು ಇದೀಗ ಮತ್ತೆ ವೈರಸ್ ಭೀತಿ ಎದುರಿಸುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೂ ಹೊಸ ಸುರಕ್ಷಾ ಕ್ರಮಗಳೊಂದಿಗೆ ಸುರಕ್ಷಿತ ವ್ಯವಹಾರಕ್ಕೆ ಆದ್ಯತೆ ನೀಡುತ್ತಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವೈರಸ್ ಪರಿಣಾಮ ನಿರಂತರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಾರಾಟವನ್ನು ಸುಧಾರಿಸುವತ್ತ ಹೊಸ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿವೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಪರಿಣಾಮ ಗ್ರಾಹಕರನ್ನು ನೇರವಾಗಿ ಶೋರೂಂ ಭೇಟಿಯನ್ನು ತಪ್ಪಿಸಲು ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ವಾಹನ ಕಂಪನಿಗಳ ಹೊಸ ಉಪಕ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತ್ತಿದೆ.

ಅಕ್ಟೋಬರ್ ಅವಧಿಯಲ್ಲಿ Toyota ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಇದರ ಜೊತೆಗೆ ಹೊಸ ವಾಹನಗಳ ವೀಕ್ಷಣೆಗಾಗಿ ಮತ್ತೊಂದು ಪ್ರಮುಖ ಹೆಜ್ಜೆಯಿರಿಸಿರುವ ಆಟೋ ಉತ್ಪದನಾ ಕಂಪನಿಗಳು ವರ್ಚುವಲ್ ಶೋರೂಂಗಳನ್ನು ಸಹ ತೆರೆಯುತ್ತಿದ್ದು, ಇದು ಸಾಮಾನ್ಯ ವೆಬ್‌ತಾಣಗಳಲ್ಲಿ ಸಿಗುವ ವಾಹನಗಳ ಮಾಹಿತಿಗಿಂತಲೂ ಪ್ರಸ್ತುತಪಡಿಸುವ ಶೈಲಿ ವಿಭಿನ್ನವಾಗಿರುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota launches victorious october scheme this festive season
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X