YouTube

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಬಿಡುಗಡೆಯ ನಂತರ ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮತ್ತು ಫಾರ್ಚೂನರ್ ಮೂಲಕ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ವರ್ಷದ ಜನವರಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಜನವರಿ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ. 92 ರಷ್ಟು ಬೆಳವಣಿಗೆ ಸಾಧಿಸಿದೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

2021ರ ಜನವರಿ ಅವಧಿಯಲ್ಲಿ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 11,126 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, 2020ರ ಜನವರಿ ತಿಂಗಳಿನಲ್ಲಿ ಕೇವಲ 5,804 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಿತ್ತು. ವರ್ಷದ ಆರಂಂಭದಲ್ಲೇ ಟೊಯೊಟಾ ಕಂಪನಿಯ ವಿವಿಧ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗಿದ್ದು, ಕಳೆದ ವರ್ಷದ ಜನವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಜನವರಿ ಅವಧಿಯಲ್ಲಿ ಶೇ. 92 ರಷ್ಟು ಬೆಳವಣಿಗೆ ಸಾಧಿಸಿದೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಟೊಯೊಟಾ ಕಂಪನಿಯು ವಿವಿಧ ಹೊಸ ಕಾರು ಮಾದರಿಗಳೊಂದಿಗೆ ಪ್ರಯಾಣಿಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮಾರುತಿ ಸುಜುಕಿಯೊಂದಿಗೆ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕೂಡಾ ಟೊಯೊಟಾ ಕಂಪನಿಯ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿವೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ದಸರಾ ಮತ್ತು ದೀಪಾವಳಿ ನಂತರ ಹೊಸ ವಾಹನಗಳ ಮಾರಾಟವು ಸಾಮಾನ್ಯವಾಗಿ ತಗ್ಗಿದ್ದರೂ ಕೂಡಾ ವರ್ಷದ ಆರಂಭದಲ್ಲೇ ಟೊಯೊಟಾ ಕಾರು ಮಾರಾಟದಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಇದುವರೆಗೆ ಸುಮಾರು 50,000 ಯುನಿಟ್ ಮಾರಾಟವನ್ನು ಮಾರಾಟ ಮಾಡಿದ್ದು, ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗ್ಲಾಂಝಾ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಅರ್ಬನ್ ಕ್ರೂಸರ್ ಕಾರು ಮಾದರಿಯು ಅತ್ಯುತ್ತಮ ಬೇಡಿಕೆಯೊಂದಿಗೆ ಟೊಯೊಟಾ ಕಾರು ಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಇನ್ನುಳಿದಂತೆ ಟೊಯೊಟಾ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್, 2021ರ ಫಾರ್ಚೂನರ್, ಯಾರಿಸ್, ಕ್ಯಾಮ್ರಿ ಕಾರುಗಳ ಮಾರಾಟವು ಸಹ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಟೊಯೊಟಾ ಕಾರುಗಳ ಮಾರಾಟದಲ್ಲಿ ದುಬಾರಿ ಬೆಲೆ ನಡುವೆಯೂ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರು ಸಾಕಷ್ಟು ಮುಂಚೂಣಿ ಸಾಧಿಸುತ್ತಿವೆ.

ಕಾರು ಮಾದರಿಗಳು ಜನವರಿ 2021 ಜನವರಿ 2020 ಮಾರಾಟದಲ್ಲಿನ ಬೆಳವಣಿಗೆ
1 ಇನೋವಾ ಕ್ರಿಸ್ಟಾ 3,939 2,575 53
2 ಅರ್ಬನ್ ಕ್ರೂಸರ್ 3,005 - -
3 ಗ್ಲಾಂಝಾ 2,556 2,191 17
4 ಫಾರ್ಚೂನರ್ 1,169 228 413
5 ಯಾರಿಸ್ 412 725 -43
6 ಕ್ಯಾಮ್ರಿ 45 85 -47
7 ವೆಲ್‌ಫೈರ್ 0 0 -
ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.33 ಲಕ್ಷ ಬೆಲೆ ಪಡೆದುಕೊಂಡಿದೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಬಿಎಸ್-6 ಎಮಿಷನ್ ಜಾರಿ ನಂತರ ಪರಿಚಯಿಸಲಾದ ಎಂಜಿನ್ ಮಾದರಿಯೇ ಇದೀಗ ಫೇಸ್‌ಲಿಫ್ಟ್ ಮಾದರಿಯಲ್ಲಿ ಜೋಡಿಸಲಾಗಿದ್ದು, ಇನೋವಾ ಕ್ರಿಸ್ಟಾ ಕಾರಿನಲ್ಲಿ ಗ್ರಾಹಕರು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹಾಗೆಯೇ ಟೊಯೊಟಾ ಕಂಪನಿಯು ಕಳೆದ ಕೆಲ ದಿನಗಳ ಹಿಂದಷ್ಟೇ ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾದ ಫಾರ್ಚೂನರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಿದ್ದು, ಹೊಸ ಕಾರು ಬಿಡುಗಡೆಯಾದ ಮೊದಲ ತಿಂಗಳ ಅವಧಿಯಲ್ಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಫಾರ್ಚೂನರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಲೆಜೆಂಡರ್ ಎನ್ನುವ ಎರಡು ಆವೃತ್ತಿಗಳೊಂದಿಗೆ ಬಿಡುಗಡೆಗಡೆಗೊಂಡಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಇದುವರೆಗೆ ಬರೋಬ್ಬರಿ 5 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟೊಯೊಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ದೆಹಲಿಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.29.98 ಲಕ್ಷಗಳಿಂದ ಟಾಪ್ ಎಂಡ್ ಮಾದರಿಯು ರೂ.37.48 ಲಕ್ಷಗಳಾಗಿದ್ದು, ಲೆಜೆಂಡರ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿನೂತನ ಫೀಚರ್ಸ್‌ಗಳೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

Most Read Articles

Kannada
English summary
Toyota Kirloskar January Model Wise Sale Innova Crysta Urban Cruiser Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X