1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

Mirai, Toyota ಕಂಪನಿಯ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಹೈಡ್ರೋಜನ್ ಇಂಧನ ಕೋಶದಿಂದ ನಡೆಸಲ್ಪಡುವ ವಾಹನವಾಗಿದೆ. ಈ ಕಾರು ಈಗ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಒಂದು ಬಾರಿ ಪೂರ್ತಿಯಾಗಿ ಹೈಡ್ರೋಜನ್ ಇಂಧನ ತುಂಬಿದ ನಂತರ ಈ ಕಾರು 1359 ಕಿ.ಮೀ ದೂರ ಚಲಿಸಿದೆ. ಹೈಡ್ರೋಜನ್ ಇಂಧನ ಕೋಶದಿಂದ ಚಾಲನೆಯಾಗುವ ಕಾರು ಫುಲ್ ಟ್ಯಾಂಕ್ ಹೈಡ್ರೋಜನ್ ಹೊಂದಿ ಇಷ್ಟು ದೂರ ಚಲಿಸಿದ್ದು ಇದೇ ಮೊದಲು.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಈ ಕಾರಣಕ್ಕೆ Toyota Mirai ಕಾರು ಗಿನ್ನೆಸ್ ದಾಖಲೆಗೆ ಪಾತ್ರವಾಗಿವೆ. ಈ ದಾಖಲೆಗೆ ಪಾತ್ರವಾಗಲು Toyota Mirai ಕಾರು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1359 ಕಿ.ಮೀ ಚಲಿಸಿತ್ತು. ಗರಿಷ್ಠ ಶ್ರೇಣಿಯನ್ನು ಪಡೆಯಲು Toyota ಕಂಪನಿಯು ಕೆಲವು ತಂತ್ರಗಳನ್ನು ಅನುಸರಿಸಿದೆ ಎಂದು ಹೇಳಲಾಗಿದೆ. ಅಂದರೆ ಈ ವಾಹನವನ್ನು ಕಡಿಮೆ ವೇಗದಲ್ಲಿ ಚಾಲನೆ ಮಾಡಲಾಗಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಜೊತೆಗೆ ಕಡಿಮೆ ತೂಕ, ಇನ್ಸ್ಟೆಂಟ್ ಬ್ರೇಕ್ ತಪ್ಪಿಸಿ, ಅಗತ್ಯವಿದ್ದಾಗ ಮಾತ್ರ ಬ್ರೇಕ್ ಹಾಕುವಂತಹ ಕ್ರಮಗಳನ್ನು ಅನುಸರಿಸಲಾಗಿದೆ. ಈ ಕಾರಿನ ಟಯರ್ ಗಳಲ್ಲಿ ಪೂರ್ತಿ ಗಾಳಿ ತುಂಬಿಸಿ ಚಾಲನೆ ಮಾಡಲಾಗಿದೆ. Toyota Mirai ಕಾರು 1359 ಕಿ.ಮೀ ದೂರ ಚಲಿಸಲು ಎರಡು ದಿನ ತೆಗೆದುಕೊಂಡಿದೆ. Toyota Mirai ಹಲವಾರು ನಿಯಮ ಹಾಗೂ ದಾಖಲಾತಿಗಳ ನಂತರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಪ್ರಯಾಣದ ಮೊದಲ ದಿನ Toyota Mirai ಕಾರು 761 ಕಿ.ಮೀ ದೂರ ಕ್ರಮಿಸಿದೆ. ಮರುದಿನ ಶೂನ್ಯ ಹೈಡ್ರೋಜನ್ ಮಟ್ಟದಲ್ಲಿ ವಿರಾಮವನ್ನು ಪೂರ್ಣಗೊಳಿಸಿ ನಂತರ ತನ್ನ ಪಯಣವನ್ನು ಕೊನೆಗೊಳಿಸಿದೆ. ಈ ಪ್ರಯಾಣದ ಸಂದರ್ಭದಲ್ಲಿ Toyota Mirai ಕಾರು ಒಟ್ಟು 5.65 ಕೆ.ಜಿಯಷ್ಟು ಹೈಡ್ರೋಜನ್ ಇಂಧನ ಕೋಶವನ್ನು ಬಳಸಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಮುಂಚೆ Toyota ಕಂಪನಿಯು ಇಂತಹ ಕಾರುಗಳ ಬಗ್ಗೆ ಕೆಲಸ ಮಾಡುತ್ತಿತ್ತು.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

Toyota Mirai ಕಾರು ಜೂನ್ ತಿಂಗಳಿನಲ್ಲಿ ನಡೆದಿದ್ದ ಈ ಹಿಂದಿನ ಪರೀಕ್ಷೆಯಲ್ಲಿ ಸಾವಿರ ಕಿ.ಮೀಗಳಿಗಿಂತ ಹೆಚ್ಚು ದೂರ ಚಲಿಸಿತ್ತು. ಈಗ 2021 Toyota Mirai ಕಾರು 1359 ಕಿ.ಮೀ ಸಂಚರಿಸಿ ಹೊಸ ದಾಖಲೆ ಬರೆದಿದೆ. Toyota ಕಂಪನಿಯು ಈ ಕಾರ್ ಅನ್ನು ಪ್ರಪಂಚದ ಕೆಲವು ದೇಶಗಳಲ್ಲಿ ಮಾತ್ರ ಮಾರಾಟ ಮಾಡುತ್ತದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಂತೆ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುವುದಿಲ್ಲ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಹೈಡ್ರೋಜನ್ ಇಂಧನ ಕೋಶಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿ ಕಾರುಗಳನ್ನು ಚಾಲನೆ ಮಾಡುತ್ತದೆ. ಈ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಂತೆ ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ಹೈಡ್ರೋಜನ್ ಇಂಧನ ಕೋಶವನ್ನು ಇಂಧನ ತುಂಬಿಸುವ ರೀತಿಯಲ್ಲಿ ಬಹಳ ಕಡಿಮೆ ಸಮಯದಲ್ಲಿ ತುಂಬಿಸಬಹುದು. ಈ ಕಾರಣಕ್ಕೆ ಹೈಡ್ರೋಜನ್ ಇಂಧನ ಕೋಶದ ಮೇಲೆ ಚಲಿಸುವ Toyota Mirai ಪೆಟ್ರೋಲ್, ಡೀಸೆಲ್ ಕಾರುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

Toyota Mirai ಪ್ರೀಮಿಯಂ ಗುಣಮಟ್ಟದ ರೇರ್ ವ್ಹೀಲ್ ಡ್ರೈವ್ ಕಾರ್ ಆಗಿದೆ. ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚಿನ ದಕ್ಷತೆ ಹಾಗೂ ಹೆಚ್ಚು ಹೈಡ್ರೋಜನ್ ಶೇಖರಣಾ ಸೌಲಭ್ಯದಂತಹ ಹಲವು ಫೀಚರ್ ಗಳೊಂದಿಗೆ ಈ ಕಾರ್ ಅನ್ನು ಮಾರಾಟ ಮಾಡಲಾಗುತ್ತದೆ. ಈ ಕಾರು ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ ಎಂಬುದು ಗಮನಾರ್ಹ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಈಗ ದೇಶದಲ್ಲಿ ಇಂಧನ ಕೋಶ ವಾಹನಗಳ ಚಲನೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಇದರಿಂದ ಟಾಪ್ ಎಂಡ್ ಸರಣಿಯ ಇಂಧನ ಕೋಶ ವಾಹನಗಳು ದೇಶದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಟೊಯೊಟಾ ಕಂಪನಿಯು ಕೆಲ ದಿನಗಳ ಹಿಂದಷ್ಟೇ ತನ್ನ ಫಾರ್ಚುನರ್ ಲೆಜೆಂಡರ್ 4X4 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 42.33 ಲಕ್ಷಗಳಾಗಿದೆ. ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ ಮೂಲಕ ಅಥವಾ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2021ರ ಆರಂಭದಲ್ಲಿ ಬಿಡುಗಡೆಗೊಂಡ ಫಾರ್ಚುನರ್ ಲೆಜೆಂಡರ್ 4X2 ಮಾದರಿಯ 2,700ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ಮಾದರಿಯನ್ನು ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯು‌ವಿಯು ಪ್ರೀಮಿಯಂ 11 ಸ್ಪೀಕರ್‌ಗಳಾದ ಜೆಬಿಎಲ್ ಆಡಿಯೋ ಸಿಸ್ಟಂ, ಬ್ಯಾಕ್ ಡೋರ್ ಕಿಕ್ ಸೆನ್ಸಾರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್‌ನಂತಹ ಹಲವಾರು ಫೀಚರ್ ಗಳನ್ನು ಹೊಂದಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

4X2 ಮಾದರಿಯಂತೆಯೇ ಲೆಜೆಂಡರ್ 4X4 ಮಾದರಿಯೂ ಸಹ ಡ್ಯುಯಲ್ ಟೋನ್ (ಬ್ಲಾಕ್ ಹಾಗೂ ಮರೂನ್) ಇಂಟಿರಿಯರ್ ಥೀಮ್‌ ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಹಾಗೂ ಕನ್ಸೋಲ್ ಬಾಕ್ಸ್‌ಗಳು ಕಾಂಟ್ರಾಸ್ಟ್ ಸ್ಟಿಚಿಂಗ್ ಹೊಂದಿವೆ. ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ಮಾದರಿಯಲ್ಲಿ 2.8 ಲೀಟರ್ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ.

1300ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಹೊಸ ದಾಖಲೆ ಬರೆದ ಹೈಡ್ರೋಜನ್ ಕಾರು

ಈ ಎಂಜಿನ್ 204 ಬಿಹೆಚ್‍ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota mirai sets new record by travelling more than 1300 kms details
Story first published: Wednesday, October 13, 2021, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X