Just In
- 10 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 11 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 12 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 13 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ರೂಪದಲ್ಲಿ ಅನಾವರಣಗೊಂಡ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್ಯುವಿ
ಜಪಾನ್ ಮೂಲದ ಟೊಯೊಟಾ ಕಂಪನಿಯು ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(300 ಸೀರಿಸ್) ಎಸ್ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಸುಧಾರಿತ ಆಫ್-ರೋಡ್ ಕಾರ್ಯಕ್ಷಮತೆಯ ಜೊತೆಗೆ ಉತ್ತಮ ಆನ್-ರೋಡ್ ಸಾಮರ್ಥ್ಯ ಹೊಂದಿರುವ ಎಸ್ಯುವಿಯಾಗಿದೆ.
ಟೊಯೊಟಾ ಲ್ಯಾಂಡ್ ಕ್ರೂಸರ್ ಹೊಸ ಟಿಎನ್ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ, 2022ರ ಟೋಯೊಟಾ ಲ್ಯಾಂಡ್ ಕ್ರೂಸರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.
ಇದರಲ್ಲಿ 3.5-ಲೀಟರ್ರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 3.3-ಲೀಟರ್ ಟ್ವಿನ್-ಟರ್ಬೊ ವಿ6 ಂಜಿನ್ 304 ಬಿಹೆಚ್ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಗೇರ್ ಬಾಕ್ಸ್ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಹಿಂದಿನದಕ್ಕಿಂತ ಶೇ.10 ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
2022ರ ಟೊಯೊಟಾ ಲ್ಯಾಂಡ್ ಕ್ರೂಸರ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಮ್ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್ನ ಮೊದಲ ಮಾದರಿಯಾಗಿದೆ,
2022ರ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಬ್ರ್ಯಾಂಡ್ನ ಹೊಸ ಪ್ರಮುಖ ಎಸ್ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್ಲ್ಯಾಂಪ್ಗಳನ್ನು ಪಡೆಯುತ್ತದೆ.
ಈ ಹೊಸ ಎಸ್ಯುವಿಯ ಒಳಭಾಗದಲ್ಲಿ ದೊಡ್ಡ ಟ್ಯಾಬ್ಲೆಟ್ ಶೈಲಿಯ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಹೊಸ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಪ್ರಸ್ತುತ ಮಾದರಿಯಂತಲ್ಲದೆ 4 ಹೈ ಮತ್ತು 4 ಲೋ ಮೋಡ್ಗಳನ್ನು ಹೊಂದಿರುವ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.
ಎಸ್ಯುವಿಯಲ್ಲಿ ಫಿಸಿಕಲ್ ಡಯಲ್ಗಳನ್ನು ಹೊಂದಿರುವ ಗೇಜ್ ಕ್ಲಸ್ಟರ್ ಮತ್ತು ಇನ್ಫೋ ಡಿಸ್ ಪ್ಲೇ, ಹೀಟಡ್ ಸೀಟುಗಳು, ಜೆಬಿಎಲ್ ಆಡಿಯೋ, ಟೊಯೊಟಾ ಸೇಫ್ಟಿ ಸೆನ್ಸ್ ಪ್ಯಾಕೇಜ್ ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.
ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್ಯುವಿಯು ಉತ್ತಮ ಆಫ್-ರೋಡ್ ಎಸ್ಯುವಿಯಾಗಿದೆ. ಎಲ್ಲಾ ಕಡೆಗಳಲ್ಲಿಯು ಧೈರ್ಯವಾಗಿ ಈ ಕರೆದೊಯ್ಯಬಹುದು. ಮುಂಬರುವ ತಿಂಗಳುಗಳಲ್ಲಿ ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗುತ್ತದೆ. ಈ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ.