ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಜಪಾನ್ ಮೂಲದ ಟೊಯೊಟಾ ಕಂಪನಿಯು ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಿದ ಮಾದರಿ ಕ್ವಾಲಿಸ್ ಆಗಿದೆ. ಈ ಟೊಯೊಟಾ ಕ್ವಾಲಿಸ್ 2000ದಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿತು. ನಂತರ ನಾಲ್ಕು ವರ್ಷಗಳವರೆಗೆ ಮಾರಾಟದಲ್ಲಿತ್ತು.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಟೊಯೊಟಾ ಕ್ವಾಲಿಸ್ ಬಿಡುಗಡೆಯಾದ ಆರಂಭದಲ್ಲಿ ಖಾಸಕಿ ಮತ್ತು ಕಮರ್ಷಿಯಲ್ ಖರೀದಿದಾರರನ್ನು ಹೆಚ್ಚಾಗಿ ಆಕರ್ಷಿಸಿತು. ಕ್ವಾಲಿಸ್ ಭಾಗದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಟಾಟಾ ಸುಮೋನಂತಹ ಕಾರುಗಳೊಂದಿಗೆ ಸ್ಪರ್ಧಿಸಿತು. ಟೊಯೊಟಾ ಕಂಪನಿಯು ಇನೋವಾ ಮಾದರಿಯನ್ನು ಬಿಡುಗಡೆಗೊಳಿಸುವಾಗ 2004ರಲ್ಲಿ ಈ ಜನಪ್ರಿಯ ಕ್ವಾಲಿಸ್ ಎಂಪಿವಿಯನ್ನು ಸ್ಥಗಿತಗೊಳಿಸಿದರು.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಒಂದು ಕಾಲದ ಜನಪ್ರಿಯವಾಗಿದ್ದ ಕ್ವಾಲಿಸ್ ಇಂದು ರಸ್ತೆಯಲ್ಲಿ ಅಪರೂಪವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕ್ವಾಲಿಸ್ ಎಂಪಿವಿಯನ್ನು ರಿಸ್ಟೋರ್ ಮಾಡಿರುವ ಹಲವಾರು ವಿಡಿಯೋಗಳು ಕಾಣಸಿಗುತ್ತದೆ. ಆದರೆ ಇತ್ತೀಚೆಗೆ ಕ್ವಾಲಿಸ್ ಎಂಪಿವಿಯನ್ನು ಅದೇ ಹಳೆಯ ವೈಭವದೊಂದಿಗೆ ರಿಸ್ಟೋರ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ವೀಡಿಯೊವನ್ನು ಪಿವಿಟಿ ಆಟೋಕಾನ್ಸೆಪ್ಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಸಂಪೂರ್ಣ ರಿಸ್ಟೋರ್ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಹೊರಭಾಗ ಮತ್ತು ಒಳಭಾಗವನ್ನು ಅದರ ಮೂಲ ಸ್ಥಿತಿಗೆ ರಿಸ್ಟೋರ್ ಮಾಡಲಾಗಿದೆ.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಕ್ವಾಲಿಸ್ ಅಂಗಡಿಗೆ ಬಂದಾಗ ಅದರ ಸುಸ್ಥಿತಿಯನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ಅದರ ಮೇಲೆ ಲೈಟ್ ಬ್ರೌನ್ ಬಣ್ಣವನ್ನು ಹೊಂದಿತ್ತು. ದೇಹದ ಮೇಲೆ ಸ್ಕ್ರೇಜ್ಸ್ ಮತ್ತು ಕೆಲವು ಡೆಂಟ್‌ಗಳು ಇದ್ದವು. ಇದನ್ನು ಟೊಯೊಟಾ ಕ್ವಾಲಿಸ್ ಬಾಡಿ ಫಿಲ್ಲರ್ ಬಳಸಿ ಎಲ್ಲಾ ಡೆಂಟ್‌ಗಳನ್ನು ಸರಿಪಡಿಸಲಾಯಿತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಇದರ ನಂತರ ಕಾರಿನ ಮೇಲೆ ಪ್ರೈಮರ್ ಪದರವನ್ನು ಸಿಂಪಡಿಸಲಾಯಿತು. ಮೂಲ ಬಣ್ಣಕ್ಕೆ ಬೇಸ್ ಒದಗಿಸುವ ಸಲುವಾಗಿ ಮತ್ತು ಬಾಡಿ ತುಕ್ಕು ಹಿಡಿಯದಂತೆ ರಕ್ಷಿಸುವ ಸಲುವಾಗಿ ಇದನ್ನು ಮಾಡಲಾಗುತ್ತದೆ. ಕೋಟ್ ಆಫ್ ಪ್ರೈಮರ್ ಸಿಂಪಡಿಸಿದ ನಂತರ, ಕಾರನ್ನು ಸಂಪೂರ್ಣವಾಗಿ ಪುನಃ ಬಣ್ಣ ಬಳಿಯಲಾಯಿತು. ಕ್ವಾಲಿಸ್ ಈಗ ಗ್ಲೋಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಇದು ಎಂಪಿವಿಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಹೊಸ ಬಣ್ಣದಿಂದ ಇದರ ಲುಕ್ ಅನ್ನು ಇನ್ನಷ್ಟು ಹೆಚ್ಚಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್, ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಅಳವಡಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಈ ಕ್ವಾಲಿಸ್‌ನಲ್ಲಿನ ಸ್ಟಾಕ್ ಸ್ಟೀಲ್ ರಿಮ್‌ಗಳನ್ನು ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್‌ಗಳೊಂದಿಗೆ ಬದಲಾಯಿಸಲಾಯಿಸಿದೆ. ಇದರ ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಇದರ ಸೆಂಟರ್ ಕನ್ಸೋಲ್ ಮತ್ತು ಶ್ಯಾಶ್ ಬೋರ್ಡ್ ಬೂದು ಬಣ್ಣದಲ್ಲಿದೆ.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಈ ಹಳೆಯ ಕ್ವಾಲಿಸ್ ಮಾಡಿದ ಕೆಲಸವು ಅಚ್ಚುಕಟ್ಟಾಗಿ ಕಾಣುತ್ತದೆ. ಎಲ್ಲಾ ಕೆಲಸದ ನಂತರ ಇದು ಹೊಚ್ಚ ಹೊಸ ಟೊಯೊಟಾ ಕ್ವಾಲಿಸ್‌ನಂತೆ ಕಾಣುತ್ತದೆ .ಈ ಯೋಜನೆಗೆ ತೆಗೆದುಕೊಂಡ ಸಮಯ ಮತ್ತು ಖರ್ಚಾದ ಮೊತ್ತವನ್ನು ವಿಡಿಯೋದಲ್ಲಿ ತಿಳಿಸಿಲ್ಲ.

ಟೊಯೊಟಾ ಕ್ವಾಲಿಸ್ ಇತರ ಯಾವುದೇ ಟೊಯೊಟಾ ಮಾದರಿಗಳಂತೆ ವಿಶ್ವಾಸಾರ್ಹ ಎಂಜಿನ್‌ಗೆ ಹೆಸರುವಾಸಿಯಾಗಿದೆ. ವಿಶ್ವಾಸಾರ್ಹ ಎಂಜಿನ್ ಜೊತೆಗೆ ನಿರ್ವಹಣೆಯ ಕಡಿಮೆ ವೆಚ್ಚವು ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಇದು ಉತ್ತಮ ಆರಾಮದಾಯಕ ಸವಾರಿ ಅನುಭವವನ್ನು ನೀಡುತ್ತಿತ್ತು.

ಆಕರ್ಷಕ ಲುಕ್‌ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್

ಟೊಯೊಟಾ ಕ್ವಾಲಿಸ್ ಮಾದರಿಯಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 75 ಬಿಹೆಚ್‍ಪಿ ಪವರ್ ಮತ್ತು 151 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿತ್ತು. ಕ್ವಾಲಿಸ್ ಮಾದರಿಯಲ್ಲಿ 8 ಪ್ರಯಾಣಿಕರು ಕುಳಿತುಕೊಳ್ಳಬಹುದು.

Most Read Articles

Kannada
English summary
Old Toyota Qualis Mpv Beautifully Restored On Video. Read In Kannada.
Story first published: Wednesday, April 14, 2021, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X